Ripponpete | ಬಿವೈಆರ್ ಪರ ಅಕ್ಕ ಪದ್ಮಾವತಿಯಿಂದ ಮನೆ ಮನೆ ಭೇಟಿ – ಮತಯಾಚನೆ
ರಿಪ್ಪನ್‌ಪೇಟೆ; ಮೇ 7 ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯ ಬಿ.ಜೆ.ಪಿ.ಆಭ್ಯರ್ಥಿ ಬಿ.ವೈ.ರಾಘವೇಂದ್ರ ಪರ ಅಕ್ಕ ಪದ್ಮಾವತಿಯವರು ರಿಪ್ಪನ್‌ಪೇಟೆಯಲ್ಲಿ ತಮ್ಮನ ಪರವಾಗಿ ಮತಯಾಚಿಸುವ ಮೂಲಕ ಮನೆಮನೆಗೆ ಭೇಟಿ ನೀಡಿದರು.
ಇಲ್ಲಿನ ವಿಪ್ರ ಮಹಿಳೆಯರೊಂದಿಗೆ ಹೆಬ್ಬಾರ್ ಪಿಕಲ್ಸ್ ಗೆ ಭೇಟಿ ನೀಡಿ ಕಾರ್ಮಿಕರಲ್ಲಿ ತಮ್ಮ ಬಿ.ವೈ.ರಾಘವೇಂದ್ರ ಪರ ಮತಯಾಚಿಸಿ ಕೇಂದ್ರದ ಮೋದಿ ಸರ್ಕಾರ ಘೋಷಿಸಲಾದ ಮಹಿಳಾ ಸಬಲೀಕರಣ ಮತ್ತು ಮುದ್ರ ಯೋಜನೆಯಿಂದ ಸ್ವಾವಲಂಬನೆ ಸೌಲಭ್ಯಗಳ ಕುರಿತು ಮಾಹಿತಿ ನೀಡಿ ಶಿವಮೊಗ್ಗ ಜಿಲ್ಲೆಯ ಸರ್ವಾಂಗೀಣ ಆಭಿವೃದ್ಧಿಯಲ್ಲಿ ನನ್ನ ತಮ್ಮ ಮಾಡಿದಂತಹ ಹಲವು ಜನಹಿತ ಯೋಜನೆಗಳ ಅನುಷ್ಟಾನದಲ್ಲಿ ಶಿವಮೊಗ್ಗ ಸ್ಮಾರ್ಟ್ ಸಿಟಿ ರೈಲ್ವೆ ವಿಮಾನನಿಲ್ದಾಣ ಹಾಗೂ ಸಾಮಾನ್ಯರಿಗೂ ಜಿಲ್ಲೆಯಲ್ಲಿ ಆರೋಗ್ಯ ಸೌಲಭ್ಯಗಳು ದೊರಕುವಂತೆ ಮಾಡಿರುವುದರ ಬಗ್ಗೆ ಸವಿಸ್ತಾರವಾಗಿ ವಿವರಿಸಿ ಈ ಭಾರಿಯಲ್ಲಿ ಸಹ ತಾವು ತಮ್ಮ ಮತವನ್ನು ಕಮಲದ ಚಿಹ್ನೆಯ ಬಿಜೆಪಿ ಪಕ್ಷಕ್ಕೆ ನೀಡಿ ಹೆಚ್ಚಿನ ಅಂತರದಲ್ಲಿ ಗೆಲ್ಲಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಮುಖಂಡ ಆರ್.ಟಿ.ಗೋಪಾಲ, ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಗಾಯಿತ್ರಿ,ಹೊಸನಗರ ತಾಲ್ಲೂಕ್ ಬಿಜೆಪಿ ಆಧ್ಯಕ್ಷ ಸುಬ್ರಹ್ಮಣ್ಯ ಮಾಜಿ ಆಧ್ಯಕ್ಷ ಗಣಪತಿ ಬೆಳಗೋಡು,ರಿಪ್ಪನ್‌ಪೇಟೆ ವಿಪ್ರ ಸಮಾಜದ ಮಹಿಳಾ ವೇದಿಕೆಯ ಪದ್ಮಾಸುರೇಶ್,ತಾಲ್ಲೂಕ್ ಮಹಿಳಾ ಬಿಜೆಪಿ ಆಧ್ಯಕ್ಷರು ಹಾಗೂ ದೀಪಾ ಹೆಚ್.ಎಸ್.ಸುದೀಂದ್ರ ಹೆಬ್ಬಾರ್,ದೇವೇಂದ್ರಪ್ಪಗೌಡ ನೆವಟೂರು,ಲಕ್ಷಿ, ಸರಸ್ವತಿ ಪ್ರೇಮಚಂದ್ರ, ವಾಸುದೇವ ಮಂಗಳೂಕರ್,ದೇವಿಕಿ,ಅಮಿತಾ ಬಲ್ಲಾಳ್, ಎಸ್.ಎನ್.ಬಾಲಚಂದ್ರ,ಸುಜಾತ ಶಿವಾನಂದ,ಹೆಚ್.ಎಸ್.ಸುಧೀಂದ್ರ ಹೆಬ್ಬಾರ್,ಇನ್ನಿತರ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.



