Headlines

ಜೆಡಿಎಸ್ ಹೊಂದಾಣಿಕೆ ಬಿಜೆಪಿಗೆ ಆನೆಬಲ – ಬಿ ವೈ ರಾಘವೇಂದ್ರ | BYR

ಜೆಡಿಎಸ್ ಹೊಂದಾಣಿಕೆ ಬಿಜೆಪಿಗೆ ಆನೆಬಲ – ಬಿ ವೈ ರಾಘವೇಂದ್ರ | BYR

ರಿಪ್ಪನ್‌ಪೇಟೆ;-ಜೆಡಿಎಸ್ ಜೊತೆಗೆ ಹೊಂದಾಣಿಕೆ ಬಿಜೆಪಿಗೆ ಆನೆ ಬಲ ಬಂದಂತಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಹಾಗೂ ಸಂಸದ ಬಿ ವೈ ರಾಘವೇಂದ್ರ ಹೇಳಿದರು.


ರಿಪ್ಪನ್‌ಪೇಟೆ ಸಮೀಪದ ಅಮೃತ ಗ್ರಾಮದಲ್ಲಿ ಆಯೋಜಿಸಲಾದ ಲೋಕಸಭಾ ಚುನಾವಣೆಯ ಬಹಿರಂಗ ಪ್ರಚಾರ ಸಭೆಯಲ್ಲಿ ಮತಯಾಚಿಸಿ ಮಾತನಾಡಿದ ಅವರು ಅವರು ಹಲವು ವರ್ಷಗಳ ಕಾಲ ಬಿಜೆಪಿಯ ತತ್ವ ಸಿದ್ಧಾಂತವನ್ನು ದ್ವೇಷಿಸುತ್ತಿದ್ದ ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟಂತಹ ಒಂದು ಕರೆಗೆ ರಾಷ್ಟ್ರದ ಹಿತ ದೃಷ್ಟಿಯಿಂದ ಬಿಜೆಪಿಯೊಂದಿಗೆ ಕೈಜೋಡಿಸಿರುವುದು ಅತ್ಯಂತ ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.


ರಾಷ್ಟ್ರದ ಹಿತ ದೃಷ್ಟಿಯಿಂದ ಕಾಂಗ್ರೆಸ್ಸೇತರ ಪಕ್ಷಗಳು ಒಂದಾಗಬೇಕು ಎಂಬ ನರೇಂದ್ರ ಮೋದಿಯವರ ಮನವಿಗೆ ಸ್ಪಂದಿಸಿದ ಮಾಜಿ ಪ್ರಧಾನಿ ದೇವೇಗೌಡ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಈ ಇಳಿ ವಯಸ್ಸಿನಲ್ಲಿಯೂ ಕೂಡ ರಾಜ್ಯ ಸುತ್ತುವ ಮೂಲಕ ಎರಡು ಪಕ್ಷಗಳ ಅಭ್ಯರ್ಥಿಯ ಗೆಲುವಿಗೆ ಹಗಲು ಎನ್ನದೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು
ದೇಶದ ರಕ್ಷಣೆಗಾಗಿ ಮಹಿಳೆಯರ ರೈತರ ಕಲ್ಯಾಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಅಭಿವೃದ್ಧಿ ಕಾರ್ಯಗಳು ಆಗಲು ಸಾಧ್ಯ ಎಂಬುದನ್ನು ಅರಿತಿರುವ ಜಾತ್ಯತೀತ ಜನತಾದಳದ ಮುಖಂಡರು ಇಂದು ನಮ್ಮೊಂದಿಗೆ ಕೈಜೋಡಿಸುವ ಮೂಲಕ ಒಳ್ಳೆಯ ಬೆಳವಣಿಗೆಗೆ ನಾಂದಿ ಹಾಡಿದ್ದಾರೆ ಎಂದು ಹೇಳಿದರು.

ವಿಶ್ವವೇ ಗಮನಹರಿಸುತ್ತಿದೆ ಅತ್ಯಂತ ಹಿಂದುಳಿದ ರಾಷ್ಟ್ರಗಳಲ್ಲಿ ಒಂದಾಗಿದ್ದ ಭಾರತ ಇಂದು ಮುಂದುವರಿದ ರಾಷ್ಟ್ರಗಳ ಸಾಲಿನಲ್ಲಿ ತಲೆ ಎತ್ತಿ ನಿಂತಿದೆ ಇದಕ್ಕೆ ಮೋದಿಯವರ ಆಡಳಿತ ಶೈಲಿಯೇ ಕಾರಣವಾಗಿದೆ ಇಂದು ವಿಶ್ವದ ಎಲ್ಲಾ ರಾಷ್ಟ್ರಗಳು ಭಾರತದ ನೋಡುವಂತಹ ಕಾರ್ಯವನ್ನ ಮಾಡುತ್ತಿವೆ ಆಮಟ್ಟಕ್ಕೆ ಭಾರತ ಬೆಳೆದು ನಿಂತಿರುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿ ಆಗಿದೆ ಎಂದು ಹೇಳಿದರು.

ಯಾವುದೇ ಹೊಸ ಯೋಜನೆಯನ್ನ ಜಾರಿಗೆ ತರಲಿಲ್ಲ ಆದರೆ ಕಳೆದ ಹತ್ತು ವರ್ಷಗಳಲ್ಲಿ ಹತ್ತು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಸರ್ವ ಜನಾಂಗಕ್ಕೆ ಅನುಕೂಲವಾಗುವಂತಹ ನೂರಾರು ಯೋಜನೆಗಳನ್ನ ಜಾರಿಗೆ ತಂದಿದ್ದಾರೆ ಇದರ ಪರಿಣಾಮವಾಗಿ ಇಂದು ದೇಶದ ಎಲ್ಲಾ ಸಮುದಾಯಗಳು ಅತ್ಯಂತ ನೆಮ್ಮದಿಯಿಂದಜೀವನ ನಡೆಸುವಂತಾಗಿದೆ ಎಂದು ಹೇಳಿದರು.

ದೇಶದ ವರ್ಷದ ಬಜೆಟ್ 48 ಲಕ್ಷ ಕೋಟಿ ರೂ ಅದರೆ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ದೇಶದ ಎಲ್ಲ ಮಹಿಳೆಯರಿಗೆ ಲಕ್ಷ ರೂ ಗ್ಯಾರಂಟಿ ಎಂದು ಘೋಷಿಸಲಾಗಿದ್ದು 68 ಕೋಟಿ ಮಹಿಳೆಯರು ಇರುವ ದೇಶದಲ್ಲಿ ತಲಾ ಒಂದು ಲಕ್ಷ ರೂ ಗ್ಯಾರಂಟಿ ಕೊಡುವ ಯೋಜನೆಗೆ 68 ಲಕ್ಷ ಕೋಟಿ ರೂ ಕೊಡಬೇಕಾಗುತ್ತದೆ ಹಾಗಾದರೆ ಆ ಹಣ ಎಲ್ಲಿಂದ ಕೊಡಲು ಸಾಧ್ಯ ಎಂದು ಕೇಳಿದಾಗ ಎಚ್ಚತ್ತ ಕಾಂಗ್ರೆಸ್ ಕುಟುಂಬದ ಓರ್ವ ಮಹಿಳೆಗೆ ಎಂದು ಹೇಳಿಕೊಳ್ಳುತ್ತಿರುವ ಕಾಂಗ್ರೆಸ್ ಪಕ್ಷದವರು ಮುಗ್ದ ಮನಸ್ಸಿನ ಮಹಿಳೆಯರನ್ನು ದುರ್ಬಳಕೆ ಮಾಡಿಕೊಳ್ಳುವ ಹುನ್ನಾರದಲ್ಲಿ ಕಾಂಗ್ರೆಸ್ ಪ್ರಯತ್ನಿಸುತ್ತಿದೆ ಎಂದರು.

ಮಾಜಿ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿರುವ ಬಿ.ವೈ.ರಾಘವೇಂದ್ರ ತನ್ನ ಚಿಕ್ಕವಯಸ್ಸಿನಲ್ಲಿಯೇ ಶಿವಮೊಗ್ಗ  ಜಿಲ್ಲೆಯ ಸರ್ವಾಂಗೀಣ ಆಭಿವೃದ್ದಿಗೆ ಟೊಂಕಕಟ್ಟಿ ನಿಂತಿದ್ದಾರೆ.ಬಡವರ ಬಗರ್ ಹುಕುಂ ರೈತರ ಪರವಾಗಿ ಕೇಂದ್ರ ಸರ್ಕಾರದ ಸಂಪುಟ ಸಭೆಯಲ್ಲಿ ಸಾಕಷ್ಟು ಭಾರಿ ಗಮನಸೆಳೆದು ಆದಕ್ಕೊಂದು ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ.ಅಲ್ಲದೇ ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಭದ್ರಾವತಿ ವಿ.ಐ.ಎಸ್.ಎಲ್.ಮತ್ತು ಎಂ.ಪಿ.ಎಂ.ಹಾಗೂ ಹೊಸನಗರ ಸಾಗರ ಕುಂದಾಪುರ ಉಡುಪಿ ಮಂಗಳೂರು ಸಂಪರ್ಕದ ತುಮರಿ ಸೇತುವೆ ರಾಷ್ಟಿçÃಯ ಹೆದ್ದಾರಿಗಳ ಆಭಿವೃದ್ದಿಗಾಗಿ ಕೆಂದ್ರದಿಂದ ಹೆಚ್ಚಿನ ಅನುದಾನ ತರುವುದರೊಂದಿಗೆ ಅಭಿವೃದ್ದಿ ಪಡಿಸುತ್ತಿದ್ದಾರೆ.ಜಾತಿ ಭೇದ ಭಾವನೆ ತೊರದೆ ಅಲ್ಪಸಂಖ್ಯಾತರ ಮತ್ತು ಈಡಿಗಾ ಮಡಿವಾಳ ಒಕ್ಕಲಿಗ ಪೂಜಾರಿ ಲಿಂಗಾಯಿತ ಬಣಜಿಗ ಲಂಬಾಣಿ ತಾಂಡ ಹೀಗೆ ಎಲ್ಲ ಸಮುದಾಯದವರ ಸಮುದಾಯ ಭವನಗಳಿಗೆ ಹೆಚ್ಚಿನ ಅನುದಾನವನ್ನು ಕೊಡಿಸುವುದರೊಂದಿಗೆ ಅವರ ತಂದೆಯಂತೆ ಮಗನೂ ಸಹ ಜನಮನ್ನಣೆ ಗಳಿಸಿರುವ ಯುವನಾಯಕ ರಾಘವೇಂದ್ರರನ್ನು ಈ ಭಾರಿಯಲ್ಲಿ ಗೆಲ್ಲಿಸಿ ಮತ್ತೊಮ್ಮ ಮೋದಿ ನೇತೃತ್ವದ ಸರ್ಕಾರದ ಪ್ರತಿನಿಧಿಯಾಗಿ ಹೊರಹೊಮ್ಮುವಂತೆ ಮಾಡುವುದು ಮತದಾರರ ಮುಂದೆಯಿದೆ ಎಂದು ಹೇಳಿ ತಮ್ಮ ಮತವನ್ನು ಎರಡು ನಂಬರ್ ಗುರುತಿಗೆ ಹಾಕುವಂತೆ ಮನವಿ ಮಾಡಿದರು.

ನಯಾಪೈಸೆ ಕೊಡದ ರಾಜ್ಯಸರ್ಕಾರ;-ರಾಜ್ಯದ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕರ ಅಧಿಕಾರಕ್ಕೆ ಬಂದು 9 ಹತ್ತು ತಿಂಗಳಾದರೂ ಕೂಡ ಆಭಿವೃದ್ದಿ ಕಾರ್ಯಗಳಿಗೆ ನಯಾಪೈಸೆ ಸಹ ನೀಡಿಲ್ಲ.ಗ್ಯಾರಂಟಿ ಹೆಸರಿನಲ್ಲಿ ಜನರ ಜೇಬಿಗೆ ಕತ್ತರಿ ಹಾಕಿದೆ.ಕುಡುಕನೋರ್ವ ನಾನು ದಿನಕ್ಕೆ ಒಂದು ಕ್ವಾಟ್ರೂ ಎಣ್ಣೆ ಕುಡಿಯುತ್ತಿದ್ದೆ ಆದನ್ನು ಏಕಾಏಕಿ ಹೆಚ್ಚಿಸಿದ್ದು ದಿನಕ್ಕೆ 100 ರೂ ಮೊತ್ತದಲ್ಲಿ ಕೊಂಡು ಕುಡಿಯುತ್ತಾ ಸರ್ಕಾರಕ್ಕೆ ಲೆಕ್ಕ ತಿಂಗಳಿಗೆ 3000 ಸಾವಿರ ಹಣ ಕೊಡುತ್ತೇನೆ ಅದರೆ ಸಿದ್ದರಾಮಯ್ಯ ಸರ್ಕಾರ ಮಹಿಳೆಯರಿಗೆ ಕೊಡುವ 2000 ರೂ ನಿಂದ ನಾನೇ ಸಿದ್ದರಾಮಯ್ಯ ಸರ್ಕಾರಕ್ಕೆ 1 ಸಾವಿರ ಸಾಲ ಕೊಡುತ್ತಿದ್ದೇನೆಂದು ಲೆಕ್ಕ ಹಾಕಿ ಹೇಳಿದ ಎಂದು ಸಭೆಯಲ್ಲಿ ಹಾಸ್ಯ ಚಟಾಕಿ ಹಾರಿಸಿದರು.

ಸಭೆಯಲ್ಲಿ ಜಿಲ್ಲಾ ಬಿಜೆಪಿ ಮುಖಂಡ ಹರಿಕೃಷ್ಣ,ತಾಲ್ಲೂಕ್ ಬಿಜೆಪಿ ಆಧ್ಯಕ್ಷ ಸುಬ್ರಹ್ಮಣ್ಯ ಮತ್ತಿಮನೆ, ಶಿವಮೊಗ್ಗ ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಆಧ್ಯಕ್ಷೆ ಗೀತಾ ಸತೀಶ್,ಪಕ್ಷದ ಮುಖಂಡರಾದ ಆರ್.ಟಿ.ಗೋಪಾಲ, ಮಾಜಿ ಆಧ್ಯಕ್ಷ ಗಣಪತಿ ಬೆಳಗೋಡು ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಬಿ.ಎಸ್.ಪುರುಷೋತ್ತಮ್‌ರಾವ್, ಸುರೇಶ ಸ್ವಾಮಿರಾವ್,ಜಿಲ್ಲಾ ಎಸ್.ಎಸ್.ಟಿ.ಮೋರ್ಚಾ ಆಧ್ಯಕ್ಷೆ ಉಷಾ ನಾರಾಯಣ, ಉಮೇಶ್‌ಕಂಚುಗಾರ್, ಎ.ವಿ.ಮಲ್ಲಿಕಾರ್ಜುನ,ಹಕ್ರೆ ಮಲ್ಲಿಕಾರ್ಜುನ, ಹಾಲಗದ್ದೆಉಮೆಶ್,ತಾಲ್ಲೂಕ್ ಪಂಚಾಯ್ತಿ ಮಾಜಿ ಆಧ್ಯಕ್ಷ ವೀರೇಶ್ ಅಲುವಳ್ಳಿ, ಬಿಕ್ಕಮಣತಿ ಬಿ.ಯುವರಾಜ್,ಹುಂಚಾ ಹೋಬಳಿ ಘಟಕದ ಅಧ್ಯಕ್ಷ ವಿನಾಯಕಹುಂಚ, ಎಂ.ಸುರೇಶಸಿಂಗ್,ಚಿಟ್ಟೆಗದ್ದೆ ಪುರುಷೋತ್ತಮ್, ಜೆಡಿಎಸ್ ತಾಲ್ಲೂಕ್ ಆಧ್ಯಕ್ಷ ಎನ್.ವರ್ತೇಶ್ ಇನ್ನಿತರರು ಸಭೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

Exit mobile version