Headlines

Ripponpete | ಚೌಡೇಶ್ವರಿ ದೇವಸ್ಥಾನದಲ್ಲಿ ಲೋಕಕಲ್ಯಾರ್ಥ ಚಂಡಿಕಾ ಹೋಮ ಧಾರ್ಮಿಕ ಕಾರ್ಯಕ್ರಮ ಸಂಪನ್ನ | ಶಾಸಕ ಬೇಳೂರು ಭೇಟಿ

Ripponpete | ಚೌಡೇಶ್ವರಿ ದೇವಸ್ಥಾನದಲ್ಲಿ ಲೋಕಕಲ್ಯಾರ್ಥ ಚಂಡಿಕಾ ಹೋಮ ಧಾರ್ಮಿಕ ಕಾರ್ಯಕ್ರಮ ಸಂಪನ್ನ | ಬೇಳೂರು ಭೇಟಿ


ರಿಪ್ಪನ್‌ಪೇಟೆ;-ಇಲ್ಲಿನ ಬರುವೆ ಗ್ರಾಮದಲ್ಲಿನ ಶ್ರೀಚೌಡೇಶ್ವರಿ ದೇವಸ್ಥಾನ ಶಿಲಾಮಯ ದೇವಸ್ಥಾನವಾಗಿ ಜೀರ್ಣೋದ್ದಾರಗೊಳಿಸಲಾಗಿದ್ದು ಅಷ್ಟಬಂಧ ಸಹಿತ ಪುನರ್ ಸಪರಿಹಾರ ಸಹಿತ ಚೌಡೇಶ್ವರಿ ದೇವಿಯ ಮತ್ತು ಪ್ರತಿಷ್ಟಾಪನಾ ಮಹೋತ್ಸವ ಕಾರ್ಯಕ್ರಮವು ಶಿವಮೊಗ್ಗದ ವಸಂತಭಟ್ಟರಯ ಮತ್ತು ಸಂಗಡಿಗರ ಪೌರೋಹಿತದಲ್ಲಿ  ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಸಂಪನ್ನಗೊಂಡಿತು.

ಇಂದು ಬೆಳಗ್ಗೆ ದೇವಿಯ ಸನ್ನಿಧಿಯಲ್ಲಿ ಲೋಕಕಲ್ಯಾರ್ಥ  ಚಂಡಿಕಾ ಹೋಮ,ಕಲಾತತ್ವ ಹೋಮಾದಿಗಳು ಪರಿಕಲಶ ಸಹಿತ ಬ್ರಹ್ಮಕಲಶಾಭಿಷೇಕ ಮಹಾಪೂಜೆ ಮದ್ಯಾಹ್ನ 12.30 ಕ್ಕೆ ಚಂಡಿಕಾ ಹೋಮದ ಪೂರ್ಣಾಹುತಿ ತೀರ್ಥಪ್ರಸಾದ ವಿನಿಯೋಗ ಹಾಗೂ ಸಾಮೂಹಿಕ ಅನ್ನ ಸಂತರ್ಪಣೆ ಜರುಗಿತು.

ಸಂಜೆ ಅಲಸೆ ಶ್ರೀಚಂಡಿಕೇಶ್ವರಿ ಯಕ್ಷಗಾನ ಮಂಡಳಿಯವರಿಂದ ಕ್ಷೇತ್ರ ಮಹಾತ್ಮೆ ಎಂಬ ಕಾಲಮಿತಿ ಪೌರಾಣಿಕ ಯಕ್ಷಗಾನ ಪ್ರದರ್ಶನ ಜರುಗಿತು.

ಚೌಡೇಶ್ವರಿ ದೇವಿಯ ದರ್ಶನ ಪಡೆದ ಶಾಸಕ ಬೇಳೂರು


ಚೌಡೇಶ್ವರಿ ದೇವಸ್ಥಾನದ ಅಷ್ಟಬಂಧ ಸಹಿತ ಪುನರ್ ಸಪರಿಹಾರ ಸಹಿತ ಚೌಡೇಶ್ವರಿ ದೇವಿಯ ಮತ್ತು ಪ್ರತಿಷ್ಟಾಪನಾ ಮಹೋತ್ಸವ ಕಾರ್ಯಕ್ರಮದ ಹಿನ್ನಲೆಯಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ ನೀಡಿ ದೇವರ ದರ್ಶನ ಪಡೆದರು.


ಈ ಸಂಧರ್ಭದಲ್ಲಿ ಚೌಡೇಶ್ವರಿ ದೇವಸ್ಥಾನದ ಸಮಿತಿಯವರು ಶಾಸಕರಿಗೆ ಸನ್ಮಾನಿಸಿ ಗೌರವಿಸಿದರು.

ಈ ಸಂಧರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷರು ,ಸದಸ್ಯರು ಹಾಗೂ ಮುಖಂಡರು ಇದ್ದರು.


Leave a Reply

Your email address will not be published. Required fields are marked *

Exit mobile version