Headlines

Ripponpete | ಕಾಂಗ್ರೆಸ್ ಅಭ್ಯರ್ಥಿಯ ರೋಡ್ ಷೋಗೆ ಹರಿದು ಬಂದ ಜನಸಾಗರ

Ripponpete | ಕಾಂಗ್ರೆಸ್ ಅಭ್ಯರ್ಥಿಯ ರೋಡ್ ಷೋಗೆ ಹರಿದು ಬಂದ ಜನಸಾಗರ


ಮೋದಿ ಹೆಸರಿನಲ್ಲಿ ಮತ ಕೇಳುವ ಸಂಸದರಿಗೆ ನಾಚಿಕೆಯಾಗಬೇಕು – ಶಾಸಕ ಬೇಳೂರು

ರಿಪ್ಪನ್‌ಪೇಟೆ : ಕಳೆದ 10 ವರ್ಷಗಳಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರದಿಂದ ಯಾವುದೇ ಅನುದಾನವನ್ನು ತರದೇ ಅಭಿವೃದ್ದಿಯನ್ನು ಮಾಡದೇ ನಿರ್ಲಕ್ಷö್ಯ ವಹಿಸಿರುವ ಬಿ.ವೈ.ರಾಘವೇಂದ್ರ ಈ ಭಾರಿಯ ಚುನಾವಣೆಯಲ್ಲಿ ಮತದಾರರ ಬಳಿ ಮತ ಕೇಳಲು ಹೋದರೆ ಮುಖಕ್ಕೆ ಮಂಗಳಾರತಿ ಮಾಡುತ್ತಾರೆಂಬ ಭಯದಿಂದ ಮೋದಿ ಮುಖ ತೋರಿಸಿ ಮತ ಕೇಳುತ್ತಿದ್ದಾರೆ, ನಾಚಿಕೆಯಾಗಬೇಕು ಇವರಿಗೆ ಎಂದು ಶಾಸಕ ಹಾಗೂ ರಾಜ್ಯ ಆರಣ್ಯ ಕೈಗಾರಿಕಾಭಿವೃದ್ದಿ ನಿಗಮದ ಆಧ್ಯಕ್ಷ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.


ರಿಪ್ಪನ್‌ಪೇಟೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಆಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಪರ ರೋಡ್‌ಷೋ ನಡೆಸಿ ವಿನಾಯಕ ವೃತ್ತದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿ ರಾಜ್ಯದ ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಕಳೆದ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಂತೆ ಕೊಟ್ಟ ಭರವಸೆಯನ್ನು ಈಡೇರಿಸಿದ್ದು ಈ ಭಾರಿ ಕೇಂದ್ರದಲ್ಲಿ ಆಧಿಕಾರಕ್ಕೆ ಬಂದರೆ ಇನ್ನೂ ಹೆಚ್ಚಿನ ಗ್ಯಾರೆಂಟಿಗಳನ್ನು ಜಾರಿಗೊಳಿಸುವುದಾಗಿ ಭರವಸೆ ನೀಡಿದರು.


ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪನವರು ಸದಾ ಬಡಜನರ ಪರವಾಗಿ ಅನುಷ್ಟಾನಗೊಳಿಸಲಾದ ಹಲವು ಜನಪರ ಕಾರ್ಯಕ್ರಮಗಳು ಇನ್ನೂ ಜನಮನದಲ್ಲಿ ಆಚ್ಚಳಿಯದೆ ಉಳಿದಿದ್ದು ಆವರ ಅಭಿವೃದ್ಧಿ ಸಾಧನೆಗಳು ಮಾತನಾಡುವಂತೆ ಮಾಡಿವೆ ಆ ನಿಟ್ಟಿನಲ್ಲಿ ಗೀತಕ್ಕ ಗೆದ್ದು ಬಂದರೆ ಜಿಲ್ಲೆಯಲ್ಲಿನ ಹಲವು ಜ್ವಲಂತ ಸಮಸ್ಯೆಗಳಾದ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸುವ ಮೂಲಕ ಭದ್ರಾವತಿ ವಿಐಎಸ್‌ಎಲ್ ಎಂ.ಪಿ.ಎA ಹೀಗೆ ಹತ್ತು ಹಲವು ಆಭಿವೃದ್ಧಿ ಕಾರ್ಯಗಳ ಕುರಿತು ಲೋಕಸಭೆಯಲ್ಲಿ ಚರ್ಚಿಸಿ ಪರಿಹರಿಸುವ ಆಶಾಭಾವನೆ ನಮಗಿದೆ ಆ ಕಾರಣ ತಾವು ಈ ಭಾರಿ ಗೀತ ಶಿವರಾಜ್ ಬೆಂಬಲಿಸಿ ಸಂಸತ್ ಭವನಕ್ಕೆ ಕಳುಹಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.

ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಮತಯಾಚಿಸಿ ನಾನು ನಿಮ್ಮೂರ ಮಗಳು ಬಂಗಾರಪ್ಪಾಜಿಯವರ ರಾಜಕೀಯ ಹೋರಾಟಗಾರನ ಮಗಳಾಗಿ ನನಗೆ ಜಿಲ್ಲೆಯ ಸರ್ವಾಂಗೀಣಾಭಿವೃದ್ದಿಯೊಂದಿಗೆ ಕ್ಷೇತ್ರದಲ್ಲಿಯೇ ಇದ್ದು ಬಡಜನರ ಸೇವಾ ಕಾರ್ಯಕ್ಕೆ ನನಗೆ ಆಶೀರ್ವಾದ ಮಾಡಿ ನಿಮ್ಮ ಸೇವೆಯನ್ನು ಮಾಡಲು ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.

ಪತ್ನಿ ಪರವಾಗಿ ಚಿತ್ರ ನಟ ಶಿವರಾಜ್ ಕುಮಾರ್ ಮತ್ತು ನಟ ದುನಿಯಾ ವಿಜಯ್ ಮಾತನಾಡಿ ಗೀತಾ ಶಿವರಾಜ್ ಕುಮಾರ್ ನಿಮ್ಮೂರ ಮಗಳು ಬೇರೆ ಯಾರು ಅಲ್ಲ ಈ ಭಾರಿ ಒಂದು ಅವಕಾಶ ಮಾಡಿಕೊಡಿ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಹಲವು ಜನಪರ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಮನೆಮನೆಗೆ ತಲುಪಿಸುವ ಕೆಲಸ ಮಾಡಿ ದೇಶದಲ್ಲಿ ಹಿಂದೂ ವಿರೋಧಿ ಸರ್ಕಾರವನ್ನು ಕಿತ್ತು ಎಸೆಯಲ್ಲೂ ಎಲ್ಲರೂ ಇಂದೇ ಸಂಕಲ್ಪಿಸಿ ಎಂದು ಮನವಿ ಮಾಡಿದರು.

ಪಕ್ಷದ ಮುಖಂಡರಾದ ಬಿ.ಜಿ.ಚಂದ್ರಮೌಳಿಗೌಡರು,ಬಿ ಪಿ ರಾಮಚಂದ್ರ , ಗಣಪತಿ ಗವಟೂರು, ಹೆಚ್.ವಿ.ಈಶ್ವರಪ್ಪ ಗೌಡ,ಅಮೀರ್ ಹಂಜಾ, ಡಿ.ಈ.ಮಧುಸೂದನ್, ಕೆರೆಹಳ್ಳಿ ರವೀಂದ್ರ,ಶ್ರೀಧರ್,ಆಶೀಫ್ ಭಾಷಾ,ಉಮಾಕರ್ ,ಎಂ ಎಂ ಪರಮೇಶ್ , ಉಲ್ಲಾಸ್ , ಸೂಡೂರು ಶಿವಣ್ಣ ,ವಾಹಿದ್ ,ರಾಜು ಗೌಡ , ರಮೇಶ್ ಪ್ಯಾನ್ಸಿ, ಲೇಖನ ಚಂದ್ರನಾಯ್ಕ್, ಗೀತಾ ಲಿಂಗಪ್ಪ, ಗೌರಮ್ಮ ಇನ್ನಿತರ ಕಾಂಗ್ರೆಸ್ ಪಕ್ಷದ ಮುಖಂಡರು  ಸಭೆಯಲ್ಲಿ ಪಾಲ್ಗೊಂಡಿದ್ದರು

Leave a Reply

Your email address will not be published. Required fields are marked *

Exit mobile version