ಸಾವು ಗೆದ್ದ ಬಂದ ಸಾತ್ವಿಕ್ – ಕೊಳವೆ ಬಾವಿಗೆ ಬಿದ್ದ ಮಗು ರಕ್ಷಣೆ : ಫಲಿಸಿತು ಕರುನಾಡ ಜನರ ಪ್ರಾರ್ಥನೆ | sathwik who fell into a tubewell and was rescued after 21 hours of continuous effort

ಸಾವು ಗೆದ್ದ ಬಂದ ಸಾತ್ವಿಕ್ – ಕೊಳವೆ ಬಾವಿಗೆ ಬಿದ್ದ ಮಗು ರಕ್ಷಣೆ : ಫಲಿಸಿತು ಕರುನಾಡ ಜನರ ಪ್ರಾರ್ಥನೆ | sathwik


ಕೊನೆಗೂ ಫಲಿಸಿತು ಕರುನಾಡಿನ ಪ್ರಾರ್ಥನೆ, ಸತತ 22ಗಂಟೆಗಳ ಕಾರ್ಯಾಚರಣೆ ನಂತರ ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಮಗು ಸ್ವಾತ್ವಿಕ್ ರಕ್ಷಣೆ ಮಾಡಲಾಗಿದೆ.

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಮಗುವನ್ನು ಸತತ 21 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ ಮಾಡಲಾಗಿದ್ದು, ಹೈದರಾಬಾದಿನ ಎಂದ ಎನ್ ಡಿ ಆರ್ ಎಫ್ ತಂಡ ಕಾರ್ಯಾಚರಣೆ ಬಳಿಕ ಮಗುವನ್ನು ಸುರಕ್ಷಿತವಾಗಿ ಕೊಳವೆ ಬಾವಿಯಿಂದ ಹೊರ ತೆಗೆಯಲಾಗಿದೆ.

ನಿನ್ನೆ ಗ್ರಾಮದ ಶಂಕರಪ್ಪ ಮುಜಗೊಂಡ ಎನ್ನುವವರ ಜಮೀನಿನಲ್ಲಿ ಕೊಳವೆ ಬಾವಿಯಲ್ಲಿ ಎರಡು ವರ್ಷದ ಬಾಲಕ ಸಾತ್ವಿಕ್ ಸುಮಾರು 15ರಿಂದ 20 ಅಡಿ ಆಳದಲ್ಲಿ ಬಿದ್ದಿದ್ದ. ಬಳಿಕ ಕಾರ್ಯಾಪ್ರವೃತ್ತರಾ ಅಧಿಕಾರಿಗಳು ಎರಡು ಹಿಟಾಚಿ ಮೂರು ಜಿಸಿಬಿ ಗಳಿಂದ ಸಾತ್ವಿಕನ ರಕ್ಷಣೆಗಾಗಿ ಕಾರ್ಯಾಚರಣೆ ನಡೆಲಾಗಿತ್ತು. ಅಲ್ಲದೆ ಎಸ್ ಡಿ ಆರ್ ಎಫ್ ತಂಡ ಕೂಡ ಸ್ಥಳದಲ್ಲಿ ಬೀಡು ಬಿಟ್ಟು ಕಾರ್ಯಚರಣೆ ನಡೆಸಿದೆ. ಅಲ್ಲದೆ ಇಂಡಿ ಗ್ರಾಮಾಂತರ ಪೊಲೀಸ್ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಕೂಡ ಸ್ಥಳದಲ್ಲಿ ಕಾರ್ಯಚರಣೆಯಲ್ಲಿ ನಿರತರಾಗಿದ್ದರು.

ಇನ್ನೂರಕ್ಷಣಾ ಕಾರ್ಯಚರಣೆ ವೇಳೆಯಲ್ಲಿ ಮಗುವಿನ ಶಬ್ದವನ್ನು ಕೇಳಿಸಿಕೊಂಡು ಸಿಬ್ಬಂದಿಗಳು ಕೆಲಸ ಮಾಡುತ್ತಿದ್ದರು, ಇದು ಮಗುವನ್ನು ಉಳಿಸುವುದಕ್ಕೆ ಎಲ್ಲರ ಮನಸ್ಸು ದಾಂಗುಡಿ ಇಡುತಿತ್ತು, ಇನ್ನೂ ಮಗುವನ್ನು ಅಂಬ್ಯುಲೆನ್ಸ್‌ ಮೂಲಕ ಆಸ್ಪತ್ರೆಗೆ ದಾಖಲು ಮಾಡಲಾಗುವುದು ಎನ್ನಲಾಗಿದೆ. ಸದ್ಯ ಮಗುವಿಗೆ ಪ್ರಾಥಮಿಕ ಚಿಕಿತ್ಸೆಯನ್ನು ನೀಡಲಾಗುವುದು ಅಂಥ ವೈದ್ಯರು ತಿಳಿಸಿದ್ದಾರೆ.

ಇನ್ನೂ ಕೊಳವೆ ಬಾವಿಯಲ್ಲಿ ಬಿದ್ದಿರುವ ಎರಡು ವರ್ಷದ ಬಾಲಕ ಜೀವಂತವಾಗಿ ಹೊರಬರಲೆಂದು ಲಕ್ಷಣ ಗ್ರಾಮದಲ್ಲಿ ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ಗ್ರಾಮದ ಯುವಕರು ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ಮಾಡಿದ್ದಾರೆ ಅಲ್ಲದೆ ಇಡೀ ಕರುನಾಡಿನ ಜನತೆಯ ಕೂಡ ಸಾತ್ವಿಕ್ ಸಾವನ್ನು ಗೆದ್ದು ಬರಲಿ ಎಂದು ಪ್ರಾರ್ಥಿಸುತ್ತಿದ್ದರು.

ಜಿಲ್ಲೆಯಲ್ಲಿ ಇದು 3ನೇ ಪ್ರಕರಣ : ಇಂದಿನ ಪ್ರಕರಣಕ್ಕೂ ಮುಂಚೆ ಇಂತಹ ಎರಡು ಪ್ರಕರಣಗಳು ವಿಜಯಪುರ ಜಿಲ್ಲೆಯಲ್ಲಿ ನಡೆದಿದ್ದವು. 2008 ಮತ್ತು 2014ರಲ್ಲಿಕೊಳವೆ ಬಾವಿ ದುರಂತಗಳು ಸಂಭವಿಸಿದ್ದವು. 2008 ರಲ್ಲಿ ಚಡಚಣ ತಾಲೂಕಿನ ದೇವರನಿಂಬರಗಿ ಗ್ರಾಮದಲ್ಲಿ ಕಾಂಚನಾ ಉರ್ಪ್ ಏಗವ್ವ ಎನ್ನುವ ಬಾಲಕಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಳು. ಜೆಸಿಬಿಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗಿತ್ತು. ಆದ್ರೆ, ಮಗು ಮೃತಪಟ್ಟಿತ್ತು.

ಬಳಿಕ ಇಂಥದ್ದೇ ಘಟನೆ 2014 ರಲ್ಲಿ ವಿಜಯಪುರ ತಾಲೂಕಿನ ದ್ಯಾಬೇರಿ ಗ್ರಾಮದಲ್ಲಿ ನಡೆದಿತ್ತು. ಆಟವಾಡುವ ವೇಳೆ 3 ವರ್ಷದ ಬಾಲಕಿ ಅಕ್ಷತಾ ಹನುಮಂತ ಪಾಟೀಲ್ ತೆರೆದ ಕೊಳವೆ ಬಾವಿಗೆ ಬಿದ್ದಿದ್ದಳು. ಅಕ್ಷತಾ ರಕ್ಷಣಾ ಕಾರಾಚರಣೆ ನಡೆದರೂ ಫಲ ಸಿಕ್ಕಿರಲಿಲ್ಲ. ಜೆಸಿಬಿಗಳ ಮೂಲಕ ಕಾರ್ಯಾಚರಣೆ ನಡೆಸಿದ್ದರೂ ಅಕ್ಷತಾ ಬದುಕಿ ಬರಲಿಲ್ಲ. ಇದು ಇದೀಗ ಜಿಲ್ಲೆಯಲ್ಲಿ ಮೂರನೇ ಪ್ರಕರಣವಾಗಿದೆ.
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಸಾಗರ ತಾಲೂಕಿನ ಮಡಸೂರಿನಲ್ಲಿ ವ್ಯಕ್ತಿ ಹತ್ಯೆ: ಅಡಿಕೆ ತೋಟಕ್ಕೆ ಔಷಧಿ ಹೊಡೆಯಲು ತೆರಳಿದ್ದ ವೇಳೆ ಕೃತ್ಯ

ಸಾಗರ ತಾಲೂಕಿನ ಮಡಸೂರಿನಲ್ಲಿ ವ್ಯಕ್ತಿ ಹತ್ಯೆ: ಅಡಿಕೆ ತೋಟಕ್ಕೆ ಔಷಧಿ ಹೊಡೆಯಲು ತೆರಳಿದ್ದ ವೇಳೆ ಕೃತ್ಯ A man identified…

2 days ago

ಚಾನೆಲ್‌ನಲ್ಲಿ ಈಜಲು ತೆರಳಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನೀರುಪಾಲು

ಚಾನೆಲ್‌ನಲ್ಲಿ ಈಜಲು ತೆರಳಿದ್ದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ನೀರುಪಾಲು SSLC student Krishna drowned while swimming in Tunga Channel…

2 days ago

ಶಿವಮೊಗ್ಗದಲ್ಲಿ ಶಾಂತಿಯುತವಾಗಿ ನಡೆದ ಈದ್ ಮಿಲಾದ್ ಮೆರವಣಿಗೆ

ಶಿವಮೊಗ್ಗದಲ್ಲಿ ಶಾಂತಿಯುತವಾಗಿ ನಡೆದ ಈದ್ ಮಿಲಾದ್ ಮೆರವಣಿಗೆ Shivamogga witnessed a grand and peaceful Eid Milad procession…

2 days ago

ಹುಂಚ ಆಸ್ಪತ್ರೆಯ ಶವಾಗಾರಕ್ಕೆ ಕೊನೆಗೂ ‘ಮುಹೂರ್ತ’: DHO ಭೇಟಿ, ಬಾಕಿ ಕಾಮಗಾರಿ ಆರಂಭ

ಹುಂಚ ಶವಾಗಾರಕ್ಕೆ ಕೊನೆಗೂ ‘ಮುಹೂರ್ತ’: DHO ಭೇಟಿ, ಬಾಕಿ ಕಾಮಗಾರಿ ಆರಂಭ Postman News report brings action on…

2 days ago

ಸಿದ್ದರಮಟ್ಟಿ ಬಳಿ ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ, ₹31,350 ಮೌಲ್ಯದ ಗಾಂಜಾ ಜಪ್ತಿ

ಸಿದ್ದರಮಟ್ಟಿ ಬಳಿ ಗಾಂಜಾ ಮಾರಾಟ: ಇಬ್ಬರು ಆರೋಪಿಗಳ ಬಂಧನ, ₹31,350 ಮೌಲ್ಯದ ಗಾಂಜಾ ಜಪ್ತಿ Two accused persons were…

2 days ago

ಬೀದಿ ನಾಯಿಗಳ ದಾಳಿಗೆ ಆರು ಕುರಿ ಮರಿಗಳು ಸಾವು

ಬೀದಿ ನಾಯಿಗಳ ದಾಳಿ: ಆರು ಕುರಿಗಳು ಸಾವು Six sheep belonging to a resident of Sagar were…

2 days ago