Headlines

ಸಂತೋಷ್ ಲಾಡ್ ಬಗ್ಗೆ ಕೀಳುಮಟ್ಟದ ಪದ ಬಳಕೆ – ಬಿ ವೈ ವಿಜಯೇಂದ್ರ ವಿರುದ್ದ ಮರಾಠ ಸಮುದಾಯದ ಅಕ್ರೋಶ | Protest

ಸಂತೋಷ್ ಲಾಡ್ ಬಗ್ಗೆ ಕೀಳುಮಟ್ಟದ ಪದ ಬಳಕೆ – ಬಿ ವೈ ವಿಜಯೇಂದ್ರ ವಿರುದ್ದ ಮರಾಠ ಸಮುದಾಯದ ಅಕ್ರೋಶ


ಶಿವಮೊಗ್ಗ :  ಸಚಿವ ಸಂತೋಷ್ ಲಾಡ್ ವಿರುದ್ಧ ಕೀಳುಮಟ್ಟದ ಪದಬಳಕೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಮರಾಠಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದ ಗೋಪಿ ವೃತ್ತದಲ್ಲಿ ಮರಾಠ ಸಮುದಾಯದಿಂದ ಪ್ರತಿಭಟನೆ ನಡೆಸಲಾಗಿದೆ. ಪಂಜಿನ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ವಿಜಯೇಂದ್ರ ಭಾವಚಿತ್ರಕ್ಕೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು ಕೂಡಲೇ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

ಬುದ್ಧ, ಬಸವ, ಅಂಬೇಡ್ಕರ್ ಅವರ ತತ್ವದ ಅನುಯಾಯಿ, ಸಾಮಾಜಿಕ ಕಳಕಳಿಯ ಚಿಂತಕ, ಮರಾಠ ಸಮುದಾಯದ ಏಕೈಕ ಶಾಸಕ ಹಾಗೂ ಕರ್ನಾಟಕ ಸರ್ಕಾರದ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರನ್ನು ಅಸಂಬದ್ಧ ಪದಗಳಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಟೀಕೆ ಮಾಡಿದ್ದಾರೆ. ಕೂಡಲೇ ವಿಜಯೇಂದ್ರ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ನಗರದ ಗೋಪಿ ವೃತ್ತದಲ್ಲಿ ಶಿವಮೊಗ್ಗ ಜಿಲ್ಲಾ ಛತ್ರಪತಿ ಶಿವಾಜಿ ಮರಾಠ ಸಮಾಜ ಹಾಗೂ ಅಹಿಂದ ಪ್ರಮುಖ ಮುಖಂಡರು ಮತ್ತು ಛತ್ರಪತಿ ಶಿವಾಜಿ ಯುವ ವೇದಿಕೆ ನೇತೃತ್ವದಲ್ಲಿ ಬೃಹತ್ ಪಂಜಿನ ಪ್ರತಿಭಟನೆ ನಡೆಸಲಾಗಿದೆ.

Leave a Reply

Your email address will not be published. Required fields are marked *

Exit mobile version