ವೈದ್ಯಕೀಯ ವಿದ್ಯಾರ್ಥಿನಿ ನಾಪತ್ತೆ | Medical student goes missing
ಶಿವಮೊಗ್ಗ : ತಾಲೂಕು ಬೆಳಲಕಟ್ಟೆ ಗ್ರಾಮ ಮೇಲಿನ ಹನಸವಾಡಿ ವಾಸ ರಾಮು ಎಂಬುವವರ ಮಗಳು 18ವರ್ಷದ ಪ್ರಿಯಾ ಎಂಬ ಯುವತಿ ಮಾ. 23 ರಿಂದ ಕಾಣೆಯಾಗಿದ್ದು, ಈವರೆಗೂ ವಾಪಾಸ್ಸಾಗಿರುವುದಿಲ್ಲ. ಈಕೆ ಸಿಮ್ಸ್ ಕಾಲೇಜಿನಲ್ಲಿ ಪ್ಯಾರ ಮೆಡಿಕಲ್ ವ್ಯಾಸಂಗ ಮಾಡುತ್ತಿದ್ದಾಳೆ.
ಈಕೆ 5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಕನ್ನಡ, ತಮಿಳು ಮತ್ತು ಇಂಗ್ಲೀಷ್ ಮಾತನಾಡುತ್ತಾಳೆ.
Shivamogga Police ಮನೆಯಿಂದ ಹೋಗುವಾಗ ತಿಳಿನೀಲಿ ಬಣ್ಣದ ಟಾಪ್ ಹಾಗೂ ನೀಲಿ ಬಣ್ಣದ ಪ್ಯಾಂಟ್ ಮತ್ತು ಬಿಳಿ ಕೋಟ್ ಧರಿಸಿರುತ್ತಾಳೆ.
ಈ ಯುವತಿಯ ಮಾಹಿತಿ ಸಿಕ್ಕಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414 / 9611761255 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಇನ್ಸ್‍ಪೆಕ್ಟರ್ ತಿಳಿಸಿದ್ದಾರೆ.



