ಮೆಹಂದಿಯಲ್ಲಿ ಮತದಾನ – ಮತದಾನ ಜಾಗೃತಿಗಾಗಿ ವಿನೂತನ ಪ್ರಯತ್ನ
ಶಿವಮೊಗ್ಗದಲ್ಲಿ ಲೋಕಸಭಾ ಚುನಾವಣೆ ಕಾವು ಜೋರಾಗುತ್ತಿದೆ. ಇದರ ನಡುವೆ ಅಧಿಕಾರಿಗಳು ಮತಜಾಗೃತಿ ಕಾರ್ಯದಲ್ಲಿ ತೊಡಗಿದ್ದಾರೆ. ಮತದಾನ ಜಾಗೃತಿಗಾಗಿ ವಿನೂತನವಾಗಿ ಮೆಹಂದಿಯಲ್ಲಿ ಮತದಾನ ಅಭಿಯಾನವನ್ನು ಕೈಗೊಳ್ಳಲಾಗಿದೆ.
ಲೋಕಸಭಾ ಚುನಾವಣೆ ಸಂಬಂಧ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಟಿಪ್ಪು ನಗರದಲ್ಲಿ ಈ ದಿನ ಅಲ್ಪಸಂಖ್ಯಾತ ಮಹಿಳೆಯರಿಗೆ ಮತದಾನ ಜಾಗೃತಿಯನ್ನು ಮೆಹಂದಿಯಲ್ಲಿ ಮತದಾನ ಘೋಷಣೆಯನ್ನು ಬರೆಸುವುದರ ಮೂಲಕ ಮಾಡಿಸಲಾಯ್ತು ಹಾಗೂ ಪ್ರತಿಜ್ಞಾ ವಿಧಿ ಭೋದಿಸಲಾಯಿತು.
ಈ ಸಂದರ್ಭದಲ್ಲಿ ಅಲ್ಪಸಂಖ್ಯಾತ ಮಹಿಳೆಯರು ಪಾಲಿಕೆಯ ಸ್ವೀಪ್ ಅಧಿಕಾರಿ ಸಿಬ್ಬಂದಿಗಳು ಆ ಭಾಗದ ಬಿ ಎಲ್ ಓ ಪಾಲ್ಗೊಂಡಿದ್ದರು



