“ಬತ್ತಿದ ನೀರಿನ ಸಲೆ ಕುಮದ್ವತಿ ನದಿತಟದ ಒಣಗಿದ ಮರಗಳು, ನೀರಿಗಾಗಿ ಪ್ರಾಣಿ ಪಕ್ಷಿಗಳ ಪರದಾಟ
ರಿಪ್ಪನ್‌ಪೇಟೆ;-ಕಳೆದ 10 ಅಗಸ್ಟ್ -ಸೆಪ್ಟಂಬರ್ ತಿಂಗಳಿಂದ ನಡುಮಲೆನಾಡಿನಲ್ಲಿ ಮಳೆಯಾಗದೇ ಇರುವ ನೀರು ಸಂಪೂರ್ಣವಾಗಿ ಬತ್ತಿ ಆಂತರ್ಜಲ ಕುಂಠಿತಗೊಂಡು ಹಳಕೊಳ್ಳಗಳಲ್ಲಿ ನೀರು ಹರಿಯದೇ ಒಣಗಿಹೋಗಿದ್ದು ಕುಮದ್ವತಿ ತಟದಲ್ಲಿನ ಬೃಹತ್ ಗಾತ್ರದ ಮರಗಳು ಒಣಗಿ ಈಗಲೂ ಆಗಲೂ ಧರೆಗುರುಳವ ಸ್ಥಿತಿಯಲ್ಲಿ ನಿಂತಿವೆ.
ಮಲೆನಾಡಿನ ಜೀವ ಜಲವಾಗಿರುವ ಕುಮದ್ವತಿ ಶರ್ಮಿಣಾವತಿ ನದಿಯಲ್ಲಿ ನೀರಿಲ್ಲದೆ ಒಣಗಿ ಹೋಗಿದ್ದು ಕಾಡು ಪ್ರಾಣಿಗಳು ಜಾನುವಾರುಗಳು ನೀರಿಗಾಗಿ ಪರಿತಪ್ಪಿಸುವ ಸ್ಥಿತಿ ಎದರುರಾಗಿದೆ.ಕೊಳವೆ ಬಾವಿಗಳಲ್ಲಿ ಸಹ ದಿನದಿಂದ ದಿನಕ್ಕೆ ನೀರಿನ ಮಟ್ಟ ಸಹ ಕುಸಿಯುತ್ತಿದ್ದು ರೈತರು ಮುಗಿಲ ಕಡೆ ಮುಖಮಾಡುವಂತಾಗಿದ್ದು ಶುಂಠಿ ಮತ್ತು ಆಡಿಕೆ ಬೆಳೆಯನ್ನು ಹಾಕಲು ಇರುವ ಅರಣ್ಯ ಪ್ರದೇಶವನ್ನು ಕಡಿದು ಬರಿದು ಮಾಡಿದರ ಪರಿಣಾಮ ಘೋರ ಪರಿಣಾಮ ಎದುರಿಸುವ ಕಾಲ ಬಂದಿದೆ.
ಅಸೆಗೂ ಒಂದು ಇತಿ ಮೀತಿ ಇರಬೇಕು ಆದರೆ ಅಸೆ ದುರಾಸೆಯಾದರೆ ನಷ್ಟವಾದಿತು ಎಂಬ ಈ ಹಿಂದಿನವರ ಗಾಧೆ ಮಾತು ಈಗ ಸತ್ಯವಾಗುತ್ತಿದೆ. ಕಾಡು ಇದ್ದರೆ ನಾಡು ಎಂಬಂತೆ ಜೂನ್-ಜುಲೈ ತಿಂಗಳು ಬಂತು ಅಂದರೆ ಸಾಕು ಆರಣ್ಯ ಇಲಾಖೆಯವರು ವನಮಹೋತ್ಸವವನ್ನು ಮಾಡುವ ಮೂಲಕ ಶಾಲಾ ಕಾಲೇಜ್ ಅಸ್ಪತ್ರೆ ಹೀಗೆ ಹಲವಾರು ಕಡೆಯಲ್ಲಿ ಅರಣ್ಯ ಸಸಿಗಳನ್ನು ನೆಟ್ಟು ಪಾಲನೆ ಪೋಷಣೆ ಮಾಡುವುದು ದೊಡ್ಡ ದೊಡ್ಡ ಭಾಷಣ ಮಾಡಿ ಹೋಗುವುದು ನೋಡಿದ ಸಾಕಷ್ಟು ಸಾಕ್ಷö್ಯ ಚಿತ್ರಗಳು ನಮ್ಮ ಕಣ್ಣು ಪಟಲದಲ್ಲಿ ಗೋಚರಿಸುತ್ತಿದ್ದು ಆರಣ್ಯ ಇಲಾಖೆಯವರು ತಮ್ಮ ಅರಣ್ಯ ಜಮೀನಿನಲ್ಲಿ ಕಳೆದ ಹತ್ತು ವರ್ಷದಿಂದ ತಮ್ಮ ಇಲಾಖೆಯ ಜಮೀನಿನಲ್ಲಿ ಆರಣ್ಯ ವಿಸ್ತರಣೆ ಮಾಡಿ ಬೆಳಸಲಾದ ಗಿಡಗಳು ಏನಾದವೂ ಎಂಬುದರ ಬಗ್ಗೆ ಮಾತ್ರ ಯಾವುದೇ ಮಾಹಿತಿ ಇಲ್ಲ…………! ಹಾಗಾದರೆ ಪ್ರತಿ ವರ್ಷ ವನಮಹೋತ್ಸವ ಸಂದರ್ಭದಲ್ಲಿ ಬೆಳಸಲಾದ ಮರಗಳು ಏನಾದವೂ ಹೆಸರಿಗಿ ವನಮಹೋತ್ಸವ ಇಲಾಖೆಯವರು ನಿರ್ವಹಣೆಯಿಲ್ಲದೇ ಈ ಹತ್ತು ಇಪ್ಪತ್ತು ವರ್ಷದಿಂದ ಬೆಳೆಯಲಾದ ಮರಗಳು ಏನಾದವೂ ಎಂಬ ಯಕ್ಷ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡುವಂತಾಗಿದೆ.
ಅರಣ್ಯ ಇಲಾಖೆಯವರಿಗೆ 500 ರೂ 1000 ರೂ ಕೊಟ್ಟರೆ ಸಾಕು ನೀವು ಮರವನ್ನಾದರೂ ಕಡಿದುಕೊಳ್ಳಿ ಇಲ್ಲವೇ ಆರಣ್ಯ ಜಾಗವನ್ನಾದರೂ ಒತ್ತುವರಿ ಮಾಡಿಕೊಳ್ಳಿ ನಮಗೂ ಏನೂ ಗೊತ್ತಿಲ್ಲದವರಂತೆ ಸುಮ್ಮನೆ ಮೌನ ವಹಿಸುತ್ತಾರೆ. ಇಲ್ಲಿನ ಹೊಸನಗರ ವಲಯ ಮೂಗುಡ್ತಿ ವಲಯ ಅರಸಾಳು ವಲಯ ಆರಣ್ಯ ಇಲಾಖೆ ವ್ಯಾಪ್ತಿಯ ಕುಕ್ಕಳಲೇ ಗ್ರಾಮದ ಸರ್ವೇ ನಂಬರ್ ಕಂದಾಯ ಜಮೀನಿದಾದರೂ ಕೂಡಾ ಬೃಹತ್ ಗಾತ್ರದ ಮರಗಳಿರುವ ಕಾರಣ ಅರಣ್ಯ ಜಾಗವೆಂದು ತಿಳಿದು ಹಲವು ರೈತಾಪಿ ವರ್ಗ ಬಗರ್ ಹುಕ್ಕುಂ ಒತ್ತುವರಿ ಮಾಡಿಕೊಳ್ಳಲು ಹಿಂದೇಟು ಕಾಲವೊಂದಿತು.ಆದರೆ ಇತ್ತೀಚಿನ ದಿನಗಳಲ್ಲಿ ಎರಡು ಇಲಾಖೆಯವರ ಬೇಜವಾಬ್ದಾರಿಯಿಂದಾಗಿ ನಮಗೆ ಸೇರಿರುವ ಜಾಗ ಅಲ್ಲ ಕಂದಾಯ ಇಲಾಖೆಯೆಂದು ಹೇಳಿಕೊಂಡು ಕೈಚಲ್ಲಿ ಕುಳಿತರೆ ಅಲ್ಲಿನ ಲಕ್ಷಾಂತರ ಮೌಲ್ಯ ಬೆಲೆ ಬಾಳುವ ಮರಗಳ ಮಾರಣಹೋಮ ಅವ್ಯಾಹಿತವಾಗಿ ನಡೆಯುತ್ತಿದ್ದರೂ ಕೂಡಾ ಕಂದಾಯ –ಅರಣ್ಯ ಇಲಾಖೆಯವರು ಕ್ರಮ ಕೈಗೊಳ್ಳುವುದರಲ್ಲಿ ಸಂಪೂರ್ಣ ವಿಫಲರಾಗುವ ಮೂಲಕ ಖೋ-ಖೋ ಆಟ ವಾಡುತ್ತಿದ್ದು ಹುಚ್ಚ ಮುಂಡೆ ಮದುವೆಯಲ್ಲಿ ಉಂಡವನ್ನೇ ಜಾಣ ಎಂಬಂತೆ…………….!
ಹಣ ತೋಳಬಲ ಇದವನ್ನು ಏನೂ ಬೇಕಾದರು ಮಾಡಬಹುದು ಎನ್ನುವುದಕ್ಕೆ ಇಲ್ಲಿನ ಆರಣ್ಯ ಮತ್ತು ಕಂದಾಯ ಇಲಾಖೆಯವರ ಖೋ-ಖೊ.ಅಟವನ್ನು ಬಿಟ್ಟು ಜಮೀನು ಒತ್ತುವರಿಯನ್ನು ತಡೆಯುವತ್ತ ಮುಂದಾಗುವರೆ ಕಾದು ನೋಡಬೇಕಾಗಿದೆ.
ಅದೇ ಯಾರಾದರೂ ಪಾಪಿ ಪರದೇಶಿ ರೈತರು ಉರುವಲು ಮತ್ತು ಮದುವೆ ಶುಭ ಸಮಾರಂಭಗಳಿಗೆ ಕಟ್ಟಿಗೆ ಕಂಬಕ್ಕಾಗಿ ಕಡಿದು ತಂದರೆ ಅಂತಹ ರೈತನಿಗೆ ಇಲ್ಲಸಲ್ಲದ ಕೇಸ್ ದಾಖಲಿಸುವ ಅರಣ್ಯ ಇಲಾಖೆಯ ಹಿರಿಯ ಆಧಿಕಾರಿಗಳಿಗೆ ತಮ್ಮ ಅರಣ್ಯ ಇಲಾಖೆಯಲ್ಲಿ ಆವ್ಯಾಹಿತವಾಗಿ ನಡೆಯುತ್ತಿರುವ ಇಂತಹ ಪ್ರಕರಣಗಳು ಗಮನಕ್ಕೂ ಬರುತ್ತಿಲ್ಲಾವಾ ಎಂಬ ಸಂಶಯ ವ್ಯಕ್ತವಾಗುತ್ತದೆ.
ಒಟ್ಟಾರೆಯಾಗಿ ಮಾನವನ ದುರಾಸೆಯಿಂದ ಕಾಡು ನಶಿಸುತ್ತಾ ಹೋಗಿ ಪ್ರಾಣಿ ಪಕ್ಷಿಗಳು ಕುಡಿಯಲು ನೀರಿಲ್ಲದೇ ಒದ್ದಾಡುತ್ತಿರುವುದು ನಿರ್ಲಜ್ಜ್ಯ ಸಮಾಜವೊಂದನ್ನು ಸೂಚಿಸುತ್ತಿದೆ..