Headlines

ಪಾನಕ ಹಂಚುವಾಗ ಯುವಕನಿಗೆ ಚಾಕು ಇರಿತ ಪ್ರಕರಣ – ಗಾಯಾಳುವಿನ ಆರೋಗ್ಯ ವಿಚಾರಿಸಿದ ಕೆ ಎಸ್ ಈಶ್ವರಪ್ಪ | Crime News

ಪಾನಕ ಹಂಚುವಾಗ ಯುವಕನಿಗೆ ಚಾಕು ಇರಿತ ಪ್ರಕರಣ – ಗಾಯಾಳುವಿನ ಆರೋಗ್ಯ ವಿಚಾರಿಸಿದ ಕೆ ಎಸ್ ಈಶ್ವರಪ್ಪ | Crime News


ಚನ್ನಗಿರಿಯ ನಲ್ಲೂರಿನಲ್ಲಿ ಹಿಂದೂ ಯುವಕನಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ  ಮೆಗ್ಗಾನ್ ಗೆ ದಾಖಲಾಗಿದ್ದು, ಚಾಕು ಇರಿತಕ್ಕೆ ಒಳಗಾದ ಗೋಪಿ ಎಂಬಾತನ ಆರೋಗ್ಯವನ್ನ ವಿಚಾರಿಸಲು ಪಕ್ಷೇತರ ಅಭ್ಯರ್ಥಿ ಈಶ್ವರಪ್ಪನವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ನಂತರ ಮಾದ್ಯಮಗಳಿಗೆ ಮಾತನಾಡಿ ರಾಮನವಮಿ ದಿನ ಕೋಸಂಬರಿ ಪಾನಕ ಹಂಚುವ ಸಂದರ್ಭದಲ್ಲಿ ಐದು ಜನ ಅನ್ಯಕೋಮಿನ ಯುವಕರು ಬಂದು ಚಾಕು ಇರಿದಿದ್ದಾರೆ. ರಾಜ್ಯ ಸರ್ಕಾರ ಈ ಬಗ್ಗೆ ಗಮನವೇ ಹರಿಸುತ್ತಿಲ್ಲ ಎಂದು ಈಶ್ವರಪ್ಪ ಆರೋಪಿಸಿದರು.

ಹಿಂದೂಗಳ ರಕ್ಷಣಯೇ ಇಲ್ಲದಂತಾಗಿದೆ. ಹುಬ್ಬಳ್ಳಿಯಲ್ಲಿ ನಡೆದ ನೇಹ ಹತ್ಯೆ ಪ್ರಕರಣಗಳು ನಡೆದಿದೆ. ರಾಜ್ಯದ ಮುಖ್ಯಮಂತ್ರಿಗಳು ಮತ್ತು ಗೃಹಮಂತ್ರಿಗಳು ಲವ್ ಜಿಹಾದ್ ಅಲ್ಲ. ಇದು ವೈಯುಕ್ತಿ ಎಂದು ಹೇಳುತ್ತಿದ್ದಾರೆ. ಇದು ಮುಸ್ಲೀಂ ಗೂಂಡಾಗಳಿಗೆ ಕುಮ್ಮಕ್ಕು ನೀಡುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದರು.

ಇಂತಹ ಹೇಳಿಕೆ ನೀಡುವುದನ್ನ ರಾಜ್ಯ ಸರ್ಕಾರ‌ ನಿಲ್ಲಿಸಬೇಕು. ತಕ್ಷಣವೇ ಚಾಕು ಇರಿದವರ  ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತಾಗಬೇಕು ಎಂದು ಆಗ್ರಹಿಸಿದರು.

Leave a Reply

Your email address will not be published. Required fields are marked *

Exit mobile version