Headlines

ಚುನಾವಣಾ ಪ್ರಚಾರದಲ್ಲಿ ಮೋದಿ ಫೋಟೋ ಬಳಕೆಗಾಗಿ ಕೋರ್ಟ್ ಮೆಟ್ಟಿಲೇರಿದ ಕೆಎಸ್ ಈಶ್ವರಪ್ಪ | ಶಿವಮೊಗ್ಗದಲ್ಲಿ ಬಂಡಾಯದ ಕಿಚ್ಚು | Election

ಚುನಾವಣಾ ಪ್ರಚಾರದಲ್ಲಿ ಮೋದಿ ಫೋಟೋ ಬಳಕೆಗಾಗಿ ಕೋರ್ಟ್ ಮೆಟ್ಟಿಲೇರಿದ ಕೆಎಸ್ ಈಶ್ವರಪ್ಪ | ಶಿವಮೊಗ್ಗದಲ್ಲಿ ಬಂಡಾಯದ ಕಿಚ್ಚು

ಶಿವಮೊಗ್ಗದಲ್ಲಿ(Shivamogga) ಬಂಡಾಯದ ಬಿಸಿ ಬಿಸಿಲಿನಷ್ಟೇ ಹೆಚ್ಚಾಗುತ್ತಿದೆ. ಮಗನಿಗೆ ಬಿಜೆಪಿ ಟಿಕೆಟ್ ಕೊಡಿಸಲು ವಿಫಲರಾದ ಕೆಎಸ್ ಈಶ್ವರಪ್ಪ(Eshwarappa) ಶಿವಮೊಗ್ಗದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದಾರೆ. ಪ್ರಚಾರದ ವೇಳೆ ಪ್ರಧಾನಿ ಮೋದಿ(modi) ಅವರ ಫೋಟೋ ಬಳಸುವ ವಿಚಾರ ವಿವಾದಕ್ಕೀಡಾಗಿದ್ದು ಈಶ್ವರಪ್ಪ ಕೋರ್ಟ್ ಮೊರೆ ಹೋಗಿದ್ದಾರೆ.

ಶಿವಮೊಗ್ಗ ಕ್ಷೇತ್ರದಲ್ಲಿ ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಬಿಜೆಪಿ ಬಂಡಾಯ(rebel) ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿರುವ ವಿಚಾರ ತಿಳಿದಿದೆ. ಆದರೆ ಪ್ರಚಾರದ ವೇಳೆ ಪ್ರಧಾನಿ ಮೋದಿ ಫೋಟೋ ಬಳಸಿದ್ದಾರೆನ್ನುವುದು ವಾಗ್ವಾದಕ್ಕೆ ಗುರಿಯಾಗಿದೆ. ಹೀಗಾಗಿ ಮೋದಿ ಫೋಟೋ ಬಳಕೆ ವಿಚಾರವಾಗಿ ಈಶ್ವರಪ್ಪ ಶಿವಮೊಗ್ಗ ಕೋರ್ಟ್ನಲ್ಲಿ ಕೆವಿಯಟ್ ಸಲ್ಲಿಸಿದ್ದಾರೆ.

ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ(Raghavendra b y) ಪ್ರಚಾರದ ವೇಳೆ ಕೆ ಎಸ್‌ ಈಶ್ವರಪ್ಪ ಮೋದಿ ಫೋಟೋ ಬಳಿಸಿದ್ದಾರೆಂದು ಆಕ್ರೋಶಗೊಂಡಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ ಈಶ್ವರಪ್ಪ ಮೋದಿ ಅವರಪ್ಪನ ಆಸ್ತಿಯಾ ಎಂದು ಕೌಂಟರ್ ಕೊಟ್ಟಿದ್ದರು. ಈಗ ಫೋಟೋ ವಿಚಾರ ಕೋರ್ಟ್ ಮೆಟ್ಟಿಲೇರಿದೆ.

ಸಾಮಾನ್ಯವಾಗಿ ಬಂಡಾಯದ ಅಭ್ಯರ್ಥಿಗಳು ತಮ್ಮ ಹಳೆಯ ಪಕ್ದತ್ತ ತಲೆ ಹಾಕಿವುದಿಲ್ಲ. ಆ ಪಕ್ಷದ ವಿರುದ್ಧ ಮಾತನಾಡುವುದೇ ಹೆಚ್ಚು. ಆದರೆ ಕೆಎಸ್‌ ಈಶ್ವರಪ್ಪ ನಡೆ ಭಾರೀ ಕುತೂಹಲವನ್ನು ಹುಟ್ಟಿಸಿದೆ. ಅವರು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪ್ರಚಾರಕ್ಕೆ ಮೋದಿ ಪೋಟೋ ಬಳಸುತ್ತಿರುವುದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಲೋಕಸಭಾ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಳಿದಿರುವ ಕೆಎಸ್ ಈಶ್ವರಪ್ಪ ಅವರ ಕೋಪ ತಣ್ಣಗಾಗಿಸಲು ಇತ್ತೀಚೆಗೆ ಬೆಂಗಳೂರಿಗೆ ಬಂದಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ದೂರವಾಣಿ ಕರೆ ಮಾಡಿದ್ದರು. ಆಗ ದೆಹಲಿಗೆ ಬರುವಂತೆ ತಿಳಿಸಿದ್ದರು. ಆದರೆ ದೆಹಲಿಗೆ ತೆರಳಿದರೂ ಭೇಟಿಗೆ ಅವಕಾಶ ಸಿಗದೆ ಕೆಎಸ್ ಈಶ್ವರಪ್ಪ ವಾಪಾಸ್ಸಾಗಿದ್ದರು.

ನಂತರ ಅವರು ಪಕ್ಷದ ವಿರುದ್ಧ ಬಂಡಾಯವೆದ್ದು ಸ್ಪರ್ಧಿಸಲು ಮುಂದಾದರು. ಈ ವೇಳೆ ಅವರಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹೈಕಮಾಂಡ್ ನಾಯಕರ ಸಮ್ಮತಿ ಇರಬಹುದು. ಅವರಿಗೆ ನಾನು ಸ್ಪರ್ಧಿಸುವುದು ಮನಸ್ಸಿರಬಹುದು ಎಂದು ಹೇಳಿದ್ದರು. ಬಂಡಾಯದ ಅಭ್ಯರ್ಥಿಗಳು ಮೋದಿ ಫೋಟೋ ಹಿಡಿದುಕೊಂಡು ಪ್ರಚಾಋ ನಡೆಸಿರುವುದು ಇದೇ ಮೊದಲಲ್ಲ.

ಈ ಹಿಂದೆ ವಿಧಾನಸಭಾ ಚುನಾವಣೆಯಲ್ಲೂ ಮೋದಿ ಫೋಟೋ ಬಳಸಿ ಬಂಡಾಯ ಅಭ್ಯರ್ಥಿ ಪ್ರಚಾರ ಮಾಡಿದ್ದರು. ಪಕ್ಷದ ನಾಯಕರ ವಿರೋಧದ ನಡುವೆಯೂ ಅವರು ಪ್ರಚಾರದಲ್ಲಿ ಮೋದಿ ಹೆಸರು ಬಳಸಿಕೊಂಡಿದ್ದಲ್ಲದೆ ಚುನಾವಣೆಯಲ್ಲಿ ಅತ್ಯತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದರು. ಬಳಿಕ ಅವರು ಪಕ್ಷಕ್ಕೂ ಸೇರಿಕೊಂಡರು. ಆದರೀಗ ಕೆಎಸ್ ಈಶ್ವರಪ್ಪ ವಿಚಾರಕ್ಕೂ ಇದೇ ಬೆಳವಣಿಗೆಗಳನ್ನು ಮುಂದಿನ ದಿನಗಳಲ್ಲಿ ನಿರೀಕ್ಷೆ ಮಾಡಬಹುದು ಎಂಬ ಮಾತುಗಳು ಕೇಳಿ ಬಂದಿವೆ.

Leave a Reply

Your email address will not be published. Required fields are marked *

Exit mobile version