Headlines

Ripponpete | ವಿವಿಧಡೆಯಲ್ಲಿ ಶಿವನಾಮ ಸ್ಮರಣೆ

ವಿವಿಧಡೆಯಲ್ಲಿ ಶಿವನಾಮ ಸ್ಮರಣೆ


ರಿಪ್ಪನ್‌ಪೇಟೆ;-ಸಮೀಪದ ಇತಿಹಾಸ ಪ್ರಸಿದ್ದ ಶ್ರೀಕ್ಷೇತ್ರ ಗುಳಿಗುಳಿ ಶಂಕರೇಶ್ವರ ದೇವಸ್ಥಾನ, ಬೈರಾಪುರ ಉದ್ಭವ ಕಂತೆ ಸಿದ್ದೇಶ್ವರ ದೇವಸ್ಥಾನ ಮತ್ತು ಕೋಡೂರು ಶಂಕರೇಶ್ವರ ದೇವಸ್ಥಾನ,ಬರುವೆ ಕಲಾನಾಥ ರಾಮೇಶ್ವರ ದೇವಸ್ಥಾನ,ಹುಂಚದ ಕಮಟೇಶ್ವರ ದೇವಸ್ಥಾನ,ಹಾಲುಗುಡ್ಡೆಯ ಹಾಲರಾಮೇಶ್ವರ ದೇವಸ್ಥಾನ ಗವಟೂರು ರಾಮೇಶ್ವರದೇವಸ್ಥಾನ,ಕುಕ್ಕಳಲೇ ಕಾಶಿವಿಶ್ವನಾಥ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ಇಂದು ವಿಶೇಷ ಪೂಜೆ ಮತ್ತು ರುದ್ರಾಭಿಷೇಕ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ಜರುಗಿದವು.

ಮುಂಜಾನೆಯಿಂದಲೇ ಭಕ್ತರು ತಂಡೋಪತಂಡವಾಗಿ ದೇವಸ್ಥಾನಕ್ಕೆ ತೆರಳಿ ಶಿವ ನಾಮ ಸ್ಮರಣೆಯನ್ನು  ಜಪಿಸಿದರು.

ದೇವಸ್ಥಾನಗಳಲ್ಲಿ ಭಕ್ತರ ಸಮೂಹ ಸರತಿ ಸಾಲಿನಲ್ಲಿ ನಿಂತು ತಮ್ಮ ಇಷ್ಟಾರ್ಥವನ್ನು ಈಡೇರಿಸುವಂತೆ ಶಿವನಲ್ಲಿ ಪ್ರಾರ್ಥಿಸುತ್ತಿರುವುದು ವಿಶೇಷವಾಗಿತು.

About The Author

Leave a Reply

Your email address will not be published. Required fields are marked *

Exit mobile version