Headlines

Hosanagara | ಪತ್ನಿಯ ಅಗಲಿಕೆಯ ನೋವು ತಾಳಲಾರದೇ ಪತಿ ನೇಣಿಗೆ ಶರಣು

Hosanagara | ಪತ್ನಿಯ ಅಗಲಿಕೆಯ ನೋವು ತಾಳಲಾರದೇ ಪತಿ ನೇಣಿಗೆ ಶರಣು


ಹೊಸನಗರ : ಪಟ್ಟಣದ ಮಾವಿನಕೊಪ್ಪ ನಿವಾಸಿ ಎಸ್ ಎಂ ವಿಶ್ವನಾಥ (67) ಮನೆಯಲ್ಲಿಯೇ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ.

ವಿಶ್ವನಾಥರ ಪತ್ನಿ ಲೀಲಾವತಿಯವರು ಕಳೆದ ಆರು ತಿಂಗಳ ಹಿಂದೆ ಅಕಾಲ ಮರಣ ಹೊಂದಿದ್ದು ಪತ್ನಿಯ ಮರಣ ನಂತರ ವಿಶ್ವನಾಥ್ ರವರು ಪತ್ನಿಯ ಕೊರಗಿನಲ್ಲಿ ದಿನ ದೂಡುತ್ತಿದ್ದರೆಂದು ತಿಳಿದುಬಂದಿದೆ.

ವಿಶ್ವನಾಥ್ ರವರ ಪುತ್ರ ಬಸ್ ಏಜೆಂಟ್ ರಾಘವೇಂದ್ರ ಸಂಜೆ ತನ್ನ ತಂದೆಗೆ ಕಾಫಿ ಮಾಡಿ ಕೊಟ್ಟು ಬಸ್ ಬುಕ್ ಮಾಡಲು ಬಸ್ ನಿಲ್ದಾಣಕ್ಕೆ ತೆರಳಿದ್ದು ರಾತ್ರಿ 9:30ರ ನಂತರ ಮನೆಗೆ ತೆರಳಿದಾಗ ತಂದೆ ನೇಣಿಗೆ ಶರಣಾಗಿದ್ದು ಕಂಡುಬಂದಿದೆ.

ಮೃತ ವಿಶ್ವನಾಥ್ ಬಸ್‌ನಲ್ಲಿ ಚಾಲಕರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದರು.

ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *

Exit mobile version