Headlines

Hosanagara | ಇಸ್ಪೀಟ್ ಅಡ್ಡೆಯ ಮೇಲೆ ಪೊಲೀಸರ ದಾಳಿ – ನಗದು ಸಮೇತ ಎಂಟು ಜನ ವಶಕ್ಕೆ..!!

Hosanagara | ಇಸ್ಪೀಟ್ ಅಡ್ಡೆಯ ಮೇಲೆ ಪೊಲೀಸರ ದಾಳಿ – ನಗದು ಸಮೇತ ಎಂಟು ಜನ ವಶಕ್ಕೆ..!!

ಹೊಸನಗರ ತಾಲ್ಲೂಕಿನ ಅಲಗೇರಿಮಂಡ್ರಿ ವ್ಯಾಪ್ತಿಯ ಮುಡುಬಾ ಗ್ರಾಮದಲ್ಲಿ ಅಂದರ್ ಬಾಹರ್ ಆಡುತಿದ್ದ ಸ್ಥಳಕ್ಕೆ ದಾಳಿ ನಡೆಸಿ ನಗದು ಸಮೇತ ಎಂಟು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಮುಡುಬಾ ಗ್ರಾಮದಲ್ಲಿ 10 ಜನರು ಅಂದರ್ ಬಾಹರ್ ಇಸ್ಪೀಟ್ ಆಟವಾಡುತ್ತಿದ್ದಾರೆಂಬ ಖಚಿತ ಮಾಹಿತಿ ಮೇರೆಗೆ ಸರ್ಕಲ್ ಇನ್ಸ್‌ಪೆಕ್ಟರ್ ಗುರಣ್ಣ ಎಸ್ ಹೆಬ್ಬಾಳ್‌ರವರ ಆದೇಶದ ಮೇರೆಗೆ ಸಬ್ ಇನ್ಸ್‌ಪೆಕ್ಟರ್ ರಾಜುರೆಡ್ಡಿಯವರ ನೇತೃತ್ವದಲ್ಲಿ ದಾಳಿ ನಡೆಸಿ ಸುಮಾರು ಅಂದಾಜು 12,400 ರೂಪಾಯಿ ಹಾಗೂ 8 ಜನರನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಕೇಸ್ ದಾಖಲಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಹೊಸನಗರ ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ಗಂಗಪ್ಪ, ಸುನೀಲ್, ಸಂದೀಪ್, ತೀರ್ಥೇಶ, ರಂಜಿತ್‌ಕುಮಾರ್, ಅವಿನಾಶ್ ಇದ್ದರು.

About The Author

Leave a Reply

Your email address will not be published. Required fields are marked *

Exit mobile version