Good Friday 2024: ಗುಡ್‌ ಫ್ರೈಡೇಯ ಇತಿಹಾಸ ಹಾಗೂ ಮಹತ್ವವೇನು? ಕ್ರಿಶ್ಚಿಯನ್ನರ ಈ ಪವಿತ್ರ ಆಚರಣೆ ಬಗ್ಗೆ ಇಲ್ಲಿದೆ ಮಾಹಿತಿ

Good Friday 2024: ಗುಡ್‌ ಫ್ರೈಡೇಯ ಇತಿಹಾಸ ಹಾಗೂ ಮಹತ್ವವೇನು? ಕ್ರಿಶ್ಚಿಯನ್ನರ ಈ ಪವಿತ್ರ ಆಚರಣೆ ಬಗ್ಗೆ ಇಲ್ಲಿದೆ ಮಾಹಿತಿ


ಕ್ರೈಸ್ತ ಸಮುದಾಯದವರು ಆಚರಿಸುವ ಪ್ರಮುಖ ಹಬ್ಬಗಳಲ್ಲಿ ಗುಡ್‌ ಫ್ರೈಡೇ ಕೂಡ ಒಂದು. ಇದು ಕ್ರೈಸ್ತ ಸಮುದಾಯದವರಿಗೆ ಮಹತ್ತರ ದಿನವಾಗಿದೆ. ಕ್ರೈಸ್ತ ಸಮುದಾಯದವರು ಗುಡ್‌ ಫ್ರೈಡೇಯನ್ನು ಆಚರಿಸುವ ಮುನ್ನ ಪಾಮ್‌ ಸಂಡೇ ಎನ್ನುವ ಹಬ್ಬವನ್ನು ಆಚರಿಸುತ್ತಾರೆ.


ಈ ಪಾಮ್‌ ಸಂಡೆಯನ್ನು 2024 ರಲ್ಲಿ ಮಾರ್ಚ್‌ 24 ರಂದು ಆಚರಿಸಲಾಗಿದ್ದು, ಈ ದಿನ ಯೇಸು ಕ್ರಿಸ್ತನು ಜೆರುಸೆಲೆಮ್‌ನ್ನು ಪ್ರವೇಶಿಸಿದರು ಎನ್ನಲಾಗುತ್ತದೆ.

ಗುಡ್‌ ಫ್ರೈಡೇ ನಂತರ 2024 ರ ಮಾರ್ಚ್‌ 31 ರಂದು ಭಾನುವಾರ ಈಸ್ಟರ್‌ನ್ನು ಆಚರಿಸಲಾಗುವುದು. ಹಾಗೇ 2024ರ ಗುಡ್‌ ಫ್ರೈಡೇಯನ್ನು ಮಾರ್ಚ್‌ 29 ರಂದು ಶುಕ್ರವಾರ ಆಚರಿಸಲಾಗುವುದು.

ಏಸುಕ್ರಿಸ್ತನನ್ನು ರೋಮನ್‌ ಅಧಿಕಾರಿಗಳು ಬಂಧಿಸಿ ಥಳಿಸುತ್ತಾರೆ. ನಂತರ ಕ್ಯಾಲ್ವರಿ ಪರ್ವತಗಳಲ್ಲಿ ಅವರನ್ನು ಶಿಲುಬೆಗೇರಿಸಲಾಗುತ್ತದೆ. ಈ ದಿನವನ್ನು ಗುಡ್‌ ಫ್ರೈಡೇ ಎಂದು ಕರೆಯುತ್ತಾರೆ ಎಂಬುದಕ್ಕೆ ಹಲವು ಸಿದ್ಧಾಂತಗಳಿವೆ.

ಇನ್ನು ಯರೂಶಲಂ ಅಥವಾ ಜೆರುಸಲೇಂನಲ್ಲಿ ಯೇಸು ಕ್ರಿಸ್ತನ ವಿರುದ್ಧ ಸಂಚು ರೂಪಿಸಿ ಮೋಸದಿಂದ ಶುಕ್ರವಾರದ ದಿನದಂದು ಶಿಲುಬೆಗೇರಿಸಲಾಯಿತು. ಈ ಶಿಲುಬೆಗೇರಿಸಿದ ಘಟನೆಯನ್ನು ಗುಡ್‌ ಫ್ರೈಡೇ ಎಂದು ಕರೆಯಲಾಗುತ್ತದೆ. ಈ ಘಟನೆಯನ್ನು ಕ್ರಿಶ್ಚಿಯನ್‌ ಧರ್ಮದ ಪ್ರಮುಖ ಧಾರ್ಮಿಕ ಗ್ರಂಥವಾದ ಬೈಬಲ್‌ನಲ್ಲಿ ವಿವರಿಸಲಾಗಿದೆ. ಗುಡ್‌ ಫ್ರೈಡೇಯು ಯೇಸುವಿನ ಮರಣದ ದಿನವಾಗಿದೆ. ಜಗತ್ತಿಗೆ ಪ್ರೀತಿ ಮತ್ತು ಸಹಾನುಭೂತಿಯ ಸಂದೇಶವನ್ನು ನೀಡಿದ ಜೀಸಸ್.

ನಂಬಿಕೆಯ ಪ್ರಕಾರ, ಅವರು ಪ್ರವಾದಿತ್ವವನ್ನು ಹೊಂದಿದ್ದರು, ಇದರಿಂದಾಗಿ ಯಹೂದಿಗಳಲ್ಲಿ ಯೇಸುವಿನ ಬಗ್ಗೆ ದ್ವೇಷ ಹುಟ್ಟಿಕೊಂಡಿತು. ಪ್ರವಾದಿತ್ವ ಎಂದರೆ ಒಬ್ಬರ ಪ್ರವಾದಿತ್ವದ ಬಗ್ಗೆ ಮಾತನಾಡುವುದು. ಯಹೂದಿಗಳ ಮೂಲಭೂತವಾದಿಗಳು ಯೇಸುಕ್ರಿಸ್ತನು ತನ್ನನ್ನು ದೇವರ ಮಗ ಎಂದು ಕರೆದುಕೊಳ್ಳುವುದನ್ನು ಅವರು ಇಷ್ಟಪಡಲಿಲ್ಲ.

ಅವರು ರೋಮನ್ನರಿಗೆ ಈ ಬಗ್ಗೆ ದೂರು ನೀಡಿದರು ಮತ್ತು ಶಿಲುಬೆಗೇರಿಸಿಬೇಕೆಂದು ಬೇಡಿಕೆಯನ್ನಿಟ್ಟರು. ಇನ್ನೊಂದು ನಂಬಿಕೆಯ ಪ್ರಕಾರ, ಚರ್ಚ್‌ನಲ್ಲಿ ರೋಮನ್‌ ತೆರಿಗೆದಾರರು ಅಸಭ್ಯ ವರ್ತನೆ ಮಾಡುತ್ತಿರುವುದನ್ನು ನೋಡಿರುತ್ತಾನೆ. ಇದರಿಂದ ದುಃಖಿತನಾದ ಯೇಸು ಅವರನ್ನು ಅಲ್ಲಿಂದ ಹೊಡೆದೋಡಿಸುತ್ತಾನೆ. ಪರಿಣಾಮವಾಗಿ, ರೋಮನ್ ಗವರ್ನರ್ ಯೇಸುವನ್ನು ಶಿಲುಬೆಗೇರಿಸುವ ಶಿಕ್ಷೆಯನ್ನು ವಿಧಿಸುತ್ತಾನೆ.


ಯೇಸುಕ್ರಿಸ್ತನನ್ನು ಶಿಲುಬೆಗೇರಿಸಿದ ಸ್ಥಳವನ್ನು ಗೊಲ್ಗೊಥಾ ಎಂದು ಕರೆಯಲಾಗುತ್ತದೆ. ಈ ಸ್ಥಳವು ಇಸ್ರೇಲ್ ರಾಜಧಾನಿ ಜೆರುಸಲೆಮ್‌ನ ಕ್ರಿಶ್ಚಿಯನ್ ಪ್ರದೇಶದಲ್ಲಿದೆ. ಈ ಸ್ಥಳವನ್ನೇ ಹಿಲ್ ಆಫ್ ದಿ ಕ್ಯಾಲ್ವರಿ ಎಂದು ಕರೆಯಲಾಗುತ್ತದೆ. ಈ ಸ್ಥಳದಲ್ಲಿ ಫ್ಲ್ಯಾಗೆಲೇಷನ್ ಚರ್ಚ್ ಇದೆ.

ಇನ್ನು ಗುಡ್‌ ಫ್ರೈಡೇಯ ಮಹತ್ವ ಏನೆಂದರೆ, ದೇವರು ಅಂದರೆ ಏಸುಕ್ರಿಸ್ತ ಜಗತ್ತನ್ನು ಅತಿಯಾಗಿ ಪ್ರೀತಿಸುತ್ತಾನೆ ಎಂದು ನಂಬಲಾಗಿದೆ. ಅವನು ತನ್ನನ್ನು ನಂಬಿದ ಜನರ ಪಾಪ ವಿಮೋಚನೆಗಾಗಿ ಪ್ರಾಣವನ್ನು ತ್ಯಾಗ ಮಾಡಿದನು. ಆ ಕಾರಣಕ್ಕೆ ಈ ದಿನವನ್ನು ಶೋಕ ಮತ್ತು ದುಃಖದ ದಿನವನ್ನಾಗಿ ಆಚರಿಸಲಾಗುತ್ತದೆ. ಗುಡ್‌ಫ್ರೈಡೇ ಏಸುವು ತನ್ನನ್ನು ನಂಬಿದವರ ಪಾಪ ವಿಮೋಚನೆಗೊಳಿಸಲು ತನ್ನ ಜೀವನವನ್ನು ತ್ಯಾಗ ಮಾಡಿದ ಪವಿತ್ರ ದಿನವೂ ಹೌದು.
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ

ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಬಿಸಿಎ…

6 hours ago

ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ

ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ Bhadravati police arrested…

6 hours ago

ರಿಪ್ಪನ್‌ಪೇಟೆ: ವಾಹನದಿಂದ ಬಿದ್ದ ಕರುವನ್ನು ಕಿಲೋಮೀಟರ್‌ಗಟ್ಟಲೆ ಎಳೆದೊಯ್ದ ಚಾಲಕ; ಕರು ಸ್ಥಿತಿ ಚಿಂತಾಜನಕ , ಸ್ಥಳೀಯರ ಆಕ್ರೋಶ !!

ರಿಪ್ಪನ್‌ಪೇಟೆ: ವಾಹನದಿಂದ ಬಿದ್ದ ಕರುವನ್ನು ಕಿಲೋಮೀಟರ್‌ಗಟ್ಟಲೆ ಎಳೆದೊಯ್ದ ಚಾಲಕ; ಕರು ಸ್ಥಿತಿ ಚಿಂತಾಜನಕ , ಸ್ಥಳೀಯರ ಆಕ್ರೋಶ !! A…

10 hours ago

ಈಸ್ಟ್‌ವೆಸ್ಟ್‌ ಬಸ್ ಸಂಸ್ಥೆ ಮಾಲೀಕ, ಮಾಜಿ ವಕ್ಫ್‌ ಬೋರ್ಡ್ ಅಧ್ಯಕ್ಷ ತಲ್ಕೀನ್ ಅಹ್ಮದ್ ನಿಧನ

ಈಸ್ಟ್‌ವೆಸ್ಟ್‌ ಬಸ್ ಮಾಲೀಕ ತಲ್ಕೀನ್ ಅಹ್ಮದ್ ನಿಧನ Talkeen Ahmed, owner of East West Bus institution and…

12 hours ago

ಪತ್ರಕರ್ತನ ಮನೆಗೆ ಕನ್ನ ; ₹6.57 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು

ಪತ್ರಕರ್ತನ ಮನೆಗೆ ಕನ್ನ ; ₹6.57 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು Thieves broke into journalist Shi.…

12 hours ago

ಚೋರಡಿ ಲಾಡ್ಜ್‌ನಲ್ಲಿ ಪೊಲೀಸರಿಗೆ ಚಾಕು ತೋರಿಸಿ ಐವರು ಪರಾರಿ; ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲು

ಚೋರಡಿ ಲಾಡ್ಜ್‌ನಲ್ಲಿ ಪೊಲೀಸರಿಗೆ ಚಾಕು ತೋರಿಸಿ ಐವರು ಪರಾರಿ; ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲು ಶಿವಮೊಗ್ಗ: ಅನುಮಾನಾಸ್ಪದವಾಗಿ ಲಾಡ್ಜ್‌ನಲ್ಲಿ ತಂಗಿದ್ದ…

22 hours ago