Headlines

ಒಡಹುಟ್ಟಿದ ಅಣ್ಣನನ್ನೇ ಸ್ಕೆಚ್ ಹಾಕಿ ಬರ್ಬರವಾಗಿ ಹತ್ಯೆಗೈದ ತಮ್ಮ – ಕಾರಣ ಕೇಳಿದ್ರೆ ಶಾಕ್ ಆಗ್ತೀರಾ..!! ಈ ಸುದ್ದಿ ನೋಡಿ | Crime News

ಒಡಹುಟ್ಟಿದ ಅಣ್ಣನನ್ನೇ ಸ್ಕೆಚ್ ಹಾಕಿ ಬರ್ಬರವಾಗಿ ಹತ್ಯೆಗೈದ ತಮ್ಮ – ಕಾರಣ ಕೇಳಿದ್ರೆ ಶಾಕ್ ಆಗ್ತೀರಾ..!! ಈ ಸುದ್ದಿ ನೋಡಿ


ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದಲ್ಲಿ ಗುರುವಾರ ಸಂಜೆ ಓರ್ವ ವ್ಯಕ್ತಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಆರೋಪಿಗಳು ಎಸ್ಕೇಪ್ ಆಗಿದ್ದರು. ಹೆದ್ದಾರಿ ಪಕ್ಕದಲ್ಲಿ ಕೊಲೆ ನೋಡಿದ ಜನರು ಗಾಬರಿಯಾಗಿದ್ದರು.

ಕೊಲೆಯಾದ ವ್ಯಕ್ತಿ ಸೊರಬ ತಾಲೂಕಿನ ಉಡಿನೀರು ಗ್ರಾಮದ ರಫಿಕ್ (39) ಎನ್ನುವುದು ಪೊಲೀಸರಿಗೆ ತನಿಖೆ ವೇಳೆ ತಿಳಿದುಬಂದಿದೆ.

ನಡೆದಿದ್ದೇನು..????

ಮೃತ ರಫ಼ಿಕ್ ನನ್ನು ಅವನ ಸ್ವಂತ ತಮ್ಮ ಇನಾಯತ್ ಹಾಗೂ ಅಕ್ಕನ ಮಗ ಸಮೀರ್ ಶಿವಮೊಗ್ಗಕ್ಕೆ ಶಾಪಿಂಗ್ ನೆಪದಲ್ಲಿ ಕರೆದುಕೊಂಡು ಬಂದು ಹಿಂದಿರುಗುವಾಗ ಮೊದಲು ಕಣ್ಣಿಗೆ ಖಾರದ ಪುಡಿ ಎರಚಿದ್ದಾರೆ. ಬಳಿಕ ತಂತಿಯಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾರೆ. ಕೊನೆಗೆ ಹೋಗುವಾಗ ಆತನ ಮೇಲೆ ಕಾರ್ ಕೂಡ ಹತ್ತಿಸಿದ್ದಾರೆ. ಆತ ಮೃತಪಟ್ಟಿರುವುದು ಖಚಿತವಾದ ಬಳಿಕ ಇಬ್ಬರು ಕಾರ್​ನಲ್ಲಿ ಅಲ್ಲಿಂದ ಎಸ್ಕೇಪ್ ಆಗಿದ್ದರು.

ತಮ್ಮನೇ ಅಣ್ಣನನ್ನು ಕೊಲೆ ಮಾಡಿದ್ದೇಕೆ..???

ಒಂದೂವರೆ ವರ್ಷದ ಹಿಂದೆ ರಫೀಕ್ ತನ್ನ ಸ್ವಂತ ತಮ್ಮ ಸಲೀಂನನ್ನು ಕೊಲೆ ಮಾಡಿದ್ದನು. ಈ ಪ್ರಕರಣದಲ್ಲಿ ಜೈಲು ಸೇರಿದ್ದನು. ಕೆಲವು ತಿಂಗಳ ಹಿಂದೆ ಬೇಲ್ ಮೇಲೆ ರಫಿಕ್ ಹೊರಗೆ ಬಂದಿದ್ದನು. ಸಲೀಂ ಕೊಲೆ ಪ್ರಕರಣದಲ್ಲಿ ರಫಿಕ್ ತಮ್ಮ ಹಾಗೂ ಕೊಲೆಯಾದ ಸಲೀಂನ ಅಣ್ಣ ಇನಾಯತ್ ದೂರುದಾರನಾಗಿದ್ದನು. ತಮ್ಮ ಕೊಲೆಯ ಪ್ರಕರಣದಲ್ಲಿ ಸಾಕ್ಷಿ ಹೇಳದಂತೆ ತಮ್ಮನಿಗೆ ಜೀವ ಬೆದರಿಕೆ ಹಾಕಿದ್ದನು. ಇದಕ್ಕೆ ನಾವೇ ನಿನ್ನೆ ಜೀವ ತೆಗೆಯುತ್ತೇವೆ. ಇದಕ್ಕಾಗಿ ಎಲ್ಲ ಮೊದಲೇ ಇನಾಯತ್ ಎಲ್ಲ ಪ್ಲ್ಯಾನ್ ಮಾಡಿಕೊಂಡೇ ಬಂದಿದ್ದನು. ಪ್ಲ್ಯಾನ್ ನಂತೆ ರಫಿಕ್​ನನ್ನು ನಂಬಿಸಿ ಶಿವಮೊಗ್ಗಕ್ಕೆ ಶಾಪಿಂಗ್ ನೆಪದಲ್ಲಿ ಕರೆತಂದಿದ್ದರು. ಊರಿಗೆ ವಾಪಸ್ ಹೋಗುವಾಗ ತಮ್ಮ ಸಲೀಂ ಕೊಲೆ ಪ್ರಕರಣದ ಸೇಡಿಗಾಗಿ ಅಣ್ಣ ರಫಿಕ್​ನನ್ನು ತಮ್ಮ ಇನಾಯತ್ ಮತ್ತು ಅಕ್ಕನ ಮಗ ಸಮೀರ್ ಇಬ್ಬರು ಸೇರಿ ಕೊಲೆ ಮಾಡಿದ್ದಾರೆ.

ಹೀಗೆ ಒಂದೂವರೆ ವರ್ಷದ ಹಿಂದೆ ಆಸ್ತಿ ಮತ್ತು ವೈಯಕ್ತಿಕ ವಿಚಾರಕ್ಕೆ ಒಡಹುಟ್ಟಿದ ತಮ್ಮನನ್ನೇ ಅಣ್ಣ ರಫಿಕ್ ಮರ್ಡರ್ ಮಾಡಿದ್ದನು. ಈ ಕೊಲೆ ಪ್ರಕರಣದಲ್ಲಿ ಜೈಲಿಗೆ ಸೇರಿದ್ದ ಅಣ್ಣ ರಫಿಕ್ ಕೆಲವು ತಿಂಗಳ ಹಿಂದೆ ಬೇಲ್ ಮೇಲೆ ಹೊರಗೆ ಬಂದಿದ್ದನು. ಈ ನಡುವೆ ಕುಟುಂಬದಲ್ಲಿ ದ್ವೇಷದ ಹೊಗೆ ಹಾಗೆ ಇತ್ತು. ಇನಾಯತ್, ತಮ್ಮನನ್ನು ಕೊಲೆ ಮಾಡಿದ ರಫಿಕ್​ಗೆ ಆಸ್ತಿಯಲ್ಲಿ ಯಾವುದೇ ಪಾಲು ನೀಡದಂತೆ ತಂದೆಗೆ ಖಡಕ್ ಆಗಿ ಹೇಳಿದ್ದನು. ಸಲೀಂಗೆ ಬರುವ ಎರಡು ಎಕರೆ ಪಾಲು ಇನಾಯತ್​ಗೆ ಕೊಡುವುದಾಗಿ ತಂದೆ ಹೇಳಿದ್ದನು. ಆದ್ರೆ, ಇನಾಯತ್ ಮಾತ್ರ ರಫಿಕ್​ಗೆ ಆಸ್ತಿ ಹಂಚಿಕೆಗೆ ವಿರೋಧ ಮಾಡಿದ್ದನು.

ಅಣ್ಣನ ಜೊತೆಯಲ್ಲಿದ್ದು ಕೊಲೆಗೆ ಸ್ಕೆಚ್ ಹಾಕಿದ್ದ ತಮ್ಮ…

ಈ ನಡುವೆ ಇನಾಯತ್ ಮೇಲ್ನೋಟಕ್ಕೆ ತಮ್ಮನ ಕೊಲೆ ಮಾಡಿದ ಅಣ್ಣನ ಜೊತೆ ಚೆನ್ನಾಗಿಯೇ ಇದ್ದಂತೆ ಡ್ರಾಮಾ ಮಾಡುತ್ತಿದ್ದನು. ಆದ್ರೆ, ಒಳಗೆ ಮಾತ್ರ ಆತನ ರಕ್ತ ಕುದಿಯುತ್ತಿತ್ತು. ತಮ್ಮನ ಕೊಲೆ ಮಾಡಿದ ಕಿರಾತಕ ಅಣ್ಣನನ್ನು ಸುಮ್ಮನೆ ಬಿಡಬಾರದು ಎನ್ನುವ ತೀರ್ಮಾನಕ್ಕೆ ಬಂದಿದ್ದನು. ನಿನ್ನೆ ಇನಾಯತ್ ಪ್ಲ್ಯಾನ್ ಮಾಡಿ ತನ್ನ ಒಡಹುಟ್ಟಿದ ಅಣ್ಣನ ಬರ್ಬರ ಹತ್ಯೆ ಮಾಡಿದ್ದಾನೆ. ಕೊಲೆಯ ಬಳಿಕ ಇನಾಯತ್ ಮತ್ತು ಕೊಲೆಯಾದ ರಫಿಕ್ ಅಕ್ಕನ ಮಗ ಸಮೀರ್ ಇಬ್ಬರನ್ನು ಬಂಧಿಸಲಾಗಿದೆ.

ಆನಂದಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲು ಆಗಿದೆ.

ಒಟ್ಟಾರೆಯಾಗಿ ಕುಟುಂಬದಲ್ಲಿ ಶುರುವಾದ ಆಸ್ತಿ ವಿವಾದವು ಅಣ್ಣ ಮತ್ತು ತಮ್ಮ ಇಬ್ಬರನ್ನು ಬಲಿ ಪಡೆದಿದೆ. ಅಣ್ಣನ ಕೊಲೆ ಕೇಸ್​ನಲ್ಲಿ ಈಗ ತಮ್ಮನು ಜೈಲು ಸೇರಿದ್ದಾನೆ. ಮೂವರು ಗಂಡು ಮಕ್ಕಳಲ್ಲಿ ಇಬ್ಬರು ಕೊಲೆಯಾಗಿದ್ದಾರೆ.

Leave a Reply

Your email address will not be published. Required fields are marked *

Exit mobile version