Headlines

ಬಟ್ಟೆಮಲ್ಲಪದಲ್ಲಿ ಶ್ರೀ ನಾರಾಯಣ ಗುರು ಮಂದಿರವನ್ನು ವಿರೂಪಗೊಳಿಸಿ ಬ್ಯಾನರ್ ಕಿತ್ತುಹಾಕಿದ ಕಿಡಿಗೇಡಿಗಳು – ದೂರು ದಾಖಲು | Hosanagara

ಬಟ್ಟೆಮಲ್ಲಪದಲ್ಲಿ ಶ್ರೀ ನಾರಾಯಣ ಗುರು ಮಂದಿರವನ್ನು ವಿರೂಪಗೊಳಿಸಿ ಬ್ಯಾನರ್ ಕಿತ್ತುಹಾಕಿದ ಕಿಡಿಗೇಡಿಗಳು – ದೂರು ದಾಖಲು

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಬಟ್ಟೆಮಲ್ಲಪ್ಪ ಗ್ರಾಮದ ಪುರಾತನ ಪ್ರಸಿದ್ದ ಶ್ರೀ ನಾರಾಯಣ ಗುರು ಮಂದಿರವನ್ನು ಕಿಡಿಗೇಡಿಗಳು ಜೆಸಿಬಿಯಿಂದ ಧ್ವಂಸಗೊಳಿಸಿ, ಬ್ಯಾನರ್ ನ್ನು ಕಿತ್ತು ಹಾಕಿರುವ ಘಟನೆ ನಡೆದಿದೆ.


ಬಟ್ಟೆಮಲ್ಲಪ್ಪ ಗ್ರಾಮದ ಐದಾರು ದಶಕಗಳ ಹಿಂದಿನ ಶ್ರೀ ನಾರಾಯಣ ಗುರು ಸಮಿತಿಗೆ ಸೇರಿದ ಮಂದಿರದ ಹಳೆಯ ಅಡಿಪಾಯನ್ನು ವಿರೂಪಗೊಳಿಸಿ ವಿಕೃತಿ ಮೆರೆದಿರುವ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಈ ಬಗ್ಗೆ ಸಮಿತಿಯವರು ಪ್ರಶ್ನಿಸಲು ಹೋದಾಗ ಸಮಿತಿಯ ಸದಸ್ಯರಿಗೆ ಅವಾಚ್ಯವಾಗಿ ನಿಂದಿಸಿ ಬೆದರಿಕೆ ಹಾಕಿದ್ದಾರೆ,ಸ್ಥಳದಲ್ಲಿ ಈ ಸಂಧರ್ಭದಲ್ಲಿ ಸ್ಥಳದಲ್ಲಿ ಗೊಂದಲವುಂಟಾಗಿದೆ.


ಈ ಬಗ್ಗೆ ಶ್ರೀ ನಾರಾಯಣ ಗುರು ಸಮಿತಿಯ ಗಣಪತಿ ಎಂಬುವವರು ಹೊಸನಗರ ಪೊಲೀಸ್ ಠಾಣೆಗೆ ಹಲವರ ವಿರುದ್ಧ ದೂರು ಸಲ್ಲಿಸಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

About The Author

Leave a Reply

Your email address will not be published. Required fields are marked *

Exit mobile version