Ripponpete | ಧಾರ್ಮಿಕ ಆಚರಣೆಗಳಿಂದ ಭಾಂದವ್ಯ ವೃದ್ದಿ – ಮಳಲಿ ಶ್ರೀಗಳು

ಧಾರ್ಮಿಕ ಆಚರಣೆಗಳಿಂದ ಭಾಂದವ್ಯ ವೃದ್ದಿ – ಮಳಲಿ ಶ್ರೀಗಳು


ರಿಪ್ಪನ್‌ಪೇಟೆ : ಇಂದಿನ ಯುವಜನಾಂಗ ಹಬ್ಬ ಹರಿದಿನಗಳ ಆಚರಣೆಯಿಂದ ದೂರವಾಗುತ್ತಿದ್ದಾರೆ.ಹಿಂದಿನ ತಲೆಮಾರಿನವರು ಈ ಸಂಬAಧವನ್ನು ಬೆಸೆಯುವ ಮೂಲಕ ಸಂಬಂಧಿಕರಲ್ಲಿ  ಭಾಂದವ್ಯವನ್ನು  ಬೆಳಸಲು ಕೂಳೆಪಂಚಮಿ ಹಬ್ಬದಂತಹ ಹಲವು ಹಬ್ಬದ ಆಚರಣೆಗಳಿಂದಾಗಿ ನಮ್ಮ ಸಂಸ್ಕೃತಿ ಸಂಸ್ಕಾರ  ಉಳಿಸುವಲ್ಲಿ ಸಾಧ್ಯವಾಗಿದೆ ಎಂದು ಮಳಲಿಮಠದ ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿ ಹೇಳಿದರು.

ಪಟ್ಟಣದ ಸಮೀಪದ ಕುಕ್ಕಳಲೇ ಗ್ರಾಮದಲ್ಲಿ  ಕೂಳೆಪಂಚಮಿಯ ಅಂಗವಾಗಿ ಆಯೋಜಿಸಲಾದ ವಿಶೇಷ ಕೂಳೆಪಂಚಮಿ ಹಬ್ಬದ ಶಿವಪೂಜಾನುಷ್ಟಾನ ಮತ್ತು ಧಾರ್ಮಿಕ ಧರ್ಮಸಭೆಯ ದಿವ್ಯಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡಿ ಕೂಳೆಪಂಚಮಿ ಅಂದರೆ ರೈತರು ಬೆಳೆದ ಫಸಲು ಬೆಳೆದು ಕಟಾವು ಮಾಡಿದ ನಂತರದಲ್ಲಿ ಫಸಲ ಬುಡದಲ್ಲಿ ಬೆಳೆ ಪುನ: ಚಿಗುರುತ್ತದೆ ಹಾಗೆ ಕುಟುಂಬದಲ್ಲಿ ವಂಶ ವೃದ್ಧಿಯಾಗುವುದೆಂಬ ನಂಬಿಕೆಯೇ ಈ ಕೂಳೆ ಪಂಚಮಿ ಆಚರಣೆ ಪ್ರತೀತಿಯಾಗಿದೆ. ಇಂದಿನ ಒತ್ತಡದ ಬದುಕಿನಿಂದಾಗಿ ಧಾರ್ಮಿಕ ಆಚರಣೆಯಂತಹ ಕಾರ್ಯದಲ್ಲಿ ತೊಡಗಿಕೊಳ್ಳುವುದು ಕಡಿಮೆಯಾಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿ ಇಂದಿನ ಯುವಜನಾಂಗ ದುಡಿಮೆ ಕಾರ್ಯದಲ್ಲಿ ಮಗ್ನರಾಗಿದ್ದು ಇದರಿಂದಾಗಿ ಧಾರ್ಮಿಕ ಕಾರ್ಯದಿಂದ ದೂರವಾಗುತ್ತಿದ್ದಾರೆ. ದುಡಿಮೆಯೊಂದಿಗೆ ಧಾರ್ಮಿಕ ಆಚರಣೆಯಲ್ಲಿ ಅಲ್ಪ ಸಮಯವನ್ನು ನಿಗದಿಪಡಿಸಿಕೊಂಡು ಭಾಗವಹಿಸುವಂತೆ ಕರೆ ನೀಡಿದರು.

ಈ ಕೂಳೆ ಪಂಚಮಿಯ ಧಾರ್ಮಿಕ ಕಾರ್ಯಕ್ರಮದಲ್ಲಿ 75 ವರ್ಷ ಮೇಲ್ಪಟ್ಟ ಹಿರಿಯರಾದ ನಿವೃತ್ತ ಶಿಕ್ಷಕ ತಾತೇಶ್ವರಪ್ಪಗೌಡ, ಜಿ.ಎಂ.ದುಂಡರಾಜ್‌ಗೌಡ,ಡಿ.ಎಸ್.ಸುಶೀಲಮ್ಮ ದೊಡ್ಡಿನಕೊಪ್ಪ, ಕುಬೇರಪ್ಪ ಯಾನೆ ಪುಟ್ಟಸ್ವಾಮಿಗೌಡ, ಷಣ್ಮುಖಪ್ಪಗೌಡ,ಹಾಲೇಶಪ್ಪಗೌಡ ಅಲುವಳ್ಳಿ,ಪಾರ್ವತಮ್ಮ ಅಚಾಪುರ,ದೇವಿರಮ್ಮ ಅಲುವಳ್ಳಿ, ಮುರಿಗಮ್ಮ ಚಂದ್ರಶೇಖರಪ್ಪಗೌಡ ಖ್ಯರಾ,ಹೆರಳಮ್ಮರೇವಪ್ಪಗೌಡರು ಕೆರೆಹಿತ್ತಲು,ಓಂಕಾರಮ್ಮ ಚಂದ್ರುಮುಖಿ,ಜಯಮ್ಮ ಹಾಲುಗುಡ್ಡೆ, ಸೋಮೇಶ್ವರಮ್ಮ,ಹಾಗೂ ರಾಷ್ಟ್ರೀಯ ಮಟ್ಟಕ್ಕೆ ಕಬ್ಬಡಿ ಪಂದ್ಯಾವಳಿಯಲ್ಲಿ ಚಿಕ್ಕವಯಸ್ಸಿನಲ್ಲಿ ಹಿರಿಯ ಸಾಧನೆ ಮಾಡಿದ ಕು.ಜ್ಞಾನ ಎನ್.ಮತ್ತು ಗ್ರೀಷ್ಮಾ ಸುಧಾ ರೇವಣಪ್ಪ ರನ್ನು ಗ್ರಾಮಸ್ಥರು ಶ್ರೀಗಳ ಸಮ್ಮುಖದಲ್ಲಿ ಸನ್ಮಾನಿಸಿದರು.

ಈ ಸಮಾರಂಭದಲ್ಲಿ ಶಿವಗಂಗೆ ಯೋಗೇಶ್ ಗೌಡ,ಆಚಾಪುರ ಶಾಂತಪ್ಪಗೌಡ,ಕುಣೆಹೊಸೂರು ಕುಮಾರಗೌಡ,ಎನ್.ವರ್ತೇಶ್, ದಾನೇಶ ಕೆದಲುಗುಡ್ಡೆ,ಹೆಚ್.ಎಸ್.ರವಿ ಹಾಲುಗುಡ್ಡೆ,ನೇಮಾಕ್ಷಿಗೌಡರು,ಹೆಚ್.ಎಸ್.ಕೀರ್ತಿಗೌಡ ಹಾರೋಹಿತ್ತಲು,ಸ್ವಾಮಿಗೌಡ ನೆವಟೂರು,ಕುಮಾರಗೌಡ ದೂನ,ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಹೆಚ್.ಎಸ್.ಕೀರ್ತಿಗೌಡ ಹಾರೋಹಿತ್ತಲು ಸ್ವಾಗತಿಸಿದರು,ಕೆ.ಬಿ.ದಾನೇಶ ನಿರೂಪಿಸಿದರು.


ನಿಧನ ವಾರ್ತೆ


ಖೈರಾ ಶೇಖರಪ್ಪಗೌಡ (84)

ರಿಪ್ಪನ್‌ಪೇಟೆ;-ಜಮೀದ್ದಾರ ಖೈರಾ ಶೇಖರಪ್ಪಗೌಡ ತಮ್ಮ ಸ್ವಗೃಹದಲ್ಲಿ ಇಂದು ಮುಂಜಾನೆ ನಿಧನರಾಗಿದ್ದಾರೆ.

ಮೃತರಿಗೆ ಪತ್ನಿ ಸೇರಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಅಪ್ತ ಕಾರ್ಯದರ್ಶಿ ಕೆ.ಆರ್.ರಾಜು ಹಾಗೂ ನಾಲ್ವರು ಪುತ್ರರು ಇಬ್ಬರು ಪುತ್ರಿಯರು ಇದ್ದಾರೆ.


ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ ಅಪಘಾತ – ತಪ್ಪಿದ ಭಾರಿ ಅನಾಹುತ

ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ ಅಪಘಾತ – ತಪ್ಪಿದ ಭಾರಿ ಅನಾಹುತ A school bus lost control…

3 hours ago

ಶಿಕ್ಷಕರ ಗೌರವದ ಹೆಸರಿನಲ್ಲಿ ರಾಜಕೀಯ ಬೇಡ; ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಶಿಕ್ಷಕರ ಗೌರವದ ಹೆಸರಿನಲ್ಲಿ ರಾಜಕೀಯ ಬೇಡ; ಬಿಜೆಪಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ Congress leaders in Sagar have hit…

5 hours ago

ಶಿಕ್ಷಣ ಸೇವೆಗೆ ಸಂದ ಪ್ರತಿಷ್ಠಿತ ಗೌರವ; ಅರಸಾಳಿನ ಸುಮಾ ಎಸ್.ಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ

ಶಿಕ್ಷಣ ಸೇವೆಗೆ ಸಂದ ಪ್ರತಿಷ್ಠಿತ ಗೌರವ; ಅರಸಾಳಿನ ಸುಮಾ ಎಸ್.ಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ Summa S.…

8 hours ago

ರಿಪ್ಪನ್‌ಪೇಟೆ ಸುತ್ತಮುತ್ತ ನಾಳೆ ಕರೆಂಟ್ ಇಲ್ಲ! ಯಾವೆಲ್ಲ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯ? ಈ ಸುದ್ದಿ ನೋಡಿ

ರಿಪ್ಪನ್‌ಪೇಟೆ ಸುತ್ತಮುತ್ತ ನಾಳೆ ಕರೆಂಟ್ ಇಲ್ಲ! ಯಾವೆಲ್ಲ ಪ್ರದೇಶಗಳಿಗೆ ವಿದ್ಯುತ್ ವ್ಯತ್ಯಯ? ಈ ಸುದ್ದಿ ನೋಡಿ Power outage in…

12 hours ago

ಹಿರಿಯ ನಾಗರಿಕರಿಂದ ನಿವೃತ್ತ ಸರ್ಕಾರಿ ನೌಕರರಿಗೆ ವಿಶೇಷ ಸನ್ಮಾನ

ಹಿರಿಯ ನಾಗರಿಕರಿಂದ ನಿವೃತ್ತ ಸರ್ಕಾರಿ ನೌಕರರಿಗೆ ವಿಶೇಷ ಸನ್ಮಾನ Retired government employees were specially honoured by senior…

15 hours ago

ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು: ಶಾಸಕ ಬೇಳೂರು ಗೋಪಾಲಕೃಷ್ಣ

ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದು: ಶಾಸಕ ಬೇಳೂರು ಗೋಪಾಲಕೃಷ್ಣ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಕರೆತಂದರೆ ₹10…

1 day ago