Headlines

ಹೊಸನಗರ ತಾಲೂಕಿನ ಯುವತಿಗೆ ಕೆಎಫ಼್ ಡಿ(KFD) ಪಾಸಿಟಿವ್, ಸ್ಥಿತಿ ಗಂಭೀರ – ಮಣಿಪಾಲ್ ಗೆ ರವಾನೆ

ಹೊಸನಗರ ತಾಲೂಕಿನ ಯುವತಿಗೆ ಕೆಎಫ಼್ ಡಿ(KFD) ಪಾಸಿಟಿವ್, ಸ್ಥಿತಿ ಗಂಭೀರ – ಮಣಿಪಾಲ್ ಗೆ ರವಾನೆ
ಹೊಸನಗರ ತಾಲೂಕಿನ 18 ವರ್ಷದ ಯುವತಿಗೆ ಕೆಎಫ್‌ಡಿ (ಮಂಗನ ಕಾಯಿಲೆ) ಪಾಸಿಟಿವ್ ಬಂದಿದ್ದು ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ತಾಲೂಕಿನ ಅರಮನೆಕೊಪ್ಪದ ಗ್ರಾಮದ ವ್ಯಾಪ್ತಿಯ ಯುವತಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು ಕೆಎಫ್‌ಡಿ ಟೆಸ್ಟ್ ಮಾಡಲಾಗಿತ್ತು. ಮೊದಲ ಟೆಸ್ಟ್‌ನಲ್ಲಿ ನೆಗೆಟಿವ್, ಎರಡನೇ ಬಾರಿ ಆರ್‌ಟಿಸಿಪಿಆರ್ ಟೆಸ್ಟ್ ಮಾಡಿದಾಗ ಪಾಸಿಟಿವ್ ಬಂದಿದೆ.

ಮೂರು ದಿನಗಳ ಕಾಲ ಮೆಗ್ಗಾನ್ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದ್ದು ಶುಕ್ರವಾರ ಸಂಜೆ ಉಡುಪಿಯ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಹೊಸನಗರ ತಾಲೂಕಿನಲ್ಲಿ ಈ ವರ್ಷದ ಮೊದಲ ಪ್ರಕರಣ ಇದಾಗಿದ್ದು, ಅರಮನೆಕೊಪ್ಪ ವ್ಯಾಪ್ತಿಯಲ್ಲಿ ಈ ಹಿಂದೆ ಕೆಎಫ್‌ಡಿ ಪ್ರಕರಣಗಳು ವರದಿಯಾಗಿಲ್ಲ. ಈ ಬಾರಿ ಶರಾವತಿ ಹಿನ್ನೀರು ತಗ್ಗಿದ ಹಿನ್ನೆಲೆ ಪ್ರಾಣಿಗಳ ಮೂಲಕ ವೈರಸ್‌ಗಳು ವರ್ಗಾವಣೆಯಾಗಿರಬಹುದು ಎನ್ನಲಾಗುತ್ತಿದೆ.

About The Author

Leave a Reply

Your email address will not be published. Required fields are marked *

Exit mobile version