Headlines

ವಿಚ್ಚೇದನ ನೀಡದಿದ್ದಲ್ಲಿ ಅಶ್ಲೀಲ ವಿಡಿಯೋ ವೈರಲ್ ಮಾಡುವುದಾಗಿ ಪತ್ನಿಗೇ ಬ್ಲಾಕ್ ಮೇಲ್ ಮಾಡಿದ ಪತಿರಾಯ – ಮುಂದೇನಾಯ್ತು ಗೊತ್ತಾ..??

ವಿಚ್ಚೇದನ ನೀಡದಿದ್ದಲ್ಲಿ ಅಶ್ಲೀಲ ವಿಡಿಯೋ ವೈರಲ್ ಮಾಡುವುದಾಗಿ ಪತ್ನಿಗೇ ಬ್ಲಾಕ್ ಮೇಲ್ ಮಾಡಿದ ಪತಿರಾಯ – ಮುಂದೇನಾಯ್ತು ಗೊತ್ತಾ..??

ತನ್ನ ಪತ್ನಿಯ ಅಶ್ಲೀಲ ವಿಡಿಯೋ ಇಟ್ಟುಕೊಂಡು ಡೈವೋರ್ಸ್ ನೀಡುವಂತೆ ಬ್ಲಾಕ್‌ಮೇಲ್ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದ್ದು ಘಟನೆ ಸಂಬಂಧ ಆರೋಪಿ ಬೆಳಗಾವಿಯ ಕಿರಣ್ ಪಾಟೀಲ್ ಎಂಬಾತನನ್ನು ಬಂಧಿಸಲಾಗಿದೆ.

ಪತ್ನಿ ಬುದ್ಧಿ ಹೇಳಿದರೂ ಕೇಳ ಪತಿ. ಡೈವೋರ್ಸ್‌ ಗಾಗಿ ಪತ್ನಿ ಅಶ್ಲೀಲ್ ವಿಡಿಯೋ ಮಾಡಿಕೊಂಡಿರುವ ವಿಕೃತ ಪತಿರಾಯ. ಪತ್ನಿಯೊಂದಿಗೆ ಏಕಾಂತದಲ್ಲಿದ್ದಾಗಿನ ಫೋಟೊ ವಿಡಿಯೋಗಳು ರೆಕಾರ್ಡ್. ಅಶ್ಲೀಲ ವಿಡಿಯೋ ಇಟ್ಟುಕೊಂಡು ಡೈವೋರ್ಸ್ ಕೊಡುವಂತೆ ಪತ್ನಿಗೆ ಬ್ಲಾಕ್ ಮೇಲ್ ಮಾಡಿರುವ ಪತಿ. ಡೈವೋರ್ಸ್ ಕೊಡದಿದ್ರೆ ಅಶ್ಲೀಲ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವುದಾಗಿ ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿದ ಪತ್ನಿಗೇ ಬೆದರಿಕೆ ಹಾಕಿರುವ ಕಿರಾತಕ.

ಗಂಡನ ಈ ವಂಚನೆ ಬಗ್ಗೆ ಆಘಾತಕ್ಕೆ ಒಳಗಾಗಿರೋ ಪತ್ನಿ. ಸಾಕಷ್ಟು ಬುದ್ಧಿ ಹೇಳಿದ್ರೂ ಕೇಳದ ಗಂಡನ ವಿರುದ್ಧ ಬೆಳಗಾವಿ ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ ಪತ್ನಿ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತಿ ಕಿರಣ್ ಪಾಟೀಲ್ ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಪತ್ನಿಯ ಡೈವೋರ್ಸ್ ಪಡೆಯಲು ದಿನನಿತ್ಯ ಬ್ಲಾಕ್‌ಮೇಲ್ ಮಾಡ್ತಿದ್ದ ಪತಿರಾಯ. ಪೊಲೀಸರು ಬಂಧಿಸಲು ಮನೆಗೆ ಬಂದಾಗ ಆತ್ಮಹತ್ಯೆಯ ಹೈಡ್ರಾಮಾ ಮಾಡಿದ್ದಾನೆ. ಆದರೆ ಪೊಲೀಸರು ಆರೋಪಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಜೈಲಿಗೆ ದಬ್ಬಿದ್ದಾರೆ.

ಮದುವೆಗಳು ಸ್ವರ್ಗದಲ್ಲಿ ನಡೆಯುತ್ತವೆ ಅಂತಾ ಹೇಳ್ತಾರೆ. ಆದರೆ ಇಂಥ ಘಟನೆಗಳು ನೋಡಿದಾಗ ಮದುವೆ ನರಕದಲ್ಲಿ ಕೊನೆಗೊಳ್ಳುವ ಬಗ್ಗೆ ಮುಚ್ಚಿಡಲಾಗಿದೆಯೇ ಎಂಬ ಅನುಮಾನ ಮೂಡಿಸುತ್ತದೆ. ಹಿಂದು ವಿವಾಹ ಪದ್ಧತಿಯಲ್ಲಿ ಮದುವೆಗೆ ತುಂಬಾ ಮಹತ್ವವಿದೆ. ಪತಿಯನ್ನು ದೇವರಿಗೆ ಹೋಲಿಕೆ ಮಾಡಲಾಗಿದೆ.

ಪತಿಯೇ ತನ್ನ ದೇವರೆಂದು ನಂಬಿಕೊಂಡು ತನ್ನವರನ್ನು ಸರ್ವಸ್ವವನ್ನು ತೊರೆದು ಬರುವ ಪತ್ನಿಗೆ ಅವನೇ ಮೋಸ ಮಾಡಿದರೆ ಯಾರು ಗತಿ? ಈ ಪ್ರಕರಣವೇ ನೋಡಿ, ನೂರಾರು ಜನರ ಮುಂದೆ ಸಪ್ತಪದಿ ತುಳಿದು ತಾಳಿ ಕಟ್ಟಿದ ಗಂಡನೇ ಪತ್ನಿಗೆ ವಿಲನ್ ಆಗಿ ಪರಿಣಮಿಸಿದ್ದಾನೆ. ಡೈವರ್ಸ್ ಕೊಡು ಇಲ್ಲದಿದ್ರೆ ಅಶ್ಲೀಲ ವಿಡಿಯೋ ವೈರಲ್ ಮಾಡ್ತಿನಿ ಎಂದು ಬ್ಲಾಕ್ ಮೇಲ್ ಮಾಡ್ತಿರೋ ಪತಿರಾಯ. ಅದೆಷ್ಟೋ ಮಹಿಳೆಯರು ಬದುಕು ಇಂಥ ವಿಕೃತ ಜನಗಳಿಂದ ನರಕವಾಗಿರುವುದು ಸುಳ್ಳಲ್ಲ.

Leave a Reply

Your email address will not be published. Required fields are marked *

Exit mobile version