ಪಲ್ಸರ್ ಬೈಕ್ ನ್ನು ಉಡುಗೊರೆಯಾಗಿ ಕೊಟ್ಟು, ಸರ್ಕಾರಿ ಶಾಲೆ ಶಿಕ್ಷಕನಿಗೆ ಬೀಳ್ಕೊಡುಗೆ ನೀಡಿದ ಗ್ರಾಮಸ್ಥರು|
16 ವರ್ಷ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕರೊಬ್ಬರಿಗೆ ಗ್ರಾಮಸ್ಥರು, ಹಿರಿಯ ವಿದ್ಯಾರ್ಥಿಗಳು ಪಲ್ಸರ್ ಬೈಕ್(pulsar bike) ಉಡುಗೊರೆಯಾಗಿ ನೀಡಿ ತಮ್ಮ ನೆಚ್ಚಿನ ಶಿಕ್ಷಕ ಸೆಂಡ್ ಆಫ್(sendoff) ಮಾಡಿರುವ ಘಟನೆ ಸಾಗರ(sagara) ತಾಲೂಕಿನ ಕುಗ್ರಾಮ ವಳೂರಿನ ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಶಿಕ್ಷಕರಿಗೆ ಆಶ್ಚರ್ಯವಾಗುವಂತೆ, ಎಲ್ಲಾ ಗ್ರಾಮಸ್ಥರು ಒಗ್ಗೂಡಿ ಬೈಕ್ ಅನ್ನು ಉಡುಗೊರೆಯಾಗಿ ಖರೀದಿಸಿದ್ದಾರೆ.ಬೈಕ್ ನ ಎಕ್ಸ್ ಶೋರೂಂ ದರದಂತೆ ರೂ.1.10 ಲಕ್ಷಗಳಾಗಿದೆ ಎನ್ನಲಾಗಿದೆ.
ಸಾಗರ ತಾಲೂಕಿನ ಕುಗ್ರಾಮ ವಳೂರಿನ ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದ ಸಂತೋಷ್ ಕಾಂಚನ್ ಅವರು ಕುಂದಾಪುರದ(Kundapura) ವಾರಾಹಿ ಸರ್ಕಾರಿ ಶಾಲೆಗೆ ವರ್ಗಾವಣೆಗೊಂಡಿದ್ದಾರೆ.
ಈ ಹಿನ್ನಲೆಯಲ್ಲಿ ಶಾಲೆ ಆವರಣದಲ್ಲಿ ಅವರಿಗಾಗಿ ಹೃದಯಸ್ಪರ್ಶಿ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಗಿತ್ತು.ಈ ವೇಳೆ ಅವರಿಗೆ , ಹಿರಿಯ ವಿದ್ಯಾರ್ಥಿಗಳು ಪಲ್ಸರ್ ಬೈಕ್ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.
ಅಂದ ಹಾಗೇ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವಳೂರು ಗ್ರಾಮ. ಬಹುತೇಕ ಕುಣಬಿ ಎಂಬ ಕಾನುವಾಸಿ ಸಮುದಾಯವಿರುವ ವಿರಳ ಮನೆಗಳ ಊರು ಆಗಿದ್ದು 2007ರಲ್ಲಿ ಶಿಕ್ಷಕನಾಗಿ ಬಂದಾಗ ಸಂತೋಷ್ ಗೆ 20 ವರ್ಷ. ಬರೊಬ್ಬರಿ 16 ವರ್ಷ ಇದೇ ಹಳ್ಳಿಯಲ್ಲಿ ಸೇವೆ. ಇಬ್ಬರೇ ಶಿಕ್ಷಕರಿರುವ ( 1 ರಿಂದ 7 ), ಕೇವಲ ಇಪತ್ತು ಮಕ್ಕಳಿರುವ ಶಾಲೆ. ಊರಲ್ಲೇ ಇದ್ದು ಮಕ್ಕಳಿಗೆ ಪಾಠ ಹೇಳುತಿದ್ದರು.
ಊರಲ್ಲಿ ಯಾರಿಗಾದರು ಅನಾರೋಗ್ಯ ಉಂಟಾದರೆ ಇವರ ಹಳೇ ಬೈಕ್ ಆಂಬ್ಯುಲೆನ್ಸ್(ambulance) ಆಗಿತ್ತು ಹೀಗಾಗಿ ಈ ಋಣಕ್ಕೆ ಬಡ ಜನರು ಹಣ ಸಂಗ್ರಹಿಸಿ ಬೈಕ್ ಗಿಫ್ಟ್ ನೀಡಿದ್ದಾರೆ ಎನ್ನಲಾಗಿದೆ.
ಗ್ರಾಮಸ್ಥರು, ಹಿರಿಯ ವಿದ್ಯಾರ್ಥಿಗಳೆಲ್ಲ ಸೇರಿ ಬೈಕ್ ಉಡುಗೊರೆಯಾಗಿ ನೀಡಿ ಶಿಕ್ಷಕರೊಬ್ಬರಿಗೆ ಬೀಳ್ಕೊಡುಗೆ ನೀಡಿರುವುದು ವಿಭಿನ್ನವಾಗಿದೆ. ಊರಿನವರ ಮನಸಲ್ಲಿ ಶಿಕ್ಷಕ ಸಂತೋಷ್ ಕಾಂಚನ್ ಅಚ್ಚಾಗಿ ಉಳಿದಿರುವುದಕ್ಕೆ ಇದು ಸಾಕ್ಷಿಯಾಗಿದೆ.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್