Headlines

ರಿಪ್ಪನ್‌ಪೇಟೆ : ಮೃತ ಯೋಧ ಸಂದೀಪ್ ಮನೆಗೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ, ಸಾಂತ್ವಾನ|sandeep

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಯೋಧ ಅಸ್ಸಾಂನ ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ವಿಭಾಗದಲ್ಲಿ ಕರ್ತವ್ಯದಲ್ಲಿದ್ದಾಗ ಮೃತಪಟ್ಟಿದ್ದಾರೆ. ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತಿದ್ದ ಪಟ್ಟಣದ ಶಬರೀಶನಗರದ ನಿವಾಸಿ ಸಂದೀಪ್(27) ಅಸ್ಸಾಂ ನ ಮಣಿಪುರದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಮೃತಪಟ್ಟ ವಿಚಾರ ತಿಳಿಯುತಿದ್ದಂತೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮೃತ ಯೋಧನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ನಂತರ ಮಾದ್ಯಮದೊಂದಿಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ ಒಬ್ಬ ಯುವ ಯೋಧ ಅಕಾಲಿಕವಾಗಿ ಮೃತಪಟ್ಟಿರುವುದು ರಾಷ್ಟ್ರಕ್ಕಾದ ನಷ್ಟವಾಗಿದೆ. ನಗುಮೊಗದ ಯುವಕ ಸಂದೀಪ್…

Read More

ರಿಪ್ಪನ್‌ಪೇಟೆಯ ಯೋಧ ಸಂದೀಪ್ ಅಸ್ಸಾಂನಲ್ಲಿ ಕರ್ತವ್ಯದಲ್ಲಿದ್ದಾಗ ಸಾವು|Rpet

ರಿಪ್ಪನ್‌ಪೇಟೆ : ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತಿದ್ದ ಪಟ್ಟಣದ ಶಬರೀಶನಗರದ ನಿವಾಸಿ ಸಂದೀಪ್(27) ಅಸ್ಸಾಂ ನ ಮಣಿಪುರದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ. ಮಣಿಪುರದ ಅಸ್ಸಾಂ ರೈಫಲ್ಸ್ ನಲ್ಲಿ ಕಾರ್ಯ ನಿರ್ವಹಿಸುತಿದ್ದ ಸಂದೀಪ್ ರಿಪ್ಪನ್‌ಪೇಟೆ ಗ್ರಾಪಂ ಸದಸ್ಯರಾದ ವಿನೋದಮ್ಮ ರವರ ಪುತ್ರರಾಗಿದ್ದು ಕಳೆದ 2 ವರ್ಷದಿಂದ ಸೇನೆಯಲ್ಲಿ ಕಾರ್ಯನಿರ್ವಹಿಸುತಿದ್ದರು. ನಕ್ಸಲರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಸಂದೀಪ್ ಮೃತಪಟ್ಟಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿದೆ ಆದರೆ ಬಲ್ಲ ಮೂಲಗಳ ಪ್ರಕಾರ  ಇಂದು ಮುಂಜಾನೆ  ತಾನು ಕರ್ತವ್ಯ ನಿರ್ವಹಿಸುತಿದ್ದ ಪ್ರದೇಶದಲ್ಲಿ…

Read More

ರಿಪ್ಪನ್‌ಪೇಟೆಯ ಗಾನ ಕೋಗಿಲೆ ಪ್ರಣತಿಗೆ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಅತ್ಯುನ್ನತ ಶ್ರೇಣಿ|pranati

ರಿಪ್ಪನ್‌ಪೇಟೆಯ ಗಾನ ಕೋಗಿಲೆ ಪ್ರಣತಿಗೆ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಅತ್ಯುನ್ನತ ಶ್ರೇಣಿ ರಿಪ್ಪನ್‌ಪೇಟೆ : ಬೆಂಗಳೂರಿನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ ಹಿಂದೂಸ್ತಾನಿ ಸಂಗೀತ ಜೂನಿಯರ್‌ ವಿಭಾಗದ ಪರೀಕ್ಷೆಯಲ್ಲಿ ಪಟ್ಟಣದ ಗಾನ ಕೋಗಿಲೆ ಎಂದೆ ಖ್ಯಾತಿಯಾಗಿರುವ ಯುವ ಪ್ರತಿಭೆ ಪ್ರಣತಿ ಅಣ್ಣಪ್ಪ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ತಾಲೂಕ್ ,ಜಿಲ್ಲಾ ,ರಾಜ್ಯ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಹಾಗೂ ಶಾಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಹಲವಾರು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿರುವ ಪ್ರಣತಿ ಅಣ್ಣಪ್ಪ…

Read More

ಸಹಕಾರಿ ಸಂಸ್ಥೆಗಳಿಂದ ರೈತರ ಬದುಕು ಹಸನಾಗಿದೆ – ಹರತಾಳು ಹಾಲಪ್ಪ|inauguration

ಸಹಕಾರಿ ಸಂಸ್ಥೆಗಳಿಂದ ರೈತರ ಬದುಕು ಹಸನಾಗಿದೆ : ಹಾಲಪ್ಪ ರಿಪ್ಪನ್‌ಪೇಟೆ : ಸಹಕಾರಿ ಸಂಘ ಸಂಸ್ಥೆಗಳಿಂದ ಗ್ರಾಮೀಣ ಭಾಗದ ರೈತ ಕುಟುಂಬದ ಬದುಕು ಹಸನಾಗಿದೆ ಎಂದು ಎಂದು ಶಾಸಕ ಹಾಗೂ ಎಂಎಸ್‌ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ ಹೇಳಿದರು.  ಪಟ್ಟಣದ ಶಿವಮೊಗ್ಗ ರಸ್ತೆಯಲ್ಲಿ ಎರಡು ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಹಾಗೂ ೮೫ ಲಕ್ಷದ ನಬಾರ್ಡ್ ಯೋಜನೆಯಲ್ಲಿ ನಿರ್ಮಿಸಿರುವ ಬಹುಸೇವಾ ವಾಣಿಜ್ಯ ಗೋದಾಮು ಹಾಗೂ ೪ನೇ ವರ್ಷದ ಜಿಲ್ಲಾ ಮಟ್ಟದ…

Read More

ಮತಾಂತರ ಆರೋಪ – ಪಾದ್ರಿ ಮನೆಗೆ ನುಗ್ಗಿದ ಬಜರಂಗದಳದ ಕಾರ್ಯಕರ್ತರು|protest

ಆಮಿಷವೊಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿರುವ ಆರೋಪ ಹಿನ್ನೆಲೆ ಸಾಮೂಹಿಕ ಪ್ರಾರ್ಥನೆ ನಡೆಸುತ್ತಿದ್ದ ಮನೆಗೆ ಬಜರಂಗ ದಳ ಮುತ್ತಿಗೆ ಹಾಕಿದ ಘಟನೆ ಶಿವಮೊಗ್ಗ ತಾಲೂಕಿನ ಗೋಪಿಶೆಟ್ಟಿಕೊಪ್ಪ ಗ್ರಾಮದಲ್ಲಿ ನಡೆದಿದೆ. ಪ್ರಾರ್ಥನೆ ನಡೆಸುತ್ತಿದ್ದ ಮನೆಯಲ್ಲಿ ಬಜರಂಗ ದಳ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗೋಪಿಶೆಟ್ಟಿಕೊಪ್ಪದಲ್ಲಿರುವ ಮನೆಯೊಂದರಲ್ಲಿ ಪ್ರತಿ ಭಾನುವಾರ ಹಿಂದೂಗಳನ್ನು ಕರೆಸಿ ಸಾಮೂಹಿಕ ಪ್ರಾರ್ಥನೆ ನಡೆಸಲಾಗುತ್ತಿತ್ತು ಎಂಬ ಆರೋಪ ಕೇಳಿ ಬಂದಿದೆ. ಪಾದ್ರಿ ಮಣಿಕಂಠ ಮತ್ತವರ ತಂಡದವರು ಪ್ರತಿ ಭಾನುವಾರ ಸಾಮೂಹಿಕ ಪ್ರಾರ್ಥನೆಯನ್ನು ಆಯೋಜನೆ ಮಾಡುತ್ತಿದ್ದರು. ಪ್ರಾರ್ಥನೆ ಆಯೋಜಿಸುತ್ತಿದ್ದವರ ವಿರುದ್ಧ…

Read More

ಜೀವನದಲ್ಲಿ ಜಿಗುಪ್ಸೆಗೊಂಡ ರಿಪ್ಪನ್‌ಪೇಟೆಯ ಆಟೋ ಚಾಲಕ ಕಳೆನಾಶಕ ಸೇವಿಸಿ ಸಾವು|crime news

ರಿಪ್ಪನ್‌ಪೇಟೆ : ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಬೆಳಕೋಡು ಗ್ರಾಮದಲ್ಲಿ ನಡೆದಿದೆ. ಬೆಳಕೋಡು ನಿವಾಸಿ ಬಿನೋಯ್ ಸ್ಕರಿಯಾ(52) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದಾರೆ.  ರಿಪ್ಪನ್‌ಪೇಟೆ ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಆಟೋ ಚಾಲಕನಾಗಿದ್ದ ಬಿನೋಯ್ ಸ್ಕರಿಯಾ ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.ಆಟೋ ಓಡಿಸುವುದನ್ನು ಒಂದು ವರ್ಷದಿಂದ ನಿಲ್ಲಿಸಿದ್ದರು.ಅವರು ನಿನ್ನೆ ರಾತ್ರಿ ಬೆಳಕೋಡು ಗ್ರಾಮದಲ್ಲಿರುವ ಮನೆಯಲ್ಲಿ ಕಳೆನಾಶಕ ವಿಷ ಪದಾರ್ಥವನ್ನು ಸೇವಿಸಿ ಅಸ್ವಸ್ಥಗೊಂಡಿದ್ದರು.  ಈ ವೇಳೆ…

Read More

ಡಿಸಿ ಕಚೇರಿಯ ಮುಂದೆ ಆಜಾನ್ ಕೂಗಿದ ಯುವಕ-ವಿಡಿಯೋ ವೈರಲ್|Azaan

ಡಿಸಿ ಕಚೇರಿಯ ಮುಂದೆ ಆಜಾನ್ ಕೂಗಿದ ಯುವಕ-ವಿಡಿಯೋ ವೈರಲ್ ಶಿವಮೊಗ್ಗ : ಈಶ್ವರಪ್ಪನವರು ಆಜಾನ್ ವಿಚಾರದಲ್ಲಿ ಲಘುವಾಗಿ ಮಾತನಾಡಿರುವುದನ್ನು ಖಂಡಿಸಿ ನಡೆದ ಪ್ರತಿಭಟನೆ ವೇಳೆ  ಶಿವಮೊಗ್ಗ ಜಿಲ್ಲಾಧಿಕಾರಿ ಕಛೇರಿ ಮೇಲೆ ನಿಂತು ಯುವಕನೋರ್ವ ಆಜಾನ್ ಕೂಗಿದ್ದು ಈ ವಿಡಿಯೋ ವೈರಲ್ ಆಗಿದೆ. ಶಿವಮೊಗ್ಗದ ಜಿಲ್ಲಾಧಿಕಾರಿ ಕಛೇರಿಯಲ್ಲಿ ಶುಕ್ರವಾರ ನಡೆದಿದ್ದ ಘಟನೆಯಲ್ಲಿ ಆಜಾನ್ ಕೂಗಿದ ವಿಡಿಯೋ ವೈರಲ್ ಆಗಿದೆ. ಸ್ಥಳೀಯರ ಮೊಬೈಲ್ ನಲ್ಲಿ ಆಜಾನ್ ಕೂಗಿದ ದೃಶ್ಯ ಸೆರೆಯಾಗಿದ್ದು, ಫೇಸ್ ಬುಕ್ ಪೇಜ್ ಒಂದರಲ್ಲಿ ಈ ವಿಡಿಯೋ ವೈರಲ್…

Read More

ಹಂದಿ ಅಣ್ಣಿ ಕೊಲೆ ಆರೋಪಿ ಆಂಜನೇಯ ಹತ್ಯೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್ – ಈ ಸುದ್ದಿ ನೋಡಿ|crime news

ಚೀಲೂರಿನ ಗೋವಿನ ಕೋವಿಯ ಬಳಿಯಲ್ಲಿ ನಡೆದಿದ್ದ ಡಬ್ಬಲ್ ಅಟ್ಯಾಕ್ ಸಂಬಂಧ ದಾವಣಗೆರೆ ಪೊಲೀಸರು ಆಂಧ್ರದ ಗುಂಟೂರಿನ ರೈಲ್ವೆ ಸ್ಟೇಷನ್​ನಲ್ಲಿ ಆರೋಪಿಗಳನ್ನ ಬಂಧಿಸಿದ್ದಾರೆ ಎಂಬ ಸುದ್ದಿ ಬೆಂಗಳೂರಿನ ಮೂಲಗಳಿಂದಲೇ ಲಭ್ಯವಾಗಿತ್ತು.  ಆದರೆ , ಈ ಪ್ರಕರಣ ಇದೀಗ ರೋಚಕ ಟ್ವಿಸ್ಟ್ ಗಳನ್ನು ಪಡೆದುಕೊಳ್ಳುತ್ತಿದೆ.  ಪೊಲೀಸ್ ಹಾಗೂ ಭೂಗತ ಲೋಕದ ನಡುವಿನ ಮೈಂಡ್ ಗೇಮ್ ಆಗಿ ಬದಲಾಗುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ  ದಾವಣೆಗೆರೆ ಪೊಲೀಸ್ ಮೂಲಗಳಿಂದ ಮಾಹಿತಿಯೊಂದು ಲಭ್ಯವಾಗಿದ್ದು, ಡಬ್ಬಲ್​ ಅಟ್ಯಾಕ್​ನ ಮಾಸ್ಟರ್ ಮೈಂಡ್ ತಮಿಳ್ ರಮೇಶ್​ ಅರೆಸ್ಟ್ ಆಗಿಲ್ಲ…

Read More

ಸಾಗರ : ಹಾಸ್ಟೆಲ್ ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ – ಆಸ್ಪತ್ರೆಗೆ ದಾಖಲು

ಸಾಗರ ತಾಲೂಕಿನ ಜೋಗದಲ್ಲಿನ ಶಾಲೆಯೊಂದರ 25ಕ್ಕೂ ಹೆಚ್ಚು ಹಾಸ್ಟೆಲ್ ವಿದ್ಯಾರ್ಥಿಗಳು, ಊಟ ಸೇವಿಸಿದ ನಂತ್ರ ಅಸ್ವಸ್ಥಗೊಂಡಿದ್ದಾರೆ. ಅವರನ್ನು ಸಾಗರ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ ಘಟನೆ ನಡೆದಿದೆ. ಸಾಗರದ ಜೋಗದ ಬಳಿಯ ಕ್ರಿಸ್ತ ಪ್ರಕಾಶ್ ಹಿರಿಯ ಪ್ರಾಥಮಿಕ ಶಾಲೆಯ ಹಾಸ್ಟೆಲ್ ವಿದ್ಯಾರ್ಥಿಗಳು ಇಂದು ರಾತ್ರಿ ನೀಡಿದಂತ ಊಟವನ್ನು ಸೇವಿಸಿದ್ದಾರೆ. ಈ ಬಳಿಕ ತಕ್ಷಣ 25ಕ್ಕೂ ಹೆಚ್ಚು ಮಕ್ಕಳಿಗೆ ವಾಂತಿ, ಹೊಟ್ಟೆ ನೋವು ಕಾಣಿಸಿಕೊಂಡಿದೆ. ಕೂಡಲೇ ಶಾಲಾ ಶಿಕ್ಷಕರು ವಿದ್ಯಾರ್ಥಿಗಳನ್ನು ಸಾಗರದ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಸಿದ್ದಾರೆ….

Read More

ರಿಪ್ಪನ್‌ಪೇಟೆ : ಜೀವನದಲ್ಲಿ ಜಿಗುಪ್ಸೆಗೊಂಡ ವೀಳ್ಯದೆಲೆ ವ್ಯಾಪಾರಿ ಆತ್ಮಹತ್ಯೆ|crime

ರಿಪ್ಪನ್‌ಪೇಟೆ :  ಜೀವನದಲ್ಲಿ ಜಿಗುಪ್ಸೆಗೊಂಡ ವ್ಯಕ್ತಿಯೊಬ್ಬರು ಅಕೇಶಿಯ ಪ್ಲಾಂಟೇಷನ್ ನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಕಣಬಂದೂರು ಗ್ರಾಮದಲ್ಲಿ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ  ತಾಲ್ಲೂಕಿನ ಹೆದ್ದಾರಿ ಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಗೂಡ್ತಿ ಗ್ರಾಮದ ವಾಸಿ, ನಾಗರಾಜ್ (52) ಎಂಬ ವ್ಯಕ್ತಿಯು ಅನಾರೋಗ್ಯ ಕಾರಣದಿಂದ ಮನನೊಂದು ತಮ್ಮ ಮನೆಯ ಸಮೀಪದ ಪ್ಲಾಂಟೇಷನ್ ನಲ್ಲಿ ಇಂದು ಮಧ್ಯಾಹ್ನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಹಳ ದಿನಗಳಿಂದ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು ಅನಾರೋಗ್ಯ ಸಹಿಸಿಕೊಳ್ಳಲಾಗದೆ ಆತ್ಮಹತ್ಯೆ…

Read More
Exit mobile version