ಪಂಚನದಿಗಳ ಉಗಮಸ್ಥಾನ ಶ್ರೀ ಕುಮದ್ವತಿ ತೀರ್ಥದ 5ನೇ ವರ್ಷದ ದೀಪೋತ್ಸವ
ರಿಪ್ಪನ್‌ಪೇಟೆ : “ಪ್ರಾಚೀನ ತೀರ್ಥಕ್ಷೇತ್ರಗಳು ಪ್ರಕೃತಿ-ಪರಿಸರ ರಕ್ಷಣೆಯ ಸಂದೇಶ ಸಾರುವ ಐಹಿತ್ಯ ಹೊಂದಿವೆ. ನದಿಗಳ ಮೂಲವಾಗಿರುವ ಕುಮದ್ವತಿ ತೀರ್ಥವು ಪ್ರಕೃತಿಯ ಒಡಲಿನಿಂದ ಜಲಧಾರೆಯನ್ನು ಮಾನವ ಕುಲಕ್ಕೆ ಮತ್ತು ಪ್ರಾಣಿ ಪಕ್ಷಿಗಳಿಗೆ ನೀಡುವ ಅಪೂರ್ವ ತಾಣವಾಗಿದೆ” ಎಂದು ಹೊಂಬುಜ ಶ್ರೀಕ್ಷೇತ್ರ ಹೊಂಬುಜದ ಪೀಠಾಧಿಪತಿಗಳಾದ ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ತಿಳಿಸಿದರು.
ಅವರು ಶ್ರೀಕ್ಷೇತ್ರದಲ್ಲಿ ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಲಕ್ಷದೀಪೋತ್ಸವದ ಬಳಿಕ ಭೂಮಿಗೆ ಅಮೂಲ್ಯ ಜಲನಿಧಿಯಾಗಿ ಆರಾಧಿಸಲ್ಪಡುವ ಕುಮುದ್ವತಿ ತೀರ್ಥದಲ್ಲಿ ಕಾರ್ತೀಕ ಲಕ್ಷದೀಪೋತ್ಸವ ನಿಮಿತ್ತ ಸೋಮವಾರದಂದು ನಡೆದ ಧಾರ್ಮಿಕ ಪ್ರವಚನದಲ್ಲಿ “ಅತ್ಯಾಧುನಿಕ ತಂತ್ರಜ್ಞಾನದ ಬಳಕೆಯಿಂದ ಜೀವನ ನಿರ್ವಹಣೆ ಸುಲಲಿತ. ಆದರೆ ನಮ್ಮ ಪೂರ್ವಜರು ಆರಾಧಿಸುವ ಪುಣ್ಯಪವಿತ್ರ ಸಾನಿಧ್ಯದ ಇತಿಹಾಸ ಅರಿತು, ಪರಂಪರೆ ಉಳಿಸುವ ಮೂಲಕ ಆಧ್ಯಾತ್ಮಿಕ ಸ್ಪರ್ಶದಿಂದ ಶಾರೀರಿಕ-ಮಾನಸಿಕ ಆರೋಗ್ಯ ವರ್ಧಿಸುತ್ತದೆ. ಧಾರ್ಮಿಕ ಪ್ರಜ್ಞೆ ಬೆಳೆದು ಪ್ರೀತಿ ವಾತ್ಸಲ್ಯದ ಅನ್ಯೋನ್ಯ ಸಂಬಂಧಗಳು ಸಮಾಜದ ಒಳಿತಿಗಾಗಿ ಸೇವೆ ಸಲ್ಲಿಸುವಂತೆ ಪ್ರೇರಣೆ ನೀಡುತ್ತದೆ ಎಂದು ವಿವರಿಸುತ್ತಾ ಕಾರ್ತೀಕ ಮಾಸದಲ್ಲಿ ದೀಪಾರಾಧನೆಯ ಸಂಸ್ಕೃತಿಯು ಸ್ಥಾನಿಕ ಅಭಿವೃದ್ಧಿ, ರಕ್ಷಣೆಗಾಗಿ ಸಂದೇಶ ನೀಡುತ್ತಿದ್ದು, ಪ್ರತಿಯೋರ್ವರ ಸದ್ಭಾವನೆಯ ಜೀವನ ಯಶಸ್ವಿಯಾಗಲಿ” ಎಂದು ಆಶೀರ್ವಚನ ನೀಡಿದರು.
ಊರ ಸಮಸ್ತರು, ಪರವೂರ ಭಕ್ತರು ವೈಶಿಷ್ಟಪೂರ್ಣ ದೀಪಾರಾಧನೆಯ ವರ್ಣರಂಜಿತ ದೃಶ್ಯಗಳಿಂದ ಮಂತ್ರಮುಗ್ಧರಾದರು. ಶ್ರೀಮಠದ ಕುಂದಕುಂದ ವಿದ್ಯಾಪೀಠದ ವಿದ್ಯಾರ್ಥಿಗಳು, ಹುಂಚ-ಬಿಲ್ಲೇಶ್ವರ ಗ್ರಾಮದ ನಾಗರೀಕರು ಲಕ್ಷದೀಪೋತ್ಸವದ ದೃಶ್ಯಾವಳಿಯಿಂದ ಪುನೀತರಾದರು.
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್