ಬ್ಯಾಂಕ್ ಲೋನ್ ಸಿಬ್ಬಂದಿಗಳು ಎಂದು ಹೇಳಿ ಮನೆಗೆ ನುಗ್ಗಿ ಹಲ್ಲೆಗೈದು ದರೋಡೆ | Crime News
ಬ್ಯಾಂಕ್ ಲೋನ್ ಸಿಬ್ಬಂದಿ ಎಂದು ಹೇಳಿಕೊಂಡು ಮನೆಗೆ ಬಂದ ಕಳ್ಳರ ತಂಡ ನೀರು ಕೇಳುವ ನೆಪದಲ್ಲಿ ದರೋಡೆ ಮಾಡಿರುವ ಘಟನೆ ನಡೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಳೆಹೊನ್ನೂರಿನಲ್ಲಿ ನಡೆದಿದೆ.
ಘಟನೆಯ ಹಿನ್ನಲೆ :
ಸೋಮವಾರ ಸುಮಾರು 01:15 ಗಂಟೆ ಸಮಯದಲ್ಲಿ ಯಾರೋ ಎರಡು ಜನ ಅಪರಿಚಿತರು ಮನೆಯ ಕಾಂಪೌಂಡ್ ಚಿಲಕವನ್ನು ತಗೆದು ಒಳಬಂದಿದ್ದಾರೆ.
ಮನೆಗೆ ಬಂದ ಅಪರಿಚಿತರನ್ನು ದೂರುದಾರರು ಯಾರು ಏನು ಎತ್ತ ವಿಚಾರಿಸಿದ್ದಾರೆ. ಈ ವೇಳೆ ಅಪರಿಚಿತರು ತಮ್ಮನ್ನ ಬ್ಯಾಂಕಿನ ಲೋನ್ ವಿಚಾರಣೆ ಮಾಡುವವರೆಂದು ಪರಿಚಯಿಸಿಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ದೂರುದಾರರು ಯಾವ ಬ್ಯಾಂಕ್ನವರು ಎಂದು ಪ್ರಶ್ನಿಸಿದ್ದಾರೆ. ಅಷ್ಟರಲ್ಲಿ ಅಪರಿಚಿತನೊಬ್ಬ ಕುಡಿಯಲು ನೀರು ಕೇಳಿದ್ದಾನೆ.
ನೀರು ಕೇಳಿದ್ರಲ್ಲಾ ಎಂದು ದೂರುದಾರರು, ಮನೆಯ ಅಡುಗೆ ಮನೆಗೆ ಹೋಗಿ ನೀರು ತರಲು ಮುಂದಾಗಿದ್ದಾರೆ. ಈ ವೇಳೆ ದೂರುದಾರರ ಬೆನ್ನಿಗೆ ಬಂದ ಅಪರಿಚಿತರ ಅಡುಗೆ ಮನೆಯೊಳಗೆ ಹಿಡಿದುಕೊಂಡಿದ್ದಾರೆ. ಅಲ್ಲದೆ ಹಲ್ಲೆ ನಡೆಸಿದ್ದಾರೆ. ಹಣ ಕೊಡುವಂತೆ ಬೆದರಿಸಿದ್ದಾರೆ. ಬಳಿಕ ಬೀರುವಿನ ಬೀಗ ತೆಗೆದುಕೊಂಡು ಬೀರುವಿನಲ್ಲಿದ್ದ ಒಟ್ಟು 1,13,000/- ರೂ ಮೌಲ್ಯದ ಬಂಗಾರ ನಗದು ಹಣ ಹಾಗೂ ಮೊಬೈಲ್ ಅನ್ನು ಕಿತ್ತುಕೊಂಡು ಹೋಗಿದ್ದಾರೆ. ಈ ವೇಳೆ ದೂರುದಾರರು ಅಪರಿಚಿತರ ಏಟಿನಿಂದ ತಲೆಸುತ್ತು ಬಂದು ಬಿದ್ದಿದ್ದಾರೆ.
ಸದ್ಯ ಈ ಘಟನೆ ಬಗ್ಗೆ ಹೊಳೆಹೊನ್ನೂರು ಪೊಲೀಸರು ತನಿಖೆ ಪ್ರಾರಂಭಿಸಿದ್ದಾರೆ.