Ripponpete | ಸರ್ವ ಧರ್ಮದ ಸಾರವೂ ಒಂದೇ – ಪ್ರೋ ಹೆಚ್ ವಿ ರಾಮಪ್ಪಗೌಡ

ಸಂತೃಪ್ತಿಯ ಬದುಕಿಗೆ ಧರ್ಮ ಧಾರ್ಮಿಕ ಕಾರ್ಯಗಳು ಪೂರಕ
ರಿಪ್ಪನ್‌ಪೇಟೆ;-ಆಘೋಚರ ಶಕ್ತಿಯೇ ದೇವರು.ಸರ್ವಾ ಧರ್ಮದ ಸಾರವೂ ಒಂದೇ ಅಗಿದ್ದು ಏಕಾಗ್ರತೆಯಿಂದ ಭಗವಂತನಲ್ಲಿ ಪ್ರಾರ್ಥಿಸಿದಲ್ಲಿ ಪುಣ್ಯ ಪ್ರಾಪ್ತಿಯೊಂದಿಗೆ ಸಂತೃಪ್ತಿ ದೊರೆಯುವುದೆಂದು  ಶಿವಮೊಗ್ಗ ಹೆರೆಗೊಡಿಗೆ ನಿವೃತ್ತ  ಪ್ರೋ.ಹೆಚ್.ವಿ.ರಾಮಪ್ಪಗೌಡ ಹೇಳಿದರು.

ರಿಪ್ಪನ್‌ಪೇಟೆಯ ಭೂಪಾಳಂ ಚಂದ್ರಶೇಖರಯ್ಯ ಸಭಾಭವನದಲ್ಲಿ ಆಯೋಜಿಸಲಾದ ಹೊಸನಗರದ  ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಮಿತಿ ಆಯೋಜಿಸಿದ್ದ ಗ್ರಾಮ ಸುಭಿಕ್ಷೆಗಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ ಹಾಗೂ ೪೫೮ ನೇ ನಮ್ಮೂರ ನಮ್ಮ ಕೆರೆ ಹಸ್ತಾಂತರ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ದೇಶದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು ಜನರ ನೆಮ್ಮದಿಯಿಂದ ಬದುಕುವುದೇ ಕಷ್ಟಕರವಾಗಿದೆ.ಕುಟುಂಬ ಸಮಾಜದ ಉದ್ದಾರಕ್ಕಾಗಿ ದೇವರು  ಧಾರ್ಮಿಕ ಆಚರಣೆಗಳಿಂದಾಗಿ ನೆಮ್ಮದಿಯನ್ನು ಕಾಣವಂತಾಗಿದೆ.ಇತ್ತೀಚಿನ ದಿನಗಳಲ್ಲಿ ದಾರ್ಮಿಕ ಕೇಂದ್ರಗಳಲ್ಲಿ ಶೋಷಣೆ ಅನಾಚಾರದಂತಹ ಘಟನೆಗಳಿಂದಾಗಿ ಜನರು ನೆಮ್ಮದಿಯಿಂದ ಬದುಕು ಸಾಗಿಸುವುದು ಸಹ ಕಷ್ಟಕರವಾಗಿದೆ.ಸಮಾಜ ಘಾತುಕ ಶಕ್ತಿಗಳ ದಮನಕ್ಕೆ ಎಲ್ಲರೂ ಸಹಕರಿಸಬೇಕು.ಮಠ ಮಂದಿರಗಳು ಭಯ ಭಕ್ತಿಯ ಕೇಂದ್ರಗಳಾದಾಗ ಮಾತ್ರ ಸಮಾಜದಲ್ಲಿ ಗೌರವ ಹೆಚ್ಚುತ್ತದೆ.ಆ ನಿಟ್ಟಿನಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿಗಳ ಸಮಾಜ ಮುಖಿ ಚಿಂತನೆಗಳು ಮತ್ತು ಅನ್ನದಾಸೋಹದಂತಹ ಕಾರ್ಯದಿಂದಾಗಿ ಕ್ಷೇತ್ರದ ಗೌರವ ಹೆಚ್ಚಾಗುವುದರೊಂದಿಗೆ ಸಮಾಜ ಕಟ್ಟುವುದರಿಂದಾಗಿ ದೇಶ ಸಂವೃದ್ಧಿಯಿಂದಿರಲು ಸಾಧ್ಯವಾಗಿದೆ ಎಂದರು.
ಗ್ರಾಮದಲ್ಲಿನ ಕೆರೆಗಳು ಹೂಳು ತುಂಬಿಕೊಂಡು ಪರಿಣಾಮ ಆಂತರ್ಜಲ ಸಹ ಕುಸಿಯುವಂತಾಗಿದ್ದು ನಮ್ಮೂರು ನಮ್ಮ ಕೆರೆ ಯೋಜನೆಯಿಂದಾಗಿ ಪೂಜ್ಯ ಹೆಗ್ಗಡೆಯವರ ಮಹಾತ್ವಾಕಾಂಕ್ಷಿ ಯೋಜನೆಯ ಫಲದಿಂದಾಗಿ ಕೆರೆಗಳ ಹೂಳು ತಗೆದು ಅಂತರ್ಜಲ ವೃದ್ದಿಯಾಗಿರುವುದನ್ನು ರಸ್ತೆಯಲ್ಲಿ ಸಂಚರಿಸುವವರಿಗೆ ಪರಿಶುದ್ದ ಗಾಳಿ ಸ್ವಚ್ಚ ಪರಿಸರ ದೊರೆಯುವಂತಾಗಿದೆ ಎಂದರು.

ಶಿವಮೊಗ್ಗ ಜಿಲ್ಲಾ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಹಿರಿಯ ನಿರ್ದೇಶಕ ಜಿ.ಚಂದ್ರಶೇಖರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಮಗ್ರ ಮಾಹಿತಿಯನ್ನು ವಿವರಿಸಿದರು.

ಸಾಮೂಹಿಕ ಸತ್ಯನಾರಾಯಣ ಪೂಜಾ ಸಮಿತಿಯ ಆಧ್ಯಕ್ಷ ನಾಗರಾಜಪೂಜಾರಿ ಆಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಗ್ರಾಮ ಪಂಚಾಯ್ತಿ ಆಧ್ಯಕ್ಷೆ ಧನಲಕ್ಷಿö್ಮ,ಉಪಾಧ್ಯಕ್ಷ ಸುದೀಂದ್ರ ಪೂಜಾರಿ,ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷ ಈಶ್ವರಶೆಟ್ಟಿ, ಗ್ರಾ.ಪಂ ಸದಸ್ಯರಾದ ನಿರೂಪ್‌ಕುಮಾರ್,ಆಶೀಫ್ ಭಾಷಾ ,ಪ್ರಕಾಶ್ ಪಾಲೇಕರ್,ಆಶ್ವನಿ ರವಿಶಂಕರ್,ಗಣಪತಿ,ಜಿಲ್ಲಾ ಜಾಗೃತಿ ವೇದಿಕೆ ಆಧ್ಯಕ್ಷೆ ನಾಗರತ್ನ ದೇವರಾಜ್,ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಭಿಯಂತರ ಗಣಪತಿ ಉಪಸ್ಥಿತರಿದ್ದು ಮಾತನಾಡಿದರು.

ಪಂಚಮಿ ಪ್ರಾರ್ಥಿಸಿದರು.ಹೊಸನಗರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿ ಬೇಬಿ ಸ್ವಾಗತಿಸಿದರು.ಮೇಲ್ವಿಚಾರಕಿ ಪೂರ್ಣಿಮಾ ಸಾಧನಾ ವರದಿ ವಾಚನ ಮಾಡಿದರು.
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಕಸ್ತೂರಿ ರಂಗನ್ ವರದಿ ಮತ್ತೆ ಮುನ್ನೆಲೆಗೆ: ಮಲೆನಾಡಿನ ಸಾವಿರಾರು ಕುಟುಂಬಗಳಿಗೆ ಆತಂಕ.! – ಜಿಲ್ಲೆಯ ಯಾವ ಗ್ರಾಮಗಳಿಗೆ ಕಸ್ತೂರಿ ರಂಗನ್ ವರದಿ ಅನ್ವಯ? ಇಲ್ಲಿದೆ ಸಂಪೂರ್ಣ ಪಟ್ಟಿ

ಕಸ್ತೂರಿ ರಂಗನ್ ವರದಿ ಮತ್ತೆ ಮುನ್ನೆಲೆಗೆ: ಮಲೆನಾಡಿನ ಸಾವಿರಾರು ಕುಟುಂಬಗಳಿಗೆ ಆತಂಕ.! - ಜಿಲ್ಲೆಯ ಯಾವ ಗ್ರಾಮಗಳಿಗೆ ಕಸ್ತೂರಿ ರಂಗನ್…

40 minutes ago

ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ಖಂಡಿಸಿ ಶಿಕಾರಿಪುರ ಬಂದ್ , ಬಿಗಿ ಪೊಲೀಸ್ ಬಂದೋಬಸ್ತ್ , ಹೇಗಿದೆ ಪರಿಸ್ಥಿತಿ !?

ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ ಖಂಡಿಸಿ ಶಿಕಾರಿಪುರ ಬಂದ್ , ಬಿಗಿ ಪೊಲೀಸ್ ಬಂದೋಬಸ್ತ್ , ಹೇಗಿದೆ ಪರಿಸ್ಥಿತಿ !?…

8 hours ago

ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನಿಧನ: ತಿಪಟೂರಿನಲ್ಲಿ ನಾಳೆ ಅಂತ್ಯಕ್ರಿಯೆ

ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನಿಧನ: ತಿಪಟೂರಿನಲ್ಲಿ ನಾಳೆ ಅಂತ್ಯಕ್ರಿಯೆ Former Karnataka Education Minister and Tiptur…

22 hours ago

ಸಾಗರದಲ್ಲಿ ಬೋರ್‌ವೆಲ್ ಕೇಬಲ್ ಕಳ್ಳತನದ ಜಾಲ ಪತ್ತೆ: ನಾಲ್ವರ ಬಂಧನ, ಓಮ್ನಿ ಕಾರು ವಶ

ಸಾಗರದಲ್ಲಿ ಬೋರ್‌ವೆಲ್ ಕೇಬಲ್ ಕಳ್ಳತನದ ಜಾಲ ಪತ್ತೆ: ನಾಲ್ವರ ಬಂಧನ, ಓಮ್ನಿ ಕಾರು ವಶ Sagara Rural Police arrested…

24 hours ago

ಶಿವಮೊಗ್ಗದಲ್ಲಿ ಕೌಟುಂಬಿಕ ಕಲಹದ ಬಳಿಕ ಯುವಕನ ಅನುಮಾನಾಸ್ಪದ ಸಾವು

ಶಿವಮೊಗ್ಗದಲ್ಲಿ ಕೌಟುಂಬಿಕ ಕಲಹದ ಬಳಿಕ ಯುವಕನ ಅನುಮಾನಾಸ್ಪದ ಸಾವು A young man identified as Abu Sufiyan Khan…

24 hours ago

ಚೆಸ್‌ನಲ್ಲಿ ಮಿಂಚಿದ ತೀರ್ಥಹಳ್ಳಿಯ ಸಹೋದರಿಯರು: ರಾಜ್ಯಮಟ್ಟಕ್ಕೆ ಆಯ್ಕೆ

ಚೆಸ್‌ನಲ್ಲಿ ಮಿಂಚಿದ ತೀರ್ಥಹಳ್ಳಿಯ ಸಹೋದರಿಯರು: ರಾಜ್ಯಮಟ್ಟಕ್ಕೆ ಆಯ್ಕೆ Thirthahalli sisters Ganavi and Pavani secured first place in…

24 hours ago