Ripponpete | ತೋಟ ಕಾಯಲು ಮಳವಳ್ಳಿಗೆ ಬಂದ ಸುಂದರಿಯರು..!!
ಆಹಾ ಈ ಬೆದರು ಗೊಂಬೆಗೆ ಜೀವ ಬಂದಂತಾಗಿದೆ ಎಂಬ ಗಾಳಿಪಟ ಚಿತ್ರದ ಭಟ್ಟರ ಹಾಡಿನ್ನು ನೆನಪಿಸುತ್ತದೆ ಈ ಸ್ಟೋರಿ,ನಾವುಗಳು ಇಷ್ಟು ದಿನ ತೋಟ ಹೊಲಗಳಿಗೆ ದೃಷ್ಟಿ ಆಗಬಾರದೆಂದು ದೇವರ ಹರಕೆ ಹಾಗೂ ಬೆದರು ಗೊಂಬೆಗಳನ್ನ ಇಟ್ಟಿದ್ದನ್ನ ಕಂಡಿದ್ದೇವೆ.
ಇದೀಗ ವಿಭಿನ್ನವಾದ ಪ್ರಯೋಗಕ್ಕೆ ಶಿವಮೊಗ್ಗದ ರೈತ ಮುಂದಾಗಿದ್ದಾರೆ. ರಸ್ತೆ ಬದಿಯಲ್ಲಿರೋ ತಮ್ಮ ಬಾಳೆತೋಟಕ್ಕೆ ನಟಿಯರ ಫೋಟೋ ಹಾಕಿಸಿದ್ದಾರೆ.ದೃಷ್ಟಿಯ ತಲೆ ನೋವನ್ನು ಭಿನ್ನ ಪ್ರಯತ್ನದಿಂದ ಬೇರೆಡೆಗೆ ಸೆಳೆಯಲು ಮಳವಳ್ಳಿ ಗ್ರಾಮದ ರೈತ.
ಹೌದು ಈ ರೈತನ ತೋಟ ಕಾಯುತ್ತಿರುವುದು ಸಿನಿಮಾ ನಟಿಯರು!!!
ಶಿವಮೊಗ್ಗ ಜಿಲ್ಲೆಯ ಹೊಸನಗರದ ರಿಪ್ಪನ್ ಪೇಟೆ ಸಮೀಪದ ಮಳವಳ್ಳಿ ಗ್ರಾಮದ ರೈತ ರಂಗಸ್ವಾಮಿ ಈ ವಿಭಿನ್ನ ಪ್ರಯೋಗ ಮಾಡಿದ್ದಾರೆ. ಸದ್ಯ ತೋಟದಲ್ಲಿ ಅಳವಡಿಸಲಾಗಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಳೆ ಇಲ್ಲದೇ ಬೆಳೆದ ಅಲ್ಪ ಸ್ವಲ್ಪ ಬೆಳೆಯನ್ನು ಕಾಪಾಡಿಕೊಳ್ಳೋದು ರೈತರಿಗೆ ದೊಡ್ಡ ಸವಾಲು ಆಗಿದೆ. ಮಲೆನಾಡು, ಅರಣ್ಯ ಗಡಿ ವ್ಯಾಪ್ತಿಯಲ್ಲಿರೋ ರೈತರು ಬೆಳೆಯ ರಕ್ಷಣೆಗಾಗಿ ಹಲವು ಉಪಾಯಗಳನ್ನು ಮಾಡುತ್ತಾರೆ.
ತೋಟದಲ್ಲಿ ಜನರಿದ್ದಾರೆ ಎಂದು ತೋರಿಸಲು ಬೆದರುಗೊಂಬೆಗಳನ್ನು ಹಾಕುತ್ತಾರೆ. ಇನ್ನು ಕೆಲವರು ಬೆಳೆಗೆ ದೃಷ್ಟಿಯಾಗದಿರಲಿ ಎಂದು ದೃಷ್ಟಿಗೊಂಬೆಗಳನ್ನು ಸಹ ಅಳವಡಿಸುತ್ತಾರೆ.
ರೈತ ರಂಗಸ್ವಾಮಿ ಎರಡು ಎಕರೆಯಲ್ಲಿ ಬಾಳೆ ಬೆಳೆದಿದ್ದಾರೆ. ಬೆಳೆಯು ಉತ್ತಮವಾಗಿದ್ದು, ಬಾಳೆ ತೋಟಕ್ಕೆ ದೃಷ್ಟಿ ಆಗಬಾರದೆಂದು ನಟಿಯರ ಫೋಟೋ ಹಾಕಿದ್ದಾರೆ.ತೋಟದ ಸುತ್ತಲೂ ರಸ್ತೆ ಬದಿಯಲ್ಲಿ ಜನರಿಗೆ ಕಾಣುವಂತೆ ನಟಿಯರ ಫೋಟೋಗಳನ್ನು ರಂಗಸ್ವಾಮಿ ಹಾಕಿದ್ದಾರೆ. ಗ್ರಾಮಸ್ಥರು ಈ ಫೋಟೋಗಳನ್ನು ನೋಡಲು ಬರುತ್ತಿದ್ದಾರೆ.
ಹಲವು ಬಾರಿ ದೃಷ್ಟಿಗೊಂಬೆಗಳನ್ನ ಇಟ್ಟು ಯಾವುದೇ ಪ್ರಯೋಜನವಾಗದ ನಂತರ ನಟಿಯರ ಫೋಟೋವನ್ನು ದೃಷ್ಟಿ ಗೊಂಬೆ ಜಾಗದಲ್ಲಿ ಇರಿಸಿದ್ದೇನೆ,ನಟಿಯರ ಫೋಟೋವನ್ನು ಜನರು ನೋಡಿಕೊಂಡು ಖುಷಿಯಿಂದ ಮುಂದೆ ಹೋಗುತ್ತಾರೆ. ಕೆಲವರು ರಾತ್ರಿ ವೇಳೆ ಫೋಟೋವನ್ನು ನೋಡಿ ಕೇಕೆ ಹಾಕುತ್ತಾರೆ ಎಂದು ರಂಗಸ್ವಾಮಿ ಹೇಳುತ್ತಾರೆ.ಱ್
ರಫ಼ಿ ರಿಪ್ಪನ್ ಪೇಟೆನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್