Headlines

Ripponpet | ಗ್ರಾಮೀಣ ಯುವಕರಲ್ಲಿ ಕ್ರೀಡಾ ಚಟುವಟಿಕೆಯಿಂದ ಕ್ರೀಯಾಶೀಲ ಬದುಕು – ಶಾಸಕ ಬೇಳೂರು

ಗ್ರಾಮೀಣ ಯುವಕರಲ್ಲಿ ಕ್ರೀಡಾ ಚಟುವಟಿಕೆಯಿಂದ ಕ್ರೀಯಾಶೀಲ ಬದುಕು’’
ರಿಪ್ಪನ್‌ಪೇಟೆ;-ದೈನಂದಿನ ಕ್ರೀಡಾ ಚಟುವಟಿಕೆಯಲ್ಲಿ ಗ್ರಾಮಸ್ಥರು ಹಾಗೂ ಮಕ್ಕಳು ತೊಡಗಿಸಿಕೊಂಡಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವ ಜೊತೆಗೆ ಕ್ರೀಯಾಶೀಲರಾಗಿರಬಹುದು  ಎಂದು ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ರಿಪ್ಪನ್‌ಪೇಟೆ ಸಮೀಪದ ಅರಸಾಳು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ತಮ್ಮಡಿಕೊಪ್ಪ ಗ್ರಾಮದ ಛತ್ರಪತಿ ಶಿವಾಜಿ ಯುವಕ ಸಂಘದವರು ಆಯೋಜಿಸಲಾದ ಕ್ರಿಕೇಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಕ್ರಿಕೇಟ್ ಬ್ಯಾಟಿಂಗ್ ಮಾಡಿ ನಂತರ ಮಾತನಾಡಿ ಗ್ರಾಮಸ್ಥರು ಒತ್ತಡದ ಬದುಕಿನಲ್ಲಲಿ ತಮ್ಮ ಅಲ್ಪ ಸಮಯವನ್ನು ವ್ಯಾಯಾಮ ಹಾಗೂ ಕ್ರೀಡೆಗಳಿಗೆ ಮೀಸಲಿಡಬೇಕು ಎಂದ ಅವರು ದೈಹಿಕ ಮತ್ತು ಮಾನಸಿಕವಾಗಿ ಸದೃಡರಾಗಲು ಕ್ರೀಡಾಕೂಟ ಸಹಕಾರಿಯಾಗಲಿದೆ ಎಂದರು.

ಹಾಗೂ ಕ್ರೀಡೆಯನ್ನು ಅಯೋಜಿಸುವ ಮಕ್ಕಳಿಗೆ ಮತ್ತು ಯುವಕಸಂಘದವರಿಗೆ ಅಧಿಕಾರ ಇದ್ದಾಗಲೂ ಮತ್ತು ಇಲ್ಲದಾಗಲೂ ಅರ್ಥಿಕ ನೆರವು ನೀಡಿ ಪ್ರೋತ್ಸಾಹಿಸಿರುವುದಾಗಿ ಹೇಳಿ ಇದರಿಂದ ಜನಸೇವೆಯೊಂದಿಗೆ ಅಭಿವೃದ್ದಿಯ ಬಗ್ಗೆ ಸಹ ಹೆಚ್ಚು ಒತ್ತು ನೀಡಲಾಗುವುದು ಎಂದ ಅವರು ಕ್ರೀಡೆಯೊಂದಿಗೆ ಯುವಜನಾಂಗದಲ್ಲಿನ ವೈಷಮ್ಯ ದೂರವಾಗಿ ಸಹೋದರತ್ವ ಬೆಳಸಲು ಸಹಕಾರಿಯಾಗುವುದೆಂದು ತಿಳಿಸಿದರು.
ಈ ಕ್ರೀಡಾ ಕೂಟದ ಸಮಾರಂಭದಲ್ಲಿ ಜಿ.ಪಂ ಮಾಜಿ ಸದಸ್ಯ ಬಿ ಪಿ ರಾಮಚಂದ್ರ,ರಿಪ್ಪನ್‌ಪೇಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಧನಲಕ್ಷಿö್ಮ,ಆರಸಾಳು ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ,ಹಾಲಿ ಸದಸ್ಯ ಉಮಾಕರ್,ಗ್ರಾಪಂ ಸದಸ್ಯರಾದ ಆಸೀಫ಼್ ,ಗಣಪತಿ, ಉಂಡಗೋಡು ನಾಗಪ್ಪ,ಉಲ್ಲಾಸ್ ತೆಂಕೋಲ,ಚಂದ್ರಶೇಖರ್,ರಮೇಶಪ್ಯಾನ್ಸಿ,
ಪಿಎಸ್‌ಐ ಪ್ರವೀಣ್‌ಕುಮಾರ್ ಎಸ್.ಪಿ.ತಮ್ಮಡಿಕೊಪ್ಪ ಲೋಕೇಶ್, ರಾಜು ಹಾಗೂ ಛತ್ರಪತಿ ಶಿವಾಜಿ ಬಾಯ್ಸ್ ತಂಡದ ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *

Exit mobile version