ಹೊಸನಗರದ ನೂತನ ತಹಶೀಲ್ದಾರ್ ಆಗಿ ರಶ್ಮಿ ಹೆಚ್ ಜಿ ಅಧಿಕಾರ ಸ್ವೀಕಾರ|Hosanagara
ಹೊಸನಗರ : ಸುಮಾರು 4 ತಿಂಗಳುಗಳ ಕಾಲ ಹೊಸನಗರ ತಾಲ್ಲೂಕು ಕಛೇರಿಯ ತಹಶೀಲ್ದಾರ್ ಹುದ್ದೆ ಖಾಲಿಯಿದ್ದು ತಾಲ್ಲೂಕು ಕಛೇರಿಯ ಗ್ರೇಡ್2 ತಹಶೀಲ್ದಾರ್ ರಾಕೇಶ್ ಫ್ರಾನ್ಸಿಸ್ ಬ್ರಿಟ್ಟೋರವರು ಪ್ರಭಾರ ತಹಶೀಲ್ದಾರ್ ಆಗಿ ಕಾರ್ಯರ್ವಹಿಸುತ್ತಿದ್ದರು.
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಶ್ಮಿ ಹೆಚ್.ಜೆಯವರು ಅಲ್ಲಿಂದ ವರ್ಗಾವಣೆಗೊಂಡು ಹೊಸನಗರ ತಹಶೀಲ್ದಾರ್‌ರಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ಅಧಿಕಾರ ಸ್ವೀಕರಿಸಿ ತಹಶೀಲ್ದಾರ್ ರಶ್ಮಿ ಪತ್ರಕರ್ತರೊಂದಿಗೆ ಮಾತನಾಡಿ, ಹೊಸನಗರ ತಾಲ್ಲೂಕಿನಲ್ಲಿರುವ ಯಾವುದೇ ಸಮಸ್ಯೆಗಳಿದ್ದರೂ ಖುದ್ದು ಭೇಟಿ ಮಾಡಲು ಅವಕಾಶವಿದೆ. ನಿಮಗೆ ತಾಲ್ಲೂಕು ಕಛೇರಿಯಿಂದ ಆಗುತ್ತಿರುವ ಯಾವುದಾದರೂ ಸಮಸ್ಯೆಗಳಿದ್ದರೆ ಅಥವಾ ಸರ್ಕಾರದ ಸೌಲಭ್ಯದಿಂದ ವಂಚಿತರಾಗಿದ್ದರೆ ನಮ್ಮನ್ನೂ ಭೇಟಿ ಮಾಡಿ ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಪಡೆಯಬಹುದೆಂದು ತಿಳಿಸಿದರು.
ನೂತನವಾಗಿ ಅಧಿಕಾರ ಸ್ವೀಕರಿಸಿದ ರಶ್ಮಿಯವರನ್ನು ಕಂದಾಯ ಇಲಾಖೆಯ ಸಿಬ್ಬಂದಿಗಳಾದ ಗ್ರೇಡ್ 2ತಹಶೀಲ್ದಾರ್ ರಾಕೇಶ್, ಶಿರಾಸ್ಥೆದಾರ್ ಮಂಜುನಾಥ ಕಟ್ಟೆ, ಚುನಾವಣೆ ಶಿರಾಸ್ಥೆದಾರ್ ಸುಧೀಂದ್ರಕುಮಾರ್, ಪ್ರಥಮ ದರ್ಜೆ ಗುಮಾಸ್ಥರಾದ ಚಿರಾಗ್, ರಾಘವೇಂದ್ರ, ಗಣೇಶ್, ಶಿವಪ್ಪ ಇನ್ನೂ ಮುಂತಾದ ನೌಕರ ವರ್ಗ ಪುಸ್ತಕ ನೀಡುವುದರ ಮೂಲಕ ಬರಮಾಡಿಕೊಂಡರು.