ಲಂಚ ಸ್ವೀಕರಿಸುತಿದ್ದಾಗ ಲೋಕಾಯುಕ್ತ ಬಲೆಗೆ ಗ್ರಾಪಂ ಪಿಡಿಓ | lokayutha
ಶಿಕಾರಿಪುರ : ಅತಿವೃಷ್ಟಿಯಿಂದ ಮನೆ ಕಳೆದುಕೊಂಡ ಮಹಿಳೆಗೆ ಪರಿಹಾರದ ಚೆಕ್ ನೀಡಲು ಲಂಚ ಪಡೆಯುತಿದ್ದ ತಾಲೂಕಿನ ಬಗನಕಟ್ಟೆ ಗ್ರಾಪಂ ಪಿಡಿಓ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ
ಮಂಜುನಾಥ ಎಸ್. ಲೋಕಾಯುಕ್ತ ಬಲೆಗೆ ಬಿದ್ಧ ಪಿಡಿಒ ದಾಳಿ ನಡೆದಿದೆ. ಶಿವಮೊಗ್ಗ ಶಿಕಾರಿಪುರ ತಾಲೂಕಿನ ಬಗನಕಟ್ಟೆ ಗ್ರಾಮದ ಪಿಡಿಒ ಸಾಕಮ್ಮ ಎಂಬುವರ ಬಳಿ ಅತಿವೃಷ್ಠಿಯಿಂದ ಬಿದ್ದ ಮನೆಗೆ ಲಂಚ ಪಡೆಯುವಾಗ ದಾಳಿ ನಡೆಸಲಾಗಿದೆ.
ಸಾಕಮ್ಮ ಎಂಬುವವರ ಬಳಿ 6 ಸಾವಿರ ರೂ ಲಂಚ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆದಿದೆ. ರೆಡ್ ಹ್ಯಾಂಡ್ ಆಗಿ ಪಿಡಿಓ ಮಂಜುನಾಥ.ಸೀಜ್ ಆಗಿದ್ದಾರೆ.2021 ರಲ್ಲಿ ಅತಿವೃಷ್ಟಿಯಿಂದ ಸಾಕಮ್ಮರ ಮನೆ ಬಿದ್ದಿತ್ತು.ಇದಕ್ಕೆ ಸರ್ಕಾರದ ವತಿಯಿಂದ 5 ಲಕ್ಷ ಪರಿಹಾರ ಘೋಷಣೆಯಾಗಿತ್ತು.
ಕೊನೆಯ ಕಂತು 1 ಲಕ್ಷ ನೀಡುವ ವೇಳೆ ಲಂಚಕ್ಕೆ ಮಂಜುನಾಥ್ ಬೇಡಿಕೆ ಇಟ್ಟಿದ್ದಾನೆ. 12 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದನು.6 ಸಾವಿರ ಕೊಡಲು ಸಾಕಮ್ಮ ಮುಂದಾಗಿದ್ದಾಗ ಈ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ.