Headlines

ರಿಪ್ಪನ್‌ಪೇಟೆ : ಈದ್ ಮಿಲಾದ್ ಅಂಗವಾಗಿ ನಾಳೆ(11-10-2023) ಸೌಹಾರ್ದ ಸಮಾವೇಶ

ರಿಪ್ಪನ್‌ಪೇಟೆ : ಈದ್ ಮಿಲಾದ್ ಹಬ್ಬದ ಅಂಗವಾಗಿ ಬುಧವಾರ ಸೌಹಾರ್ದ ಸಮಾವೇಶ ಹಾಗೂ ಶಾಸಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಈದ್ ಮಿಲಾದ್ ಸಮಿತಿಯ ಅಧ್ಯಕ್ಷರಾದ ಮೈದಿನ್ ಪತ್ರೀಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬುಧವಾರ ಮೊಹಿಯುದ್ದೀನ್ ಜುಮ್ಮಾ ಮಸೀದಿ,ಮೆಕ್ಕಾ ಮಸೀದಿ ,ಈದ್ ಮಿಲಾದ್ ಸಮಿತಿ ,ತಾಅಜಿಜುಲ್ ಅರಬ್ಬಿಕ್ ಮದರಸ ,ಬದ್ರಿಯಾ ಮದರಸ ಗವಟೂರು ,SYS ಹಾಗೂ SSF ರಿಪ್ಪನ್‌ಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ಪ್ರವಾದಿಯವರ 1498 ನೇ ಜನ್ಮ ದಿನದ ಪ್ರಯುಕ್ತ ಹುಬ್ಬುನ್ನಬಿ ಮಿಲಾದ್ ಕಾನ್ಪರೆನ್ಸ್ ಅಂಗವಾಗಿ ಸೌಹಾರ್ಧ ಸಮಾವೇಶ ಹಾಗೂ ಶಾಸಕರಿಗೆ ಸನ್ಮಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಧರ್ಮಗುರುಗಳು, ಮುಖಂಡರು , ಗ್ರಾಪಂ ಅಧ್ಯಕ್ಷರು ಹಾಗೂ ಸದಸ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *

Exit mobile version