ಮನೆ ಮುಂದೆ ಆಟವಾಡುತಿದ್ದ ಬಾಲಕನ ಮೇಲೆ ಎರಗಿದ ಬೀದಿನಾಯಿಗಳು
ಸಾಗರ : ಇಲ್ಲಿನ ನಗರ ಸಭಾ ವ್ಯಾಪ್ತಿಯಲ್ಲಿ ಬೀದಿನಾಯಿಗಳ ಹಾವಳಿ ವಿಪರೀತವಾಗಿದೆ. ಆದರೆ ಅದರ ಬಗ್ಗೆ ತಲೆಕೆಡಿಸಿಕೊಳ್ಳುವವರು ಇಲ್ಲದಂತಾಗಿದೆ ಎಂದು ಜನರು ದೂರುತ್ತಿದ್ದಾರೆ. ಈ ನಡುವೆ ಬೀದಿನಾಯಿಗಳು ದಾಳಿ ನಡೆಸಿ ಬಾಲಕನೊಬ್ಬನ ಮುಖಕ್ಕೆ ಗಂಭೀರ ಗಾಯವಾಗಿರುವ ಘಟನೆ ನಡೆದಿದೆ.
ಬಾಲಕನೊಬ್ಬ ಮನೆಯ ಮುಂದೆ ಆಟವಾಡುತ್ತಿದ್ದ ವೇಳೆಯಲ್ಲಿ ಬೀದಿ ನಾಯಿಗಳು ದಾಳಿ ಮಾಡಿದ್ದು, ಆತನನ್ನ ಅಟ್ಟಾಡಿಸಿ ಆತನ ಮುಖಕ್ಕೆ ಕಚ್ಚಿ ಗಂಭೀರ ಗಾಯಗೊಳಿಸಿದೆ.
ಗಾಯಗೊಂಡಿದ್ದ ಬಾಲಕ ಚಿಕಿತ್ಸೆ ಪಡೆದುಕೊಂಡು ಭಯಬೀತನಾಗಿ “ಕಮಿಷನರ್ ಮಾಮಾ ದಯವಿಟ್ಟು ನಾಯಿಗಳನ್ನು ಹಿಡಿಸಿ” ಎಂದು ಅಂಗಲಾಚಿ ವಿಡಿಯೋ ಮಾಡಿದ್ದಾನೆ. ಸಾಗರ ನಗರಸಭೆ ವ್ಯಾಪ್ತಿಯ 25ನೇ ವಾರ್ಡಿನಲ್ಲಿ ಈ ಘಟನೆ ನಡೆದಿದೆ.
KSRTC ಬಸ್ ನಲ್ಲಿ ಯುವಕನ ಪುಂಡಾಟಿಕೆ – ಚಾಲಕ ಮಾಡಿದ್ದೇನು ಗೊತ್ತಾ..???
ಶಿವಮೊಗ್ಗ ; KSRTC ಬಸ್ಸಿನಲ್ಲಿ ಟಿಕೆಟ್ ಖರೀದಿಸುವಂತೆ ತಿಳಿಸಿದ ಕಂಡಕ್ಟರ್, ನೆರವಿಗೆ ಧಾವಿಸಿದ ಸಹ ಪ್ರಯಾಣಿಕರ ಮೇಲೆ ಯುವಕರ ಗುಂಪು ಹಲ್ಲೆಗೆ ಮುಂದಾಗಿದೆ. ತಕ್ಷಣ ಚಾಲಕ ಬಸ್ಸನ್ನು ಹೊಳೆಹೊನ್ನೂರು ಠಾಣೆ ಎದುರಿಗೆ ತಂದು ನಿಲ್ಲಿಸಿದ್ದು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಚಿತ್ರದುರ್ಗದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್ಸಿಗೆ ಚನ್ನಗಿರಿ ತಾಲೂಕು ಮಾವಿನಕಟ್ಟೆ ಬಳಿ ಯುವಕನೊಬ್ಬ ಹತ್ತಿದ್ದ. ಆದರೆ ಟಿಕೆಟ್ ತೆಗೆದುಕೊಳ್ಳಲು ನಿರಾಕರಿಸಿ ಕಂಡಕ್ಟರ್ ಜೊತೆಗೆ ವಾಗ್ವಾದ ನಡೆಸಿದ್ದ. ಅಲ್ಲದೆ ಹಲ್ಲೆಗು ಮುಂದಾಗಿದ್ದಾನೆ. ಸಹ ಪ್ರಯಾಣಿಕರೊಬ್ಬರು ಇದರ ವಿಡಿಯೋ ಮಾಡಿಕೊಳ್ಳಲು ಮುಂದಾಗಿದ್ದು ಅವರ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿದ್ದಾನೆ.
ಯುವಕ ಫೋನ್ ಮಾಡಿ ತಿಳಿಸಿದ್ದರಿಂದ ಮತ್ತಿಬ್ಬರು ಯುವಕರು ಅರಹತೊಳಲು ಬಳಿ ಬಸ್ ಹತ್ತಿಕೊಂಡಿದ್ದಾರೆ. ಅವರು ಕೂಡ ಕಂಡಕ್ಟರ್ ಮತ್ತು ಸಹ ಪ್ರಯಾಣಿಕರ ಜೊತೆಗೆ ದಾಂಧಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಯಾಣಿಕರು, ಕಂಡಕ್ಟರ್ ಬಳಿ ಇದ್ದ ಮೊಬೈಲ್, ಹಣ ಕಸಿದುಕೊಂಡಿದ್ದರು ಎಂದು ಆಪಾದಿಸಲಾಗಿದೆ.
ಎಲ್ಲಿಯು ಬಸ್ ನಿಲ್ಲಿಸದಂತೆ ಯುವಕರು ಡ್ರೈವರ್‌ಗೆ ತಾಕೀತು ಮಾಡಿದ್ದರು. ಆದರೆ ಸಮಯ ಪ್ರಜ್ಞೆ ಮೆರೆದ ಚಾಲಕ ಹೊಳೆಹೊನ್ನೂರು ಪೊಲೀಸ್ ಠಾಣೆ ಎದುರಿಗೆ ತಂದು ನಿಲ್ಲಿಸಿದ್ದಾರೆ. ಪೊಲೀಸರು ಮೂವರು ಯುವಕರನ್ನು ವಶಕ್ಕೆ ಪಡೆದಿದ್ದರು. ಸಹ ಪ್ರಯಾಣಿಕರಿಂದ ಕಸಿದುಕೊಂಡಿದ್ದ ಮೊಬೈಲ್, ಹಣವನ್ನು ಪೊಲೀಸರು ಮರಳಿ ಕೊಡಿಸಿದ್ದಾರೆ ಎನ್ನಲಾಗುತ್ತಿದೆ.