Headlines

ಬಿಜೆಪಿಯ ಮಾಜಿ ಮಂತ್ರಿಯೊಬ್ಬರು 50 ಕೋಟಿ ರೂಪಾಯಿ ಹಿಡಿದುಕೊಂಡು ಕಾಂಗ್ರೆಸ್ ಶಾಸಕರ ಮನೆ ಬಾಗಿಲು ತಟ್ಟುತಿದ್ದಾರೆ – ಆಯನೂರು ಗಂಭೀರ ಆರೋಪ|political news

ಬಿಜೆಪಿಯ ಮಾಜಿ ಮಂತ್ರಿಯೊಬ್ಬರು 50 ಕೋಟಿ ರೂಪಾಯಿ ಹಿಡಿದುಕೊಂಡು ಕಾಂಗ್ರೆಸ್ ಶಾಸಕರ ಮನೆ ಬಾಗಿಲು ತಟ್ಟುತಿದ್ದಾರೆ – ಆಯನೂರು ಗಂಭೀರ ಆರೋಪ

ಶಿವಮೊಗ್ಗ : ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಾಡಿದ ಮಾಜಿ ಮಂತ್ರಿ ಇದೀಗ ಕಾಂಗ್ರೆಸ್ ನಾಯಕರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಕಾಂಗ್ರೆಸ್ ಶಾಸಕರ ಮನೆಬಾಗಿಲಿಗೆ ಹೋಗಿ 50 ಕೋಟಿ ಕೊಡುತ್ತೇವೆ ಎಂದು ಹೇಳಿ ಪಕ್ಷಕ್ಕೆ ಆಹ್ವಾನಿಸುತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್ ಆರೋಪಿಸಿದ್ದಾರೆ.

ಶಿವಮೊಗ್ಗದಲ್ಲಿ ಕೆಪಿಸಿಸಿ ಕಛೇರಿಯಲ್ಲಿ ಅವರು ಮಾತನಾಡುತ್ತಾ
ಭ್ರಷ್ಟಾಚಾರಿ ಬಿಜೆಪಿಯವರು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ , ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಾಡಿದ ಮಾಜಿ ಮಂತ್ರಿ ಇದೀಗ ಕಾಂಗ್ರೆಸ್ ನಾಯಕರ ಮನೆ ಬಾಗಿಲು ತಟ್ಟುತ್ತಿದ್ದಾರೆ. ಕಾಂಗ್ರೆಸ್ ಶಾಸಕರ ಮನೆಬಾಗಿಲಿಗೆ ಹೋಗಿ 50 ಕೋಟಿ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ .  ಕಾಂಗ್ರೆಸ್ ಶಾಸಕರು ಛೀ.. ಥೂ.. ಎಂದು ಈ ನಾಯಕರನ್ನು ಹೊರಗೆ ಕಳುಹಿಸುತ್ತಿದ್ದಾರೆ ಎಂದ ಆಯನೂರು ಮಂಜುನಾಥ್  ಬಿಜೆಪಿ ಜೆಡಿಎಸ್ ತಮ್ಮಲ್ಲಿರುವ ಭ್ರಷ್ಟಾಚಾರದ ಹಣವನ್ನು ಇಟ್ಟುಕೊಂಡು ಈ ಸರ್ಕಾರ ಮೂರು ತಿಂಗಳು ಇರುವುದಿಲ್ಲ ಎಂದು ಹೇಳುತ್ತಿದ್ದಾರೆ. ಈ ಭ್ರಷ್ಟಾಚಾರದ ಹಣವನ್ನು ಕೇಂದ್ರ ಸರ್ಕಾರದಿಂದ ತಂದಿದ್ದಿರೋ ಅಥವಾ ತಾವೇ ಇಟ್ಟುಕೊಂಡಿದ್ದೋ ಸ್ಪಷ್ಟಪಡಿಸಿ ಎಂದಿದ್ದಾರೆ.

ಬಿಜೆಪಿ ಆಡಳಿತ ಅವಧಿಯಲ್ಲಿ 1000 ಕೋಟಿ ಸಾಲ ಮಾಡಿದ್ದನ್ನು ಕಾಂಗ್ರೆಸ್ ತೀರಿಸ ಬೇಕಿದೆ . ಕಾಮಗಾರಿಗಳ ಟೆಂಡರ್ ವೇಳೆ ತಮ್ಮೆಲ್ಲ ಪಾಲನ್ನು ಬಿಜೆಪಿ ನಾಯಕರು ತೆಗೆದುಕೊಂಡಿದ್ದಾರೆ . ಈಗ ಬಿಲ್ ಪಾವತಿ ಮಾಡುವ ವೇಳೆ ಕಾಂಗ್ರೆಸ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


ಬಿಎಸ್ ವೈ ಸಿಎಂ ಆಗಿದ್ದಾಗ ಅವರನ್ನು ಬ್ಲಾಕ್ ಮೇಲ್ ಮಾಡಿ ಮುಜುಗರವನ್ನುಂಟು ಮಾಡಿದವರು ಇಂದು ಸರ್ಕಾರ ಬೀಳಿಸುವ ಯತ್ನ ನಡೆಸಿದ್ದಾರೆ . ಈಶ್ವರಪ್ಪನವರ ಮೇಲೆ 40% ಆಪಾದನೆ ಇತ್ತು . ಮಾಧ್ಯಮದ ಮುಂದೆ ಈಶ್ವರಪ್ಪ ಕಾಂಗ್ರೆಸ್ ನವರು ನಮಗಿಂತ ಡಬಲ್ ತಿನ್ನುತ್ತಿದ್ದಾರೆ ಎಂದು ಸ್ವತಃ ಒಪ್ಪಿಕೊಂಡಿದ್ದಾರೆ. ಈ ಮೂಲಕ ಅವರು ಮಾಡಿದ ಭ್ರಷ್ಟಾಚಾರವನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ಹೀಗಾಗಿ  ಮೊದಲು ಈಶ್ವರಪ್ಪನವರನ್ನು ಬಂಧಿಸಿ ಅವರು ನಡೆಸಿದ ಭ್ರಷ್ಟಾಚಾರ ಎಷ್ಟು ಎಂಬುದು ಹೊರಬರಲಿ ಎಂದಿದ್ದಾರೆ.

ಬಿಜೆಪಿಯವರು ತಮ್ಮ ಕಪ್ಪು ಹಣದಿಂದ ಕಾಂಗ್ರೆಸ್ ಸರ್ಕಾರ ಮುಟ್ಟುವ ಕೆಲಸ ಏನಿದೆ..?? ಅದನ್ನು ಮೊದಲು ನಿಲ್ಲಿಸಲಿ ಎಂದು  ಆಯನೂರು ಮಂಜುನಾಥ್ ಹೇಳಿದ್ದಾರೆ.

Leave a Reply

Your email address will not be published. Required fields are marked *

Exit mobile version