ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರು ಸಮೀಪದ ಕಲ್ಲಿಹಾಳ್-ಅರಹತೊಳಲು ಬಳಿ ಶನಿವಾರ ರಾತ್ರಿ ಲಾರಿ ಹಾಗೂ ಎರಡು ಬೈಕ್‌ಗಳ ಮುಖಾಮುಖಿ ಡಿಕ್ಕಿಯಲ್ಲಿ ಮೂವರು ಯುವಕರು ದಾರುಣವಾಗಿ ಮೃತಪಟ್ಟಿದ್ದಾರೆ.
ಲಾರಿ ಚಕ್ರದ ಕೆಳಗೆ ಸಿಲುಕಿಕೊಂಡ ಮೃತ ದೇಹಗಳು ಗುರುತು ಸಿಗದಷ್ಟು ಛಿದ್ರವಾಗಿವೆ. ಲಾರಿ ಚಾಲಕ ಪರಾರಿಯಾಗಿದ್ದಾನೆ
ಒಂದೇ ಬೈಕ್‌ನಲ್ಲಿ ಪ್ರಯಾ ಣಿಸುತ್ತಿದ್ದ ವಿಕಾಸ್ (18), ಯಶ್ವಂತ(17) ಶಶಾಂಕ (17) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮತ್ತೊಂದು ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಭದ್ರಾವತಿ ತಾಲೂಕು ಅರದೊಟ್ಟು ಗ್ರಾಮದ ಗಗನ್‌ಗೆ ಭಾರಿ ಪೆಟ್ಟು ಬಿದ್ದಿದೆ. ಕೈ-ಕಾಲುಗಳನ್ನು ಕಳೆದುಕೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಲಾರಿ ಹಾಗೂ ಮೃತರು ಕಲ್ಲಿಹಾಳ್ ಕಡೆಯಿಂದ ಅರಹತೊಳಲು ಕೈಮರದ ಕಡೆ ಹೋಗುತ್ತಿದ್ದರು. ಎದುರಿನಿಂದ ಇನ್ನೊಂದು ಬೈಕ್‌ನಲ್ಲಿ ಗಗನ್ ಬೈಕ್‌ನಲ್ಲಿ ಬರುತ್ತಿದ್ದ. ಈ ವೇಳೆ ಬೈಕ್ ಲಾರಿ ಜೊತೆ ಬರುತ್ತಿದ್ದ ಬೈಕ್ಗೆ ಡಿಕ್ಕಿಯಾಗಿದೆ. ಪರಿಣಾಮ ಕೆಳಕ್ಕೆ ಬಿದ್ದವರ ಮೇಲೆ ಲಾರಿಯು ಹರಿದಿದೆ. ಪರಿಣಾಮ ಮೂವರು ಸ್ಥಳದಲ್ಲಿ ಸಾವನ್ನಪ್ಪಿದರೇ, ಇನ್ನೊಬ್ಬನ ಕೈಕಾಲಿಗೆ ಗಂಭೀರ ಏಟಾಗಿದೆ.