Headlines

ಸರ್ಕಾರಿ ಶಾಲೆಗೆ ಖಾಯಂ ಶಿಕ್ಷಕರ ನೇಮಕಾತಿಗೆ ಒತ್ತಾಯಿಸಿ ವಿದ್ಯಾರ್ಥಿಗಳು ಮತ್ತು ಪೋಷಕರಿಂದ 16 ಕಿ.ಮೀ ಪಾದಯಾತ್ರೆ – ಬಿಇಒ ಕಚೇರಿ ಮುಂದೆ ಧರಣಿ

ಸರ್ಕಾರಿ ಶಾಲೆಗೆ ಖಾಯಂ ಶಿಕ್ಷಕರ ನೇಮಕಾತಿಗೆ ಒತ್ತಾಯಿಸಿ ವಿದ್ಯಾರ್ಥಿಗಳು ಮತ್ತು ಪೋಷಕರಿಂದ 16 ಕಿ.ಮೀ ಪಾದಯಾತ್ರೆ

ಹೊಸನಗರ : ತಾಲ್ಲೂಕಿನ ಮೂಡುಗೊಪ್ಪ – ನಗರ ವ್ಯಾಪ್ತಿಯ ದುಬಾರ್‌ತಟ್ಟಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಖಾಯಂ ಶಿಕ್ಷಕರಿಲ್ಲ ಈ ಬಗ್ಗೆ ಶಿಕ್ಷಣಾಧಿಕಾರಿಗಳಿಗೆ ಸಾಕಷ್ಟು ಬಾರಿ ಲಿಖಿತ ಹಾಗೂ ಮೌಖಿಕವಾಗಿ ತಿಳಿಸಿದರೂ ಏನೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿ ಆ ಶಾಲೆಯ ವಿದ್ಯಾರ್ಥಿಗಳು ಹಾಗೂ ಮಕ್ಕಳ ಪೋಷಕರು ಗ್ರಾಮ ಪಂಚಾಯಿತಿ ಸದಸ್ಯ ಕರುಣಾಕರ ಶೆಟ್ಟಿಯವರ ನೇತೃತ್ವದಲ್ಲಿ ಸುಮಾರು 16 ಕಿ.ಮೀ. ಕಾಲ್ನಡಿಗೆಯಲ್ಲಿ ಹೊಸನಗರ ಶಿಕ್ಷಣಾಧಿಕಾರಿಗಳ ಕಛೇರಿಗೆ ಆಗಮಿಸಿ ಇಲಾಖೆಯ ಮುಂದೆ ಖಾಯಂ ಶಿಕ್ಷಕರು ನೀಡುವವರೆಗೆ ಧರಣಿ ನಡೆಸುತ್ತಿದ್ದಾರೆ.




ಈ ಶಾಲೆಯಲ್ಲಿ 1ರಿಂದ 5ನೇ ತರಗತಿಯವರೆಗೆ 15 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಶಿಕ್ಷಕರಿಲ್ಲದೇ ಮಕ್ಕಳಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ ಎಂದು ಆರೋಪಿಸುತ್ತಿದ್ದು ಇಂದೇ ಖಾಯಂ ಶಿಕ್ಷಕರನ್ನು ನೀಡುವವರೆಗೆ ನಾವು ಕಛೇರಿಯ ಮುಂದೆ ಧರಣಿ ನಡೆಸುವುದಾಗಿ ತಿಳಿಸಿದ್ದಾರೆ.

ಈ ಧರಣಿಯಲ್ಲಿ ಪ್ರಮುಖರಾದ ಗ್ರಾಪಂ ಮಾಜಿ ಅಧ್ಯಕ್ಷ ಕರುಣಾಕರ ಶೆಟ್ಟಿ, ಪ್ರಮುಖರಾದ ನಾಗೇಶ್, ಇದಾಯತ್, ಗಫರ್, ಗಣೇಶ್, ಮಾರುತಿ, ರಮೇಶ್, ನಾಗೇಶ, ರಾಘವೇಂದ್ರ, ಕಿಶೋರ ನಗರ, ಸಲೀಂ, ಇಜಾದ್, ಜನಾತ್, ಪಲ್ಲವಿ, ಶಶಿಕಲಾ, ಜಯಕ್ಕ, ಆಸ್ಮಾ, ಅಲುಮೇರ, ವಿದ್ಯಾರ್ಥಿಗಳು ಭಾಗವಹಿಸಿದ್ದರು.





About The Author

Leave a Reply

Your email address will not be published. Required fields are marked *

Exit mobile version