Headlines

ಚಲಿಸುತ್ತಿರುವಾಗ ಧಗಧಗನೇ ಹೊತ್ತಿ ಉರಿದ ಡಸ್ಟರ್ ಕಾರು|fire

ಚಲಿಸುತ್ತಿರುವಾಗ ಧಗಧಗನೇ ಹೊತ್ತಿ ಉರಿದ ಡಸ್ಟರ್ ಕಾರು|fire

ಶಿವಮೊಗ್ಗ : ಚಲಿಸುತ್ತಿದ್ದ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದ್ದು ಕಾರು ನಿಲ್ಲಿಸಿ ತಪಾಸಣೆ ನಡೆಸುತ್ತಿದ್ದಂತೆ ಡಸ್ಟರ್ ಕಾರು ಧಗ ಧಗನೆ ಹೊತ್ತು ಉರಿದಿರುವ ಘಟನೆ ಇಂದು ಮಧ್ಯಾಹ್ನ ಶಿವಮೊಗ್ಗದ ಹೊರವಲಯದಲ್ಲಿ ಸಂಭವಿಸಿದೆ.

ನಗರದ ಮುದ್ದಿನಕೊಪ್ಪದ ಬಳಿ ಭದ್ರಾವತಿಯ ಸಿದ್ದಾಪುರದ ಕಿರಣ್ ಕುಮಾರ್ ಎಂಬುವರ ಡಸ್ಟರ್ ಕಾರು ಕೆಎ 25 ಎಂ ಎ 1169 ಕ್ರಮ ಸಂಖ್ಯೆಯ ಡಸ್ಟರ್ ಕಾರಿನಲ್ಲಿ ಮುಂದಿನ ಎಂಜಿನ್ ನಲ್ಲಿ ಹೊಗೆ ಕಾಣಿಸಿಕೊಂಡಿದೆ.




ರಸ್ತೆ ಬದಿಗೆ ಕಾರು ನಿಲ್ಲಿಸಿ ಕಿರಣ್ ಕುಮಾರ್ ಮುಂದಿನ ಬ್ಯಾನೆಟ್ ತೆಗೆದಿದ್ದಾರೆ. ಬ್ಯಾನೆಟ್ ತೆಗೆಯುತ್ತಿದ್ದಂತೆ ಬೆಂಕಿ ಕಾರನ್ನು ಸಂಪೂರ್ಣ ಆವರಿಸಿಕೊಂಡಿದೆ. ಕಿರಣ್ ಕುಮಾರ್ ಭದ್ರಾವತಿಯಿಂದ ಆಯನೂರು ಕಡೆಗೆ ಹೊರಟಿದ್ದರು.

ಅಗ್ನಿಶಾಮಕದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನ ನಂದಿಸಿದ್ದಾರೆ . ಕಾರು ಸಂಪೂರ್ಣ ಸುಟ್ಟು ಕರಕಲಾಗಿದೆ.





About The Author

Leave a Reply

Your email address will not be published. Required fields are marked *

Exit mobile version