Headlines

20 ಲಕ್ಷ ರೂ. ಹಣವನ್ನು ಕಳ್ಳತನ ಮಾಡಿದ್ದ ಕಾರು ಚಾಲಕಕ ಗೋವಾದ ಕ್ಯಾಸಿನೋದಲ್ಲಿ ಜೂಜಾಡುವಾಗ ಸೆರೆ!


ಕಾರ್ಮಿಕರಿಗೆ ವೇತನ ಕೊಡಲು ತಂದಿದ್ದ 20 ಲಕ್ಷ ರೂ. ಇದ್ದ ಬ್ಯಾಗ್ ಕದ್ದು ಪರಾರಿಯಾಗಿದ್ದ ಆರೋಪಿಯೊಬ್ಬ ಗೋವಾದ ಕ್ಯಾಸಿನೋದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಶಿರಾಳಕೊಪ್ಪ ನೆಹರು ಕಾಲೋನಿಯ ಎ.ಎಸ್.ನಿತೀಶ್ ಬಂಧಿತ ಆರೋಪಿ.




ಬಂಧಿತನಿಂದ 7.61 ಲಕ್ಷ ರೂ. ನಗದು ಜಪ್ತಿ. ಗೋವಾದ ಕ್ಯಾಸಿನೊದಲ್ಲಿರುವ ಬಗ್ಗೆ ಮಾಹಿತಿ ಕಲೆಹಾಕಿದ ಪೊಲೀಸರು ಕ್ಯಾಸಿನೋಗೆ ತೆರಳಿ ಆರೋಪಿ ಬಂಧಿಸಿ ಕರೆತಂದ ಶಿವಮೊಗ್ಗದ ತುಂಗಾನಗರ ಠಾಣೆ ಪೊಲೀಸರು.

ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ 24*7 ಕುಡಿಯುವ ನೀರು ಸರಬರಾಜಿನ ಯೋಜನಾ ವ್ಯವಸ್ಥಾಪಕ ಹೇಮಂತ್ ಕುಮಾರ್ ಕಾರಿನ ಚಾಲಕನಾಗಿದ್ದ ಆರೋಪಿ. ಕಳೆದ ಜು.29ರಂದು ಜ್ಯೋತಿನಗರದ ಬಳಿ ಹಣವಿದ್ದ ಬ್ಯಾಗ್ ಕಿತ್ತುಕೊಂಡು ಹೋಗಿದ್ದ. ಈ ಬಗ್ಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.




ಜೂಜಾಟದ ಗೀಳು ಬೆಳೆಸಿಕೊಂಡಿದ್ದ ನಿತೀಶ್ 20 ಲಕ್ಷ ರೂ.ನಲ್ಲಿ 12.39 ಲಕ್ಷ ರೂ. ಕ್ಯಾಸಿನೋದಲ್ಲಿ ಜೂಜಾಡಿ ಕಳೆದಿದ್ದಾನೆ ಎನ್ನಲಾಗಿದೆ. 7,61,500 ರೂ. ನಗದು ಮತ್ತು ಮೊಬೈಲ್ ಜಪ್ತಿ ಮಾಡಲಾಗಿದೆ

ಡಿವೈಎಸ್ಪಿ ಬಾಲರಾಜ್ , ತುಂಗಾನಗರ ಠಾಣೆ ಇನ್‌ಸ್ಪೆಕ್ಟರ್ ಮಂಜುನಾಥ್‌ ಪಿಎಸ್‌ಐಗಳಾದ ಕುಮಾರ್ ಕುರಗುಂದ, ಎಂ.ರಘುವೀರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.



Leave a Reply

Your email address will not be published. Required fields are marked *

Exit mobile version