ಹೊಸನಗರ ಸಿಪಿಐ ಬಿ ಸಿ ಗಿರೀಶ್ ಸೇರಿದಂತೆ ಜಿಲ್ಲೆಯ ಏಳು ಪಿ ಐ ಗಳ ವರ್ಗಾವಣೆ :
ಹೊಸನಗರ ಸರ್ಕಲ್ ಇನ್ಸ್ ಪೆಕ್ಟರ್ ಗಿರೀಶ್ ಬಿ ಸಿ ಸೇರಿದಂತೆ ಜಿಲ್ಲೆಯ ಏಳು ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆ ಮಾಡಲಾಗಿದೆ. ಸಿಪಿಐ ಗಿರೀಶ್ ರವರು ತುಮಕೂರು ಜಿಲ್ಲೆ ಪಾವಗಡ ಗ್ರಾಮಾಂತರ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
ಹೊಸನಗರದಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದ ಗುರಣ್ಣ ಎಸ್ ಹೆಬ್ಬಾಳ್ ನೂತನ ಸಿಪಿಐ ಆಗಿ ವರ್ಗಾವಣೆಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯಿಂದ ವರ್ಗಾವಣೆಯಾದವರು ;
ಗಿರೀಶ್ ಬಿ.ಸಿ – ಹೊಸನಗರ ಪೊಲೀಸ್ ಠಾಣೆಯಿಂದ ತುಮಕೂರು ಜಿಲ್ಲೆ ಪಾವಗಡ ಗ್ರಾಮಾಂತರ ಠಾಣೆಗೆ
ಜೆ.ಲಕ್ಷ್ಮಣ್ – ಶಿಕಾರಿಪುರ ಗ್ರಾಮಾಂತರ ಠಾಣೆಯಿಂದ ಬೆಂಗಳೂರಿನ ನಂದಿನಿ ಲೇಔಟ್
ಅಶ್ವಥಗೌಡ.ಜೆ – ತೀರ್ಥಹಳ್ಳಿ ಪೊಲೀಸ್ ಠಾಣೆಯಿಂದ ಬೆಂಗಳೂರನ ಜ್ಞಾನಭಾರತಿ ಠಾಣೆ
ಪ್ರವೀಣ್ ಜಿ. ನೀಲಮ್ಮನವರ್ – ತೀರ್ಥಹಳ್ಳಿಯ ಮಾಳೂರು ಠಾಣೆಯಿಂದ ಹುಬ್ಬಳ್ಳಿ ಧಾರವಾಡ ಗೋಕುಲ್ ರೋಡ್ ಠಾಣೆ
ರಾಘವೇಂದ್ರ ಕಾಂಡಿಕೆ – ಭದ್ರಾವತಿ ನಗರ ವೃತ್ತದಿಂದ ಚಿತ್ರದುರ್ಗದ ಹಿರಿಯೂರು ಠಾಣೆಗೆ
ರವಿ ಎನ್.ಎಸ್ – ವಿನೋಬನಗರ ಪೊಲೀಸ್ ಠಾಣೆಯಿಂದ ದಾವಣಗೆರೆ ಜಿಲ್ಲೆ ನ್ಯಾಮತಿ ಠಾಣೆಗೆ
ಪ್ರವೀಣ್ ಕುಮಾರ್.ವಿ – ಸಾಗರ ಗ್ರಾಮಾಂತರ ಠಾಣೆಯಿಂದ ಹಾವೇರಿ ಜಿಲ್ಲೆ ರಾಣೇಬೆನ್ನೂರು ಗ್ರಾಮಾಂತರ ಠಾಣೆಗೆ
ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಯಾಗಿ ಬಂದವರು :
ಶ್ರೀಶೈಲಕುಮಾರ್ – ರಾಜ್ಯ ಗುಪ್ತವಾರ್ತೆಯಿಂದ ಭದ್ರಾವತಿ ನಗರ ವೃತ್ತ
ಮಹಾಬಲೇಶ್ವರ್ ಎಸ್.ನಾಯಕ್ – ಭಟ್ಕಳ ಗ್ರಾಮಾಂತರ ಠಾಣೆಯಿಂದ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಗೆ
ರುದ್ರೇಗೌಡ ರೇವಣಗೌಡ ಪಾಟೀಲ್ – ಹಾವೇರಿ ಜಿಲ್ಲೆ ಹಿರೇಕೆರೂರು ಠಾಣೆಯಿಂದ ಶಿವಮೊಗ್ಗದ ವಿನೋಬನಗರ ಠಾಣೆಗೆ
ಗುರಣ್ಣ ಎಸ್.ಹೆಬ್ಬಾಳ್ – ಭಾಲ್ಕಿ ನಗರ ಠಾಣೆಯಿಂದ ಹೊಸನಗರ ಠಾಣೆಗೆ