Headlines

ಸಾಗರ : ಗಾಂಜಾ ಸಾಗಾಣಿಕೆ – ಓರ್ವನ ಬಂಧನ|arrested

ಸಾಗರ : ಗಾಂಜಾ ಸಾಗಾಣಿಕೆ – ಓರ್ವನ ಬಂಧನ

ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ವರದಹಳ್ಳಿ ಸರ್ಕಲ್‌ನ ಸೌಪರ್ಣಿಕ ಹೋಟೆಲ್ ಬಳಿ ಅಬಕಾರಿ ಇಲಾಖೆ ಸಿಬ್ಬಂದಿಗಳು ದಾಳಿ ನಡೆಸಿ ಗಾಂಜಾ ಸಾಗಿಸುತ್ತಿದ್ದ ಓರ್ವನನ್ನು ಆ.3 ರ ಗುರುವಾರ ವಶಕ್ಕೆ ಪಡೆದಿದ್ದಾರೆ.

ರಾಮನಗರದ ಅಹ್ಮದ್ ಹುಸೇನ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ.

ಗಸ್ತಿನಲ್ಲಿದ್ದ ಅಬಕಾರಿ ಇಲಾಖೆ ಸಿಬ್ಬಂದಿಗಳು ಅಹ್ಮದ್ ಹುಸೇನ್ ನನ್ನು ತಪಾಸಣೆಗೆ ಒಳಪಡಿಸಿದಾಗ ಆತನ ಬಳಿಯಿದ್ದ 53 ಗ್ರಾಂ.ಒಣ ಗಾಂಜಾ ಪತ್ತೆ ಮಾಡಲಾಗಿದೆ. ಆರೋಪಿ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ವಶಕ್ಕೆ ನೀಡಲಾಗಿದೆ.

ದಾಳಿಯಲ್ಲಿ ಅಬಕಾರಿ ನಿರೀಕ್ಷಕ ಸಂದೀಪ್ ಎಲ್.ಸಿ., ಉಪನಿರೀಕ್ಷಕ ಸಂತೋಷ್ ರಡ್ಡೇರ್, ವಿನ್ನಿ ಲೋಬೋ, ಸಿಬ್ಬಂದಿಗಳಾದ ಗುರುಮೂರ್ತಿ, ಅರುಣ್ ಜಿ.ಎಂ., ದೀಪಕ್ ಯು.ಪಿ., ಕನ್ನಯ್ಯ, ಮಹಾಬಲೇಶ್, ವಾಹನ ಚಾಲಕ ಗಣಪತಿ ಪಾಲ್ಗೊಂಡಿದ್ದರು.

About The Author

Leave a Reply

Your email address will not be published. Required fields are marked *

Exit mobile version