ಸಾಗರದಲ್ಲಿ ರೌಡಿಗಳ ಪರೇಡ್|sagara
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಡಿವೈಎಸ್ಪಿ ಗೋಪಾಲಕೃಷ್ಣ ನಾಯಕ್ ಸಾಗರ ಉಪವಿಭಾಗದ ವ್ಯಾಪ್ತಿ ರೌಡಿ ಪರೇಡ್ ನಡೆಸಿದ್ಧಾರೆ.
ಸಾಗರ ಟೌನ್ ಪೊಲೀಸ್ ಸ್ಟೇಷನ್ ಎದುರು ಪರೇಡ್ ನಡೆಸಿದ ಅವರು
ರೌಡಿಸಂ ನಡೆಸುತ್ತಿರುವವರಿಗೆ ಎಚ್ಚರಿಕೆ ನೀಡಿ ಮಾತನಾಡಿದ ಅವರು, ನಿಮ್ಮ ಹೆಂಡತಿ ಮಕ್ಕಳ ಜೊತೆ ಉತ್ತವiವಾಗಿ ಸಂಸಾರಮಾಡಿಕೊಂಡು ಹೋಗಿ. ಇಲಾಖೆಯಿಂದ ನಿಮಗೆ ಯಾವುದೇ ತೊಂದರೆ ಬರುವುದಿಲ್ಲ. ಒಂದೊಮ್ಮೆ ನಿಮ್ಮ ಹಳೆ ಚಾಳಿಯನ್ನು ಪುನರಾರಂಭಿಸಿದರೆ ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗುತ್ತದೆ ಎಂದರು.
ಮಾದಕ ವಸ್ತು ಸೇವನೆ, ಸಾಗಾಣಿಕೆ, ಜೂಜು ಮಟ್ಕಾ ದಂಧೆ, ಮಹಿಳೆಯರನ್ನು ಚುಡಾಯಿಸುವುದು, ರೌಡಿಸಂ ಇನ್ನಿತರೆ ಚಟುವಟಿಕೆಗೆ ಅವಕಾಶ ಇಲ್ಲ. ಪೊಲೀಸ್ ನಿಮ್ಮ ಮೇಲೆ ಕಣ್ಣಿಟ್ಟಿರುತ್ತದೆ. ದೇಶದ ಕಾನೂನಿಗೆ ನೀವು ಗೌರವ ಕೊಡುವುದನ್ನು ಕಲಿಯಿರಿ. ಅದನ್ನು ಬಿಟ್ಟು ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸಿದರೆ ಸುಮ್ಮನಿರುವುದಿಲ್ಲ.
ಶಾಲಾಕಾಲೇಜು ಅಕ್ಕಪಕ್ಕದಲ್ಲಿ ತಂಬಾಕುಮಿಶ್ರಿತ ಪದಾರ್ಥಗಳನ್ನು ಮಾರಾಟ ಮಾಡುವಂತಿಲ್ಲ. ಜೊತೆಗೆ ಕೆಲವು ವಿದ್ಯಾರ್ಥಿಗಳು ತ್ರಿಬಲ್ ರೇಡಿಂಗ್ ಹೋಗುವುದು, ಕರ್ಕಶ ಹಾರನ್ ಬಾರಿಸುವುದು, ನಂಬರ್ ಪ್ಲೇಟ್ ಇಲ್ಲದೆ ದ್ವಿಚಕ್ರ ವಾಹನ ಓಡಿಸುವುದನ್ನು ಮಾಡುತ್ತಿದ್ದು ಅಂತಹವರ ವಿರುದ್ದ ದಿನಕ್ಕೆ ಎರಡು ಕೇಸ್ ಕಡ್ಡಾಯ ಹಾಕಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಸತಿಗೃಹಗಳಲ್ಲಿ ಸರ್ಕಾರದ ನಿಯಮಾವಳಿಯನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ರೂಮ್‍ಗಳನ್ನು ನೀಡುವಾಗ ಎಚ್ಚರಿಕೆ ವಹಿಸಿ ಎಂದು ಸಲಹೆ ನೀಡಿದ ಅವರು, ಗಣೇಶನ ಹಬ್ಬ ಸೇರಿದಂತೆ ವಿವಿಧ ಹಬ್ಬಗಳು ಬರುತ್ತಿದ್ದು ಶಾಂತಿ ಸೌಹಾರ್ದತೆ ಕಾಪಾಡಲು ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ಇನ್ಸ್‌ಪೆಕ್ಟರ್ ಗಳಾದ ಸೀತಾರಾಂ, ಕೃಷ್ಣಪ್ಪ, ಸಬ್ ಇನ್ಸ್‌ಪೆಕ್ಟರ್ ಗಳಾದ ತುಕಾರಾಮ ಸಾಗರಕರ್, ನಾರಾಯಣ ಮಧುಗಿರಿ, ಸುಜಾತ, ನಾಗರಾಜ್ ಇನ್ನಿತರರು ಹಾಜರಿದ್ದರು.