ಸಿದ್ದರಾಮಯ್ಯನವರು ತನ್ನ ರಾಜಕೀಯ ತೀಟೆಗೋಸ್ಕರ ಬಜೆಟ್ ಅನ್ನು ದುರುಪಯೋಗ ಮಾಡಿಕೊಂಡಿದ್ದಾರೆ – ಆರಗ ಜ್ಞಾನೇಂದ್ರ
ರಿಪ್ಪನ್ ಪೇಟೆ – ಜು.7 ರಂದು ಸಿದ್ದರಾಮಯ್ಯನವರು ರಾಜ್ಯ ಬಜೆಟ್ ಮಂಡಿಸಿದರು. ಅದು ಬಜೆಟ್ ಪುಸ್ತಕ ಎನ್ನುವುದಕ್ಕಿಂತ ಕೇಂದ್ರ ಹಾಗೂ ರಾಜ್ಯದ ಹಳೆಯ ಬಿಜೆಪಿ ಸರ್ಕಾರವನ್ನು ಟೀಕೆ ಮಾಡುವ ಪುಸ್ತಕ.14 ನೇ ಬಾರಿ ಮುಖ್ಯಮಂತ್ರಿಯಾಗಿ ಬಜೆಟ್ ಮಂಡಿಸಿದ್ರು. ಆದರೆ ತನ್ನ ರಾಜಕೀಯ ತೀಟೆಗೋಸ್ಕರ ಬಜೆಟ್ ಅನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಇದು ಕೂಡ ಇತಿಹಾಸದಲ್ಲಿ ಸೇರಿರುವ ಘಟನೆ ಎಂದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.
ರಿಪ್ಪನ್ ಪೇಟೆಯಲ್ಲಿ ಸುದ್ದಿಗೋಷ್ಠಿ ನೆಡೆಸಿ ಮಾತನಾಡಿದ ಅವರು ಹಿಂದಿನ ಯಾವುದೇ ಸರ್ಕಾರಗಳು ಕೂಡ ಬಜೆಟ್ ವಿಷಯದಲ್ಲಿ ಟೀಕೆ ಮಾಡಿರಲಿಲ್ಲ ಹಾಗೂ ತಮ್ಮ ಗ್ಯಾರೆಂಟಿ ಕೊಡಲು ಸಂಪೂರ್ಣ ವಿಫಲವಾಗಿದ್ದಾರೆ.10 ಕೆಜಿ ಅಕ್ಕಿ ಕೊಡುವುದಾಗಿ ಆಶ್ವಾಸನೆ ನೀಡಿ ಈಗ ಕೇಂದ್ರದ ಮೇಲೆ ಬೆರಳು ತೋರಿಸುತ್ತಿದ್ದಾರೆ. ಅನ್ನಭಾಗ್ಯ ನಂದೇ ಎಂದು ಎದೆ ಬಡಿದುಕೊಳ್ಳುತ್ತಿದ್ದ ಸಿದ್ದರಾಮಯ್ಯನವರು ಈಗ ಸುಮ್ಮನಾಗಿದ್ದಾರೆ. ಕೇಂದ್ರ ಸರ್ಕಾರ ಕೋವಿಡ್ ಸಂದರ್ಭದಲ್ಲಿ 10 ಕೆಜಿ ಅಕ್ಕಿ ಕೊಟ್ಟಿದ್ದಾರೆ. ಕೋವಿಡ್ ನಂತರ 5 ಕೆಜಿ ಗೆ ಇಳಿಸಿದ್ದಾರೆ. 80 ಕೋಟಿ ಜನರಿಗೆ ಈ ದೇಶದಲ್ಲಿ ಅಕ್ಕಿ ನೀಡಲಾಗುತ್ತಿದೆ ಎಂದರು.
ಜಗತ್ತಿಗೆ ಶಾಂತಿ ಬೋಧಿಸುವ, ಯಾರಿಗೂ ತೊಂದರೆ ಕೊಡದಿರುವ ಜೈನ ಮುನಿಗಳು ಎಂದರೆ ಸ್ವತಃ ದೇವರು ಎಂದೆಂಸಿಕೊಳ್ಳುವ, ಎಲ್ಲವನ್ನು ತ್ಯಜಿಸಿ ನಿಂತಿರುವ ಮುನಿ ಆಚಾರ್ಯ ಶ್ರೀ 108 ಕಾಮಕುಮಾರ ನಂದಿ ಮಹಾರಾಜರ ಹತ್ಯೆ ನೋವಿನ ಸಂಗತಿಯಾಗಿದ್ದು ಆ ಹತ್ಯೆಯನ್ನು ಖಂಡಿಸುತ್ತೇನೆ .
ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಹದಗೆಟ್ಟಿದೆ. ಕೊಲೆ ಸುಲಿಗೆ ತುಂಬಾ ಜಾಸ್ತಿಯಾಗಿದೆ. ಹೊಸ ಸರ್ಕಾರ ಬಂದ ನಂತರ ಈ ರೀತಿಯಾಗಿರುವುದು ಖಂಡನೀಯ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಇನ್ನಷ್ಟು ಬಿಗಿ ಧೋರಣೆ ತೋರಿಸಿ ಈ ರೀತಿ ಹತ್ಯೆಯನ್ನು ನಿಲ್ಲಿಸಬೇಕೆಂದು ಆಗ್ರಹಿಸುತ್ತೇನೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಕ್ಕಿ ಕೊಡಲು ಆಗದಿದ್ದಾಗ ಹಣ ನೀಡಿ ಎಂದು ನಾವೇ ಹೇಳೆದ್ದೆವು. ಆದರೆ ಆಗ ಹಣ ತಿನ್ನಲು ಬರುತ್ತಾ ಎಂದು ಪ್ರೆಶ್ನೆ ಮಾಡಿದ್ದರು.ಈಗ ಅವರೇ ಹಣ ನೀಡಲು ಹೊರಟಿದ್ದಾರೆ.ಈಗ ಇವರು ಕೊಡುವ ಹಣವನ್ನು ತಿನ್ನಲು ಆಗುತ್ತಾ? ಮಾರ್ಕೆಟ್ ಲೆಕ್ಕದಲ್ಲಿ ಹಣವನ್ನು ನೀಡುವುದಾದರೆ ಅವರು ಕೊಡುವ 170 ರೂ ಗಳಲ್ಲಿ ಎರಡೂವರೆ ಕೆಜಿ ಕೂಡ ಬರಲ್ಲ. ಕೇಂದ್ರದಲ್ಲಿ ಅಕ್ಕಿ ಇದೆ ಆದರೆ ಅದನ್ನು 5 ವರ್ಷಕ್ಕೆ ಆಗುವಷ್ಟು ದಾಸ್ತಾನು ಇಟ್ಟುಕೊಳ್ಳಬೇಕು. ಕೋವಿಡ್ ನಂತಹ ರೋಗಗಳು ಬಂದಾಗ ದೇಶಕ್ಕಾಗಿ ಅಕ್ಕಿ ದಾಸ್ತಾನು ಇರಬೇಕು ಎಂದರು.
ಈ ಸಂಧರ್ಭದಲ್ಲಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಎಂ ಬಿ ಮಂಜುನಾಥ್ ,ಮುಖಂಡರಾದ ಕಗ್ಗಲಿ ಲಿಂಗಪ್ಪ,ಆನಂದ್ ಮೆಣಸೆ, ,ಸುಧೀಂದ್ರ ಪೂಜಾರಿ , ಸುಧೀರ್ ಪಿ ಹಾಗೂ ಇನ್ನಿತರರಿದ್ದರು.



