ಕುತೂಹಲ ಘಟ್ಟದತ್ತ ಹುಂಚ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆ – ಆರ್ ಎಂಎಂ ಗೆ ಪ್ರತಿಷ್ಟೆಯ ಚುನಾವಣೆ..!!!RMM

ಹುಂಚಾ ವ್ಯವಸಾಯ ಸೇವಾ ಸಹಕಾರ ಸಂಘಕ್ಕೆ ಚುನಾವಣೆ.

ನಾಳೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ

ಅರ್ ಎಮ್ ಎಮ್ ಗೆ ಪ್ರತಿಷ್ಟೆ, ಪ್ರಸಕ್ತ ಸದಸ್ಯರ ಹೊಂದಾಣಿಕೆ ಅಸ್ತ್ರ, ಹಲವಾರು ಹೊಸಬರ ನಾಮಪತ್ರ ಸಲ್ಲಿಕೆ ಪ್ರತ್ಯಾಸ್ತ್ರ

ಕುತೂಹಲ ಘಟ್ಟದತ್ತ ಹುಂಚಾ ಸೊಸೈಟಿ ಚುನಾವಣೆ

ಹುಂಚ : ಸದಾ ಒಂದಿಲ್ಲೊಂದು ವಿವಾದಗಳಿಂದ ಹೊಸನಗರ ತಾಲ್ಲೂಕಿನ ಬಹು ವಿವಾದಿತ ಸೊಸೈಟಿ ಎಂಬ ಹೆಸರಾಗಿದ್ದ ಹುಂಚಾ ವ್ಯವಸಾಯ  ಸಹಕಾರ ನಿಯಮಿತದ ಚುನಾವಣ ಕಣ ರಂಗೇರಿದ್ದು ನಾಳೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ.

ಈ ಚುನಾವಣೆಯೂ ಆರ್ ಎಂ ಮಂಜುನಾಥ್ ಗೌಡರಿಗೆ ಪ್ರತಿಷ್ಟೆಯ ಕಣವಾಗಿದ್ದು,ಚುನಾವಣೆ ಕುತೂಹಲ ಘಟ್ಟದತ್ತ ಸಾಗಿದೆ.ಹೊಸಮುಖಗಳು ಈ ಬಾರಿಯ ಚುನಾವಣೆಯಲ್ಲಿ ಆಸಕ್ತಿ ತೋರುತಿದ್ದು ಕಣ ರಂಗೇರಿದೆ.

ಕಳೆದ ಐದು ವರ್ಷದಲ್ಲಿ ಯದುಕುಮಾರ್ ನೇತೃತ್ವದಲ್ಲಿ ಒಮ್ಮೆ ಲಾಭದಲ್ಲಿದೆ,ಒಮ್ಮೆ ಅವ್ಯವಹಾರವಾಗಿದೆ ಎಂಬ ಗೊಂದಲದಲ್ಲಿಯೇ ಹಲವಾರು ಸಾಮಾನ್ಯ ಸಭೆಗಳು ನಡೆದವು,ಕಳೆದ ಐದು ವರ್ಷದಲ್ಲಿ ಉಪಾಧ್ಯಕ್ಷರಾಗಿದ್ದ ಹೆಚ್ ಆರ್ ರಾಘವೇಂದ್ರ ಶೇರು ವಿವಾದಕ್ಕಿಡಾಗಿತ್ತು, ಹೊಸನಗರ ತಾಲ್ಲೂಕಿನ ಹುಂಚಾ ವ್ಯವಸಾಯ ಸೇವಾ ಸಹಕಾರ ಸಂಘದಲ್ಲೂ ಷೇರ್ ಇದ್ದು , ತೀರ್ಥಹಳ್ಳಿ ತಾಲ್ಲೂಕಿನ ಹುಂಚದಕಟ್ಟೆಯ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಕಳೆದ ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದು ,ಹುಂಚದಕಟ್ಟೆಯ ವ್ಯವಸಾಯ ಸೇವ ಸಹಕಾರ ಸಂಘದಲ್ಲೂ ಷೇರ್ ಹೊಂದಿದ್ದು ವಿವಾದಕ್ಕಿಡಾಗಿತ್ತು. ಕೊನೆಗೆ ಹುಂಚದಕಟ್ಟೆಯ ವ್ಯವಸಾಯ ಸಹಕಾರ ಸಂಘದ ಷೇರ್ ಹಿಂಪಡೆಯೊದರೊಂದಿಗೆ ವಿವಾದ ತಣ್ಣಗಾಗಿತ್ತು.

ಈ ಬಾರಿ ಸಹಕಾರಿ ಭೀಷ್ಮ ಅರ್ ಎಮ್ಎಮ್ ಗೆ ಪ್ರತಿಷ್ಟೆ…

ಕಳೆದ ಹಲವಾರು ವರ್ಷಗಳಿಂದ ಸಹಕಾರಿ ರಂಗದಲ್ಲಿ ತನ್ನದೆ ಹಿಡಿತ ಸಾಧಿಸಿರುವ ಅರ್ ಎಮ್ ಮಂಜುನಾಥಗೌಡರು ಮುಂದಿನ ವಿಧಾನ ಸಭಾ  ಚುನಾವಣೆಯ ಮೇಲೆ ಕಣ್ಣಿಟ್ಟುರುವುದರಿಂದ ಈಗ ಹುಂಚ ವ್ಯವಸಾಯ ಸೇವ ಸಹಕಾರ ಸಂಘವನ್ನು ತನ್ನ ಬೆಂಬಲಿಗರ ತೆಕ್ಕೆಗೆ ತೆಗೆದುಕೊಂಡು ಸಂಘಟನೆ ಬಲಗೊಳಿಸುವ ಸನ್ನಾಹದಲ್ಲಿದ್ದಾರೆ.

ಹೊಂದಾಣಿಕೆಯ ಮೂಡ್ ನಲ್ಲಿ  ಬಿಜೆಪಿ ಕಾಂಗ್ರೆಸ್ ಬೆಂಬಲಿತ ಸದಸ್ಯರು

ಕಳೆದ ಐದು ವರ್ಷಗಳಿಂದ ವಿವಾದಗಳಿಂದಲೇ ಬೇಸತ್ತಿರುವ ಷೇರುದಾರರೆದುರು ಚುನಾವಣೆ ಸ್ವಲ್ಪ ಕಷ್ಟದಾಯಕ ಎಂಬ ಅರಿವು ಸರ್ವ ಸದಸ್ಯರಿಗೂ ಇದೆ. ಜೊತೆಗೆ ಹೊಸಬರು ಹಲವು ಮಂದಿ ನಾಮಪತ್ರ ಸಲಿಕೆಗೆ ಹಾತೊರೆಯುತ್ತಿರುವುದರಿಂದ ಹೊಂದಾಣಿಕೆಯ ಅಸ್ತ್ರ ಮುಂದು ಮಾಡಲಾಗಿದೆ. ಈಗಿರುವ ಸದಸ್ಯರ ಸಿಂಡಿಕೇಟ್ ಚುನಾವಣೆಗೆ ಇಳಿದರೆ ಹೊಸಬರು ಹಲವರು ಎದುರು ಪಕ್ಷಾತೀತವಾಗಿ ಚುನಾವಣೆ ಮಾಡುವ ಸನ್ನಾಹದಲ್ಲಿದ್ದಾರೆ.

ಒಟ್ಟಿನಲ್ಲಿ ಚುನಾವಣೆ ನಡೆದು ಆಯ್ಕೆಯಾಗುವವರು ಹುಂಚಾ ವ್ಯವಸಾಯ ಸೇವಾ ಸಹಕಾರ ಸಂಘದ ಕಾಯಕಲ್ಪಕ್ಕೆ ಪ್ರಯತ್ನಿಸುತ್ತಾರಾ ಕಾದು ನೋಡಬೇಕಿದೆ….
ರಫ಼ಿ ರಿಪ್ಪನ್ ಪೇಟೆ

ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು. ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್‌ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.” ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ. ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್‌ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ. ಮುಂದಿನ ಹಂತದಲ್ಲಿ ನಾವು ಔಟ್‌ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ. ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು. - ರಫ಼ಿ ರಿಪ್ಪನ್ ಪೇಟೆ ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್

Recent Posts

ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ

ಕಾಲೇಜು ಸಮವಸ್ತ್ರದಲ್ಲೇ ಕೆರೆಯಲ್ಲಿ ಪತ್ತೆಯಾದ ಬಿಸಿಎ ವಿದ್ಯಾರ್ಥಿನಿಯ ಶವ ಶಿಕಾರಿಪುರ: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಪಟ್ಟಣದ ಹುಚ್ಚುರಾಯಸ್ವಾಮಿ ಕೆರೆಯಲ್ಲಿ ಬಿಸಿಎ…

10 hours ago

ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ

ವಾಮಾಚಾರದ ಭಯ ಹುಟ್ಟಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ವಂಚನೆ: ಕೆಲವೇ ಗಂಟೆಗಳಲ್ಲಿ ಆರೋಪಿ ಬಂಧನ Bhadravati police arrested…

10 hours ago

ರಿಪ್ಪನ್‌ಪೇಟೆ: ವಾಹನದಿಂದ ಬಿದ್ದ ಕರುವನ್ನು ಕಿಲೋಮೀಟರ್‌ಗಟ್ಟಲೆ ಎಳೆದೊಯ್ದ ಚಾಲಕ; ಕರು ಸ್ಥಿತಿ ಚಿಂತಾಜನಕ , ಸ್ಥಳೀಯರ ಆಕ್ರೋಶ !!

ರಿಪ್ಪನ್‌ಪೇಟೆ: ವಾಹನದಿಂದ ಬಿದ್ದ ಕರುವನ್ನು ಕಿಲೋಮೀಟರ್‌ಗಟ್ಟಲೆ ಎಳೆದೊಯ್ದ ಚಾಲಕ; ಕರು ಸ್ಥಿತಿ ಚಿಂತಾಜನಕ , ಸ್ಥಳೀಯರ ಆಕ್ರೋಶ !! A…

14 hours ago

ಈಸ್ಟ್‌ವೆಸ್ಟ್‌ ಬಸ್ ಸಂಸ್ಥೆ ಮಾಲೀಕ, ಮಾಜಿ ವಕ್ಫ್‌ ಬೋರ್ಡ್ ಅಧ್ಯಕ್ಷ ತಲ್ಕೀನ್ ಅಹ್ಮದ್ ನಿಧನ

ಈಸ್ಟ್‌ವೆಸ್ಟ್‌ ಬಸ್ ಮಾಲೀಕ ತಲ್ಕೀನ್ ಅಹ್ಮದ್ ನಿಧನ Talkeen Ahmed, owner of East West Bus institution and…

16 hours ago

ಪತ್ರಕರ್ತನ ಮನೆಗೆ ಕನ್ನ ; ₹6.57 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು

ಪತ್ರಕರ್ತನ ಮನೆಗೆ ಕನ್ನ ; ₹6.57 ಲಕ್ಷ ಮೌಲ್ಯದ ಚಿನ್ನಾಭರಣ, ನಗದು ಕಳವು Thieves broke into journalist Shi.…

17 hours ago

ಚೋರಡಿ ಲಾಡ್ಜ್‌ನಲ್ಲಿ ಪೊಲೀಸರಿಗೆ ಚಾಕು ತೋರಿಸಿ ಐವರು ಪರಾರಿ; ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲು

ಚೋರಡಿ ಲಾಡ್ಜ್‌ನಲ್ಲಿ ಪೊಲೀಸರಿಗೆ ಚಾಕು ತೋರಿಸಿ ಐವರು ಪರಾರಿ; ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲು ಶಿವಮೊಗ್ಗ: ಅನುಮಾನಾಸ್ಪದವಾಗಿ ಲಾಡ್ಜ್‌ನಲ್ಲಿ ತಂಗಿದ್ದ…

1 day ago