ಕಳಚಿ ಬೀಳುವ ದುಸ್ಥಿತಿಯಲ್ಲಿ ರಿಪ್ಪನ್‌ಪೇಟೆ ನಾಡಕಛೇರಿ ಮೇಲ್ಚಾವಣಿ – ಜೀವ ಭಯದಲ್ಲಿ ಸಿಬ್ಬಂದಿಗಳು,ಸಾರ್ವಜನಿಕರು
ರಿಪ್ಪನ್‌ಪೇಟೆ : ಪಟ್ಟಣದ ನಾಡಕಛೇರಿಯ ಮೇಲ್ಚಾವಣಿ ಈಗಲೋ ಆಗಲೋ ಬೀಳುವ ಹಂತದಲ್ಲಿದ್ದು ಕಛೇರಿಯ ಸಿಬ್ಬಂದಿಗಳು ಹಾಗೂ ಕೆಲಸ ಕಾರ್ಯಕ್ಕಾಗಿ ಇಲ್ಲಿಗಾಗಮಿಸುವ ಸಾರ್ವಜನಿಕರಿಗೆ ಜೀವಭಯ ಉಂಟಾಗಿದೆ.
ಶಿವಮೊಗ್ಗ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳೇ ಕಳಚಿ ಬೀಳುವ ಸ್ಥಿತಿಯಲ್ಲಿರುವ ಲೋಕೋಪಯೋಗಿ ಇಲಾಖೆಯ ರಿಪ್ಪನ್‌ಪೇಟೆ ನಾಢಕಛೇರಿಯನ್ನು ಒಮ್ಮೆಯಾದರೂ ತಾವು ನೋಡಿ ತಮ್ಮದೇ ಸಿಬ್ಬಂದಿಗಳ ಮತ್ತು ಸಾರ್ವಜನಿಕರ ಭಯವನ್ನು ದೂರ ಮಾಡಿ ಸಾಹೇಬ್ರೇ……………..!
ಶಿವಮೊಗ್ಗ-ಹೊಸನಗರ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಗ್ರಾಮ ಪಂಚಾಯ್ತಿ ಪೊಲೀಸ್ ಠಾಣೆ ಮುಂಭಾಗದಲ್ಲಿನ ಲೋಕೋಪಯೋಗಿ ಇಲಾಖೆಗೆ ಸೇರಿದ ಈ ಕಟ್ಟಡದಲ್ಲಿ ಹೋಬಳಿ ಕಛೇರಿ ಪ್ರಾರಂಭಿಸಲಾಗಿದ್ದು ಈ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು ಮೇಲ್ಚಾವಣಿ ಯಾವ ಸಂದರ್ಭದಲ್ಲಿ ಸಿಬ್ಬಂದಿಗಳ ಮತ್ತು ರೈತನಾಗರೀಕರ ತಲೆ ಮೇಲೆ ಬೀಳುತ್ತದೋ ಎಂಬ ಜೀವ ಭಯದಲ್ಲಿ ನೌಕರವರ್ಗ ಕಾಲಕಳೆಯಬೇಕಾದ ಅನಿವಾರ್ಯತೆ ಎದುರಾಗಿದೆ.
ಮಲೆನಾಡಿನಲ್ಲಿ ಮಳೆಗಾಲ ಅರಂಭವಾಗಿಲ್ಲ ಹಾಗೂ ಈಗಾಗಲೇ ಕರಾವಳಿ ವ್ಯಾಪ್ತಿಯಲ್ಲಿ ಚಂಡಮಾರುತದ ಮಳೆ ಅರಂಭವಾಗಿದ್ದು ಯಾವುದೇ ಸಂದರ್ಭದಲ್ಲಿಯೂ ಜಿಲ್ಲೆಯನ್ನು ಪ್ರವೇಶಿಸುವ ಬಗ್ಗೆ ಹವಾಮಾನ ಇಲಾಖೆ ಸೂಚನೆ ನೀಡಿದ್ದು ಈ ಚಂಡಮಾರುತದ ಗಾಳಿಯಿಂದಾಗಿ ಇಲ್ಲಿನ ದುಸ್ಥಿತಿಯಲ್ಲಿರುವ ಹೋಬಳಿ ಕಛೇರಿಯ ಮೇಲ್ಚಾವಣೆ ಕಳಚಿ ಬೀಳುವುದೋ ಎಂಬ ಭಯದಲ್ಲಿ ನೌಕರವರ್ಗ ಕರ್ತವ್ಯ ನಿರ್ವಹಿಸುವಂತಾಗಿದೆ.
ಒಟ್ಟಾರೆಯಾಗಿ ಅಪಾಯದ ಸ್ಥಿತಿಯಲ್ಲಿರುವ ಈ ನಾಡಕಛೇರಿಯ ಮೇಲ್ಚಾವಣೆಯನ್ನು ತಕ್ಷಣ ದುರಸ್ಥಿಗೊಳಿಸಿ ಇಲ್ಲವೇ ಅಪಾಯ ಸಂಭವಿಸುವ ಮುನ್ನವೇ ಎಚ್ಚತ್ತು ನಾಡಕಛೇರಿಯನ್ನು ಸ್ಥಳಾಂತರ ಗೊಳಿಸಿ ಎಂದು ಸಾಮಾಜಿಕ ಕಾರ್ಯಕರ್ತ ಹೋರಾಟಗಾರ ಟಿ.ಆರ್.ಕೃಷ್ಣಪ್ಪ ಮತ್ತು ಜನಪರ ಹೋರಾಟಗಾರ ಆರ್.ಎನ್.ಮಂಜುನಾಥ,ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಆರ್.ಎನ್.ಮಂಜಪ್ಪ ಹಾಗೂ ಕುಕ್ಕಳಲೇ ಈಶ್ವರಪ್ಪ,ಮುಡುಬ ಧರ್ಮಪ್ಪ ಆಗ್ರಹಿಸಿದ್ದಾರೆ,