Headlines

ನೂತನ ಸರ್ಕಾರದ ಪದಗ್ರಹಣ – ಗ್ಯಾರಂಟಿ ಕಾರ್ಡ್ ಯೋಜನೆಗೆ ಸಂಪುಟ ಸಭೆಯ ತಾತ್ವಿಕ ಒಪ್ಪಿಗೆ ಹಿನ್ನಲೆಯಲ್ಲಿ ಸಂಭ್ರಮಾಚರಣೆ|congress

ರಿಪ್ಪನ್‌ಪೇಟೆ : ನೂತನ ಕಾಂಗ್ರೆಸ್ ಸರ್ಕಾರದ ಪದಗ್ರಹಣ ಹಾಗೂ ಮುಖ್ಯಮಂತ್ರಿಯಾಗಿ ಎಸ್. ಸಿದ್ಧರಾಮಯ್ಯ ಮತ್ತು ಉಪ ಮುಖ್ಯಮಂತ್ರಿಯಾಗಿ ಡಿ. ಕೆ. ಶಿವಕುಮಾರ್ ಪ್ರಮಾಣ ವಚನ ಸ್ವೀಕಾರ ಮತ್ತು ಗ್ಯಾರಂಟಿ ಕಾರ್ಡ್ ಯೋಜನೆಗೆ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು.





ಪಟ್ಟಣದ ವಿನಾಯಕ ವೃತ್ತದಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ನೂತನ ಸರ್ಕಾರ ಅಸ್ತಿತ್ವಕ್ಕೆ ಹಾಗೂ ಗ್ಯಾರಂಟಿ ಕಾರ್ಡ್ ಯೋಜನೆಗಳಿಗೆ ನೂತನ ಸಂಪುಟ ತಾತ್ವಿಕ ಒಪ್ಪಿಗೆ ನೀಡಿರುವ ಹಿನ್ನಲೆಯಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.




ಈ ಸಂಧರ್ಭದಲ್ಲಿ ಮುಖಂಡರಾದ ಜಿ ಆರ್ ಗೋಪಾಲಕೃಷ್ಣ , ಖಲೀಲ್ ಷರೀಫ್ ,ಗಣಪತಿ ,ಆರ್ ಎಸ್ ಶಂಷುದ್ದೀನ್ ,ನವೀನ್ ಕೆರೆಹಳ್ಳಿ ,ವರ್ಗೀಸ್ ಪಿ ಜೆ, ನಾಗರಾಜ್ , ಅಫ಼್ಜಲ್ ,ಜೋಯಿ ,ರಾಬಿನ್ ಹಾಗೂ ತಾಲೂಕ್ ಜನಪರ ವೇದಿಕೆಯ ಅಧ್ಯಕ್ಷ ಆರ್ ಎನ್ ಮಂಜುನಾಥ್ ಹಾಗೂ ಇನ್ನಿತರರಿದ್ದರು.






About The Author

Leave a Reply

Your email address will not be published. Required fields are marked *

Exit mobile version