ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ದಿನಕಳೆದಂತೆ ರಂಗೇರುತಿದ್ದು ಅಭಿವೃದ್ದಿಗಿಂತ ಪ್ರೀತಿ ವಿಶ್ವಾಸಕ್ಕೆ ನಮ್ಮ ಸಹಕಾರ ಎಂದು ಕ್ಷೇತ್ರದ ಜನ ತೀರ್ಮಾನ ಮಾಡಿದಂತೆ ಭಾಸವಾಗುತಿದ್ದು ಆ ನಿಟ್ಟಿನಲ್ಲಿ ಯುವಕ ಯುವತಿಯರಿಂದ ಹಿಡಿದ್ದು ವೃದ್ದರವರೆಗೂ ಬೇಳೂರು ಗೋಪಾಲಕೃಷ್ಣ ರವರಿಗೆ ಬೆಂಬಲ ಸೂಚಿಸುತ್ತಿರುವುದು ಎದ್ದು ಕಾಣುತ್ತಿದೆ.
ಹೌದು ಸಾಗರದ ಪ್ರಖ್ಯಾತ ಉದ್ಯಮಿಗಳಾದ RBD ಡೆವಲಪರ್ಸ್ ನ ಜಲೀಲ್ ಮತ್ತು ಮಹೇಶ್ ಇವರು ಸಾಗರ ಕ್ಷೇತ್ರದಾದ್ಯಂತ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡು ಕ್ಷೇತ್ರದಾದ್ಯಂತ ಹಲವು ಅಭಿಮಾನಿಗಳನ್ನು ಹೊಂದಿದ್ದಾರೆಯೇ ಹೊರತು ಯಾವುದೇ ಪಕ್ಷಗಳಲ್ಲಿ ಗುರುತಿಸಿಕೊಂಡವರಲ್ಲ ಆದರೆ ಸಾಗರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ಬೇಳೂರು ಗೋಪಾಲಕೃಷ್ಣ ರವರ ಸಾಮಾಜಿಕ ಕಾಳಜಿ ಹಾಗೂ ಸೇವೆಯನ್ನು ಮನಗಂಡ ಜಲೀಲ್ ಮತ್ತು ಮಹೇಶ್ ರವರು ಇಂದು ಬೇಳೂರು ರವರಿಗೆ ಬೆಂಬಲ ಸೂಚಿಸಿ ತಮ್ಮ ಅಪಾರ ಸಂಖ್ಯೆಯ ಸ್ನೇಹಿತರು ಹಾಗೂ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಇಂದು ಬೆಳಗ್ಗೆ ಗಣಪತಿ ದೇವಸ್ಥಾನದಿಂದ ಸಾವಿರಾರು ಅಭಿಮಾನಿಗಳೊಂದಿಗೆ ಹೊರಟು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಬೇಳೂರು ಗೋಪಾಲಕೃಷ್ಣ ಸಮ್ಮುಖದಲ್ಲಿ ಅಧಿಕೃತವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.ಇದೇ ಸಂಧರ್ಭದಲ್ಲಿ ಬೇಳೂರು ಗೋಪಾಲಕೃಷ್ಣ ಮತ್ತು ಕಾಗೋಡು ತಿಮ್ಮಪ್ಪ ರವರಿಗೆ ಬೃಹದಾಕಾರದ ಹಾರವನ್ನು RBD ಗ್ರೂಪ್ಸ್ ಹಾಗೂ ಅಭಿಮಾನಿಗಳ ವತಿಯಿಂದ ಹಾಕಿದರು.
ಪಕ್ಷ ಸೇರ್ಪಡೆಯಾದ ನಂತರ ಮಾತನಾಡಿದ ಬೇಳೂರು ಗೋಪಾಲಕೃಷ್ಣ RBD ಗ್ರೂಪ್ ನ ಮಹೇಶ್ ಮತ್ತು ಜಲೀಲ್ ಕಾಂಗ್ರೆಸ್ ಪಕ್ಷ ಸೇರ್ಪಡೆಯಿಂದ ತಾಲೂಕಿನ ಕಾಂಗ್ರೆಸ್ ಗೆ ಬಲ ಬಂದಿದೆ.ಸಾಗರ ಕ್ಷೇತ್ರದಾದ್ಯಂತ ಹಲವು ಜನಪರ ಸಾಮಾಜಿಕ ಕಾರ್ಯಗಳನ್ನು ನಡೆಸಿಕೊಂಡು ಬರುತಿದ್ದ ಇವರು ಸಾಗರ ಕ್ಷೇತ್ರದ ದಿಗ್ಗಜರೆಂದೇ ಪ್ರಸಿದ್ದರಾಗಿದ್ದಾರೆ.ಇವರ ಸೇವಾ ಕಾರ್ಯಗಳಲ್ಲಿ ನಾನು ಕೂಡಾ ಮುಂದಿನ ದಿನಗಳಲ್ಲಿ ಕೈ ಜೋಡಿಸುತ್ತೇನೆ ಎಂದರು.
ಈ ಸಂಧರ್ಭದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಮಹೇಶ್ ಮತ್ತು ಜಲೀಲ್ ಬೇಳೂರು ಗೋಪಾಲಕೃಷ್ಣ ರವರನ್ನು ಗೆಲ್ಲಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತಿದ್ದೇವೆ ಹೊರತು ಯಾವುದೇ ಬೇರೆ ಉದ್ದೇಶವಿಲ್ಲ.ಸಾಗರ ಕ್ಷೇತ್ರದಾದ್ಯಂತ ಹಲವಾರು ವರ್ಷಗಳಿಂದ ಅನೇಕ ಸಾಮಾಜಿಕ ಸೇವೆಯನ್ನು ನಡೆಸಿಕೊಂಡು ಬರುತ್ತಿರುವ ನಮಗೆ ಒಬ್ಬ ಸಹೃದಯ ನಾಯಕ ಬೇಕು ಹಾಗಾಗಿ ಬೇಳೂರು ಗೋಪಾಲಕೃಷ್ಣ ರವರನ್ನು ಬೆಂಬಲಿಸುತಿದ್ದೇವೆ ಎಂದರು.
ಈ ಸಂಧರ್ಭದಲ್ಲಿ ಕಾಗೋಡು ತಿಮ್ಮಪ್ಪ, ಮಲ್ಲಿಕಾರ್ಜುನ ಹಕ್ರೆ ,ಅನಿತಾ ಕುಮಾರಿ,ತಸ್ರೀಪ್ ಇಬ್ರಾಹಿಂ,ಗಣಪತಿ ಮಂಡಗಳಲೆ, ಲೋಹಿತ್.ಸುದರ್ಶನ್ ತಲಗಣಿ.ಶ್ರೀಧರ್ ಕುಗ್ವೆ.ರಾಜೇಶ್ ಕುಗ್ವೆ.ಸಚಿನ್ ವಿನೋಬನಗರ.ಶರತ್ ನೆರಲಿಗೆ ನಾಗರಾಜ್ ಹೊನ್ನೆ ಮಕ್ಕಿ ಲಕ್ಷ್ಮಿ ಕರುಮನೆ ಹಾಗೂ ಇನ್ನಿತರರಿದ್ದರು.
ಮಾಹಿತಿ – ಮಲೆನಾಡ ರಹಸ್ಯ