Headlines

ಮೇ 4ಕ್ಕೆ ಸಾಗರಕ್ಕೆ ಖ್ಯಾತ ಕ್ರಿಕೆಟಿಗ ಹರ್ಭಜನ್ ಸಿಂಗ್

ಮೇ 1 ರಿಂದಲೇ ಮಧ್ಯದಂಗಡಿ ಬಂದ್ ಮಾಡಿ ಅಧಿಕಾರಿಗಳ ಬದಲಾಯಿಸಿ – ಕೆ ದಿವಾಕರ್

ಮೇ 4 ಕ್ಕೆ ಸಾಗರಕ್ಕೆ ಆಮ್ ಆದ್ಮಿ ಪರ ಪ್ರಚಾರ ಸಭೆಗೆ ಖ್ಯಾತ ಕ್ರಿಕೆಟಿಗ ಹರ್ಭಜನ್ ಸಿಂಗ್

ರಿಪ್ಪನ್‌ಪೇಟೆ;- ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಆಭ್ಯರ್ಥಿ ಹರತಾಳು ಹಾಲಪ್ಪ ಆಧಿಕಾರ ಚಲಾಯಿಸಿ ಮಧ್ಯವನ್ನು ಹಂಚುವ ಹುನ್ನಾರದಲ್ಲಿದ್ದು ಆ ಕಾರಣ ಮೇ.1 ರಂದಲೇ ಕ್ಷೇತ್ರದ ವ್ಯಾಪ್ತಿಯಲ್ಲಿ ಮಧ್ಯಮಾರಾಟವನ್ನು ಬಂದ್ ಮಾಡುವುದು ಮತ್ತು ಚುನಾವಣಾ ಕರ್ತವ್ಯ ನಿರ್ವಹಿಸುತ್ತಿರುವ ಮತ್ತು ಚಕ್‌ಪೋಸ್ಟ್ಗಳಲ್ಲಿ ಯಾವುದೇ ವಾಹನವನ್ನು ತಪಾಸಣೆ ಮಾಡದಿರುವುದನ್ನು ನೋಡಿದರೆ ಬಿಜೆಪಿ ಆಕ್ರಮಗಳನ್ನು ಬೆಂಬಲಿಸುತ್ತಿದ್ದಾರೆಂದು ಎಎಪಿ ಪಕ್ಷದ ಅಭ್ಯರ್ಥಿ ಕೆ.ದಿವಾಕರ್ ಆರೋಪಿಸಿದರು.




ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಸಾಗರ -ಹೊಸನಗರ ತಾಲ್ಲೂಕು ವ್ಯಾಪ್ತಿಯ ಅದಿಕಾರಿಗಳನ್ನು ಬದಲಾಯಿಸಿ ಬೇರೆ ಕೇತ್ರದ ನಿಷ್ಟಾವಂತ ಅಧಿಕಾರಿಗಳನ್ನು ನಿಯೋಜಿಸಬೇಕು.ಈಗಾಗಲೇ ಸಾಗರ ಉಪವಿಭಾಗಾಧಿಕಾರಿಗೆ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೂ ದೂರು ಸಲ್ಲಿಸಲಾಗುವುದು ಎಂದು ಹೇಳಿದರು.


ಮೇ ತಿಂಗಳಲ್ಲಿ ಆಮ್ ಆದ್ಮಿ ಪರ ಪ್ರಚಾರಕ್ಕೆ ಖ್ಯಾತ ಕ್ರಿಕೆಟಿಗ ಹರ್ಭಜನ್ ಸಿಂಗ್ ಆಗಮಿಸಲಿದ್ದು ಅವರ ಜೊತೆ ಪಂಜಾಬ್ ಮುಖ್ಯಮಂತ್ರಿ ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಸಾಗರ ಕ್ಷೇತ್ರದಲ್ಲಿ ಆಮ್ ಆದ್ಮಿ ಒಳ ಒಪ್ಪಂದ ಮಾಡಿಕೊಂಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಕ್ರಿಮಿನಲ್ ಹಿನ್ನಲೆಯುಳ್ಳ ಶಾಸಕರ ಜೊತೆ ಒಪ್ಪಂದ ಮಾಡಿಕೊಳ್ಳುವಷ್ಟು ದುರ್ದೆಸೆ ನನಗೆ ಬಂದಿಲ್ಲ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಆದಾಯ ಪಟ್ಟಿಯ ಪ್ರಕಾರ ನಾನು ಸಾಗರ ಕ್ಷೇತ್ರದ ಉಳಿದೆಲ್ಲಾ ಅಭ್ಯರ್ಥಿಗಳಿಗಿಂತ ಆರ್ಥಿಕವಾಗಿ ಸಬಲವಾಗಿದ್ದೇನೆ ಎಂದರು.




ಬಿಜೆಪಿ ಆಭ್ಯರ್ಥಿ ಹರತಾಳು ಹಾಲಪ್ಪ ಈಗಾಗಲೇ ನನ್ನ ವಿರುದ್ಧ ಸುಳ್ಳು ಅಪಪ್ರಚಾರ ಮಾಡುತ್ತಿದ್ದು ಎಎಪಿ ಆಭ್ಯರ್ಥಿ ಕೆ.ದಿವಾಕರ ನಿಷ್ಕಿಯ ಎಂದು ಹೋದ ಕಡೆಯಲ್ಲಿ ಪ್ರಚಾರ ಮಾಡುತ್ತಿರುವುದು
ಸುಳ್ಳನ್ನು ಸತ್ಯ ಮಾಡುವುದೇ ಬಿಜೆಪಿ ಅಭ್ಯರ್ಥಿ ಹರತಾಳು ಹಾಲಪ್ಪ ಹಾಗೂ ಬಿಜೆಪಿ ಪಕ್ಷದವರಿಗೆ ಕರಗತವಾಗಿದೆ ಎಂದರು.

ತಾಲ್ಲೂಕ್ ಎಎಪಿ ಅಧ್ಯಕ್ಷ ಗಣೇಶ್ ಸೂಗೋಡು,ಪಕ್ಷದ ಮುಖಂಡರಾದ ಸಂತೋಷ್ ಆಶ್ರೀತಾ, ಹಸನಬ್ಬ,ಕುಕ್ಕಳಲೇ ಈಶ್ವರಪ್ಪ ಮತ್ತು ಅಶೋಕ್ ಬಿಳಿಕಿ ಹಾಗೂ ಇನ್ನಿತರರು ಹಾಜರಿದ್ದರು.



Leave a Reply

Your email address will not be published. Required fields are marked *

Exit mobile version