Headlines

ರಿಪ್ಪನ್‌ಪೇಟೆ : ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಅಂಗಡಿ ಮೇಲೆ ಪೊಲೀಸರ ದಾಳಿ – ಓರ್ವ ವಶಕ್ಕೆ|excise

ರಿಪ್ಪನ್‌ಪೇಟೆ : ಇಲ್ಲಿನ ಸಮೀಪದ ಅರಸಾಳು ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಅಂಗಡಿಯ ಮೇಲೆ ಪಟ್ಟಣದ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ. ತಮ್ಮಡಿಕೊಪ್ಪ ಗ್ರಾಮದ ಅಂಗಡಿಯೊಂದರ ಮುಂಭಾಗದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತಿದ್ದ ಮಾಹಿತಿ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿ ಮಂಜಪ್ಪ ಎಂಬಾತನನ್ನು ವಶಕ್ಕೆ ಪಡೆದು ಅಕ್ರಮ ಮದ್ಯವನ್ನು ಅಮಾನತ್ತು ಪಡಿಸಿಕೊಂಡಿದ್ದಾರೆ. ದಾಳಿಯಲ್ಲಿ ರಿಪ್ಪನ್‌ಪೇಟೆ ಪಿಎಸ್ ಐ ಶಿವಾನಂದ ಕೆ ನೇತ್ರತ್ವದಲ್ಲಿ ಸಿಬ್ಬಂದಿಗಳಾದ ಉಮೇಶ್ ,ಶಿವಕುಮಾರ್ ನಾಯ್ಕ್ ಮತ್ತು ಮಧುಸೂಧನ್ ಇದ್ದರು.

Read More

ಆನವಟ್ಟಿಯಲ್ಲಿ ಬೈಕ್ ಮತ್ತು ಟಿಟಿ ನಡುವೆ ಡಿಕ್ಕಿ – ಯುವಕ ಸಾವು|accident

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿಯಲ್ಲಿ ಬೈಕ್‌ ಹಾಗೂ ಟಿಟಿ ವಾಹನದ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರರೊಬ್ಬರು ಮೃತಪಟ್ಟಿದ್ದಾರೆ. ಹಾನಗಲ್ ಕಡೆಯಿಂದ ಶಿವಮೊಗ್ಗ ಕಡೆಗೆ ಹೊರಟಿದ್ದ ಟಿಟಿಗೆ ಎದುರಿನಿಂದ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. ಆನವಟ್ಟಿಯ ದುರ್ಗಮ್ಮ ಬೀದಿಯ ಕೀರ್ತಿರಾಜ್ (22) ಮೃತ ದುರ್ದೈವಿಯಾಗಿದ್ದಾರೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಕೀರ್ತಿರಾಜ್‌ ಅವರಿಗೆ ಆನವಟ್ಟಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್‌ಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲಾಗಲೇ ಕೀರ್ತಿರಾಜ್ ಮೃತಪಟ್ಟಿದ್ದಾರೆ.  ಆನವಟ್ಟಿ ಪೊಲೀಸ್ ಠಾಣೆಯಲ್ಲಿ…

Read More

ತೀರ್ಥಹಳ್ಳಿ ತಾಲೂಕಿನ ವ್ಯಕ್ತಿಯೊಬ್ಬನಿಗೆ ಮಂಗನ ಖಾಯಿಲೆ (KFD) ಧೃಡ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಗುತ್ತಿಯಡೆಹಳ್ಳಿ  ಬಳಿಯ ಹಳ್ಳಿ ಬೈಲು ಗ್ರಾಮದ 54 ವರ್ಷದ ವ್ಯಕ್ತಿಗೆ ಕೆಎಫ್ಡಿ ಪಾಸಿಟಿವ್ ದೃಢಪಟ್ಟಿದೆ. ನಾಲ್ಕೈದು ದಿನದಿಂದ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಮಂಗನ ಖಾಯಿಲೆ ಇರುವುದು ಪತ್ತೆಯಾಗಿದೆ. ಜ್ವರ ಲಕ್ಷಣ ಇಲ್ಲದಿದ್ದರೂ ಎರಡು ದಿನ ಅವರನ್ನು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯಲ್ಲಿ ನಿಗಾದಲ್ಲಿಡಲಾಗಿತ್ತು. ಅವರ ಮನೆಯ ಉಳಿದ ಸದಸ್ಯರಿಗೆ ಯಾವುದೇ ಲಕ್ಷಣಗಳಿಲ್ಲ. ಆ ಊರಿನ ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಡಿಎಚ್ಒ ಡಾ.ರಾಜೇಶ್ ಸುರಗಿಹಳ್ಳಿ ತಿಳಿಸಿದರು.

Read More

ಹೊಸನಗರ : ಬೈಕ್ ಅಪಘಾತದಲ್ಲಿ ಯುವಕನ ಸ್ಥಿತಿ ಗಂಭೀರ|accident

ನಿಯಂತ್ರಣ ತಪ್ಪಿ ಬೈಕಿನಿಂದ ಬಿದ್ದ ಪರಿಣಾಮ ಸವಾರ ಗಂಭೀರ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಗೆ ತಲುಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸೊನಲೆ ಗ್ರಾಮದಲ್ಲಿ ಭಾನುವಾರ ಸಂಭವಿಸಿದೆ. ಹೊಸನಗರ ಪಟ್ಟಣ ವ್ಯಾಪ್ತಿಯ ದಿ|| ಪ್ರಕಾಶ್ ಹಾಗೂ ಆಶಾ ದಂಪತಿಗಳ ಪುತ್ರ ಆದರ್ಶ (23) ಗಾಯಗೊಂಡಿರುವ ಬೈಕ್ ಸವಾರ. ತನ್ನ ಸ್ನೇಹಿತನನ್ನು ಹಿಂಭಾಗದಲ್ಲಿ ಕೂರಿಸಿಕೊಂಡು ಬೈಕಿನಲ್ಲಿ ಸವಾರಿ ಮಾಡಿಕೊಂಡು ಹೋಗುವಾಗ ಸೊನಲೆ – ತೀರ್ಥಹಳ್ಳಿ ರಸ್ತೆಯಲ್ಲಿ ತಿರುವಿನಲ್ಲಿ ಬೈಕ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಪಲ್ಟಿ ಹೊಡೆದಿದೆ. ಅಪಘಾತದ…

Read More

ಸಮಾಜದಲ್ಲಿ ಸಮಾನತೆ ತರುವುದೇ ಕಾಂಗ್ರೇಸ್ ಸಿದ್ದಾಂತ -ಕಾಗೋಡು ತಿಮ್ಮಪ್ಪ|congress

ಸಮಾಜದಲ್ಲಿ ಸಮಾನತೆ ತರುವುದೇ ಕಾಂಗ್ರೇಸ್ ಸಿದ್ದಾಂತ’’ ಕಾಗೋಡು ತಿಮ್ಮಪ್ಪ ರಿಪ್ಪನ್‌ಪೇಟೆ;-ಹೆಣ್ಣು ಮಗಳು ಸ್ವತಂತ್ರವಾಗಿ ವಿಚಾರವಂತರಾಗಿ ಬದುಕುವಂತ ಇಚ್ಚಾಶಕ್ತಿಯನ್ನು ಪ್ರದರ್ಶಿಸಬೇಕು,ಗೇಣಿದಾರರಿಗೆ ಭೂ ಒಡೆತನ ಕೊಡುವುದು ಹೇಗೋ ಹಾಗೆ ಸಮಾಜದಲ್ಲಿ ಹೆಣ್ಣು ಮಗಳಿಗೆ ಪಾಲುದಾರಳು ಆ ಕಾರಣ ಹೆಣ್ಣು ಮಗಳಿಗೆ ಸಮಾನವಾಗಿ ಅಸ್ತಿ ಕೊಡಬೇಕು ಎಂಬ ತತ್ವವನ್ನು ಜಾರಿಗೊಳಿಸಿದ್ದು ಕಾಂಗ್ರೇಸ್ ಪಕ್ಷ ಪ್ರಜಾಪ್ರಭುತ್ವದಲ್ಲಿ  ಪ್ರಜೆಗಳೇ ಪ್ರಭುಗಳು. ಪ್ರಜಾತಂತ್ರ ವ್ಯವಸ್ಥೆಗೆ ನೀವೇ ರಾಜರಾಗುತ್ತೀರಾ ಅಧೀನಾರಾಗುತ್ತೀರಾ  ಆ ನಿಟ್ಟಿನಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ಬಲಿಷ್ಟಗೊಳಿಸಬೇಕು ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು. ರಿಪ್ಪನ್‌ಪೇಟೆಯ…

Read More

ಶಾಸಕ ಹರತಾಳು ಹಾಲಪ್ಪ ವಿರುದ್ದ ಯಡಿಯೂರಪ್ಪ ರವರ ಬಳಿ ದೂರು ಸಲ್ಲಿಸಿದ ಬಿಜೆಪಿ ಮುಖಂಡರು|BJP

ಶಾಸಕ ಹಾಲಪ್ಪ ವಿರುದ್ಧ ಬಿಎಸ್‌ವೈಗೆ ದೂರು  ಸಾಗರ ಶಾಸಕ ಹರತಾಳು ಹಾಲಪ್ಪನ ವರಿಗೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸುವ ನಿಟ್ಟಿನಲ್ಲಿ ಬಿಜೆಪಿಯ ಹಲವು ಘಟಾನು ಘಟಿ ನಾಯಕರು, ಸಂಘದ ಹಿರಿಯರು ಸದ್ದಿಲ್ಲದೆ ಕೆಲಸ ಮಾಡುತ್ತಿದ್ದಾರೆ. ಶನಿವಾರ ಶಿಕಾರಿಪುರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಕೇಂದ್ರ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂ ರಪ್ಪ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರರನ್ನು ಭೇಟಿ ಮಾಡಿದ ವಿರೋಧಿ ಬಣ ಬಹಳಷ್ಟು ಹೊತ್ತು ಚರ್ಚೆ ನಡೆಸಿದೆ. ಮುಖ್ಯವಾಗಿ ಎಲ್ಲರ ಮಾತುಗಳನ್ನೂ ಬಿಎಸ್‌ವೈ, ಸಮಾಧಾನ…

Read More

ಕರ್ನಾಟಕ ವಿಧಾನಸಭಾ ಚುನಾವಣೆ 2023 – 224 ಕ್ಷೇತ್ರಗಳ ಕಾಂಗ್ರೆಸ್ ಪಕ್ಷದ ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಇಲ್ಲಿದೆ ನೋಡಿ…!!

ಕರ್ನಾಟಕ ರಾಜ್ಯದ ವಿಧಾನಸಭಾ ಚುನಾವಣೆಯ ಕಾವು ಏರುತಿದ್ದು ಎಲ್ಲಾ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಳೆದು ತೂಗಿ ಆಯ್ಕೆ ಮಾಡುತ್ತಿವೆ.ಇದರಲ್ಲಿ ಜೆಡಿಎಸ್ ಪಕ್ಷ ಒಂದು ಹೆಜ್ಜೆ ಮುಂದೆ ಹೋಗಿ ಈಗಾಗಲೇ ಹಲವು ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಮುಂಬರುವಂತಹ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾರಿಗೆ ಯಾವ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನೀಡಲಾಗುತ್ತಿದೆ ಎನ್ನುವ ಸಂಭವನೀಯ ಪಟ್ಟಿ ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳಿಂದ ಲಭ್ಯವಾಗಿದೆ. ಕಾಂಗ್ರೆಸ್ ಸಂಭವನೀಯರ ಪಟ್ಟಿ ಬೆಂಗಳೂರು ನಗರ ಗಾಂಧಿನಗರ- ದಿನೇಶ್ ಗುಂಡೂರಾವ್…

Read More

ಹೊಂಬುಜ ಜಾತ್ರಾ ಮಹೋತ್ಸವಕ್ಕೆ ಪರಮಪೂಜ್ಯ ಸ್ವಸ್ತಿಶ್ರೀಗಳವರಿಂದ ಚಾಲನೆ|hombuja

ಹೊಂಬುಜ ಜಾತ್ರಾ ಮಹೋತ್ಸವಕ್ಕೆ ಪರಮಪೂಜ್ಯ ಸ್ವಸ್ತಿಶ್ರೀಗಳವರಿಂದ ಚಾಲನೆ ಹೊಂಬುಜ : ಅತಿಶಯ ಶ್ರೀಕ್ಷೇತ್ರ ಹೊಂಬುಜ ಜೈನ ಮಠದಲ್ಲಿ ಪರಂಪರಾನುಗತವಾಗಿ ನಡೆದು ಬಂದಿರುವ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿ ಹಾಗೂ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ಮಹಾರಥೋತ್ಸಕ್ಕೆ 2023ರ ಮಾರ್ಚ್ 12ರ ಭಾನುವಾರ ಬೆಳಿಗ್ಗೆ ಧ್ವಜಾರೋಹಣ ಮಾಡುವುದರ ಮೂಲಕ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮಿಗಳವರು ಚಾಲನೆ ನೀಡಿದರು. ಸಂಜೆ ನಾಗವಾಹನ ಉತ್ಸವವು ಜರುಗಿತು. ಈ ಎಲ್ಲಾ ಪೂಜಾ ಹಾಗೂ ಉತ್ಸವಗಳಲ್ಲಿ ಧರ್ಮ ಬಾಂಧವರು ಪಾಲ್ಗೊಂಡಿದ್ದರು….

Read More

ಆವಿನಹಳ್ಳಿ ಸಮೀಪದಲ್ಲಿ ರಸ್ತೆ ಅಪಘಾತ – ಗಂಡು ಕಾಡುಕೋಣ ಸಾವು|accident

ರಸ್ತೆ ಅಪಘಾತದಲ್ಲಿ ಕಾಡುಕೋಣ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರದ ಹೊರವಲಯದಲ್ಲಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ. ಸಾಗರ ಮತ್ತು ಹೊಸನಗರದ ಸುತ್ತಮುತ್ತ ಕಾಡು ಕೋಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಕಾಡುಕೋಣಗಳ ವಲಯವಾಗಿದ್ದರಿಂದ ವಾಹನಗಳಿಗೆ ಸಿಲುಕಿ ಕಾಡು ಪ್ರಾಣಿಗಳು ಸಾವನ್ನಪ್ಪುತ್ತಿರುವ ಘಟನೆ ಹೆಚ್ಚುತಿದೆ. ಸಾಗರ ಮತ್ತು ಸಿಗಂದೂರು ರಸ್ತೆಯಲ್ಲಿ ಸುಮಾರು 5 ವರ್ಷದ ಗಂಡು ಕಾಡುಕೋಣ ರಕ್ತ ಕಾರಿಕೊಂಡು ರಸ್ತೆಯ ಬಲಭಾಗಕ್ಕೆ ಬಿದ್ದಿದೆ. ಲಾರಿ ಅಥವಾ ದೊಡ್ಡ ವಾಹನಗಳೇ ಈ ಕಾಡು ಪ್ರಾಣಿಯ ಸಾವಿಗೆ ಕಾರಣವಿರಬಹುದು ಎಂದು ಅಂದಾಜಿಸಲಾಗಿದೆ. ಆವಿನಹಳ್ಳಿ…

Read More

ಅಕ್ರಮ ಮರಳು ಸಾಗಾಣಿಕೆ – 3 ಟಿಪ್ಪರ್ ಲಾರಿ ವಶ|

ಶಿವಮೊಗ್ಗ ಜಿಲ್ಲೆಯ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ವಿಚಾರದಲ್ಲಿ ಮೂರು ಸುಮೋಟೋ ಪ್ರಕರಣ ದಾಖಲಾಗಿವೆ. ಮೂರು ಅಕ್ರಮ ಮರಳು ಪ್ರಕರಣದಲ್ಲಿ ಒಂದೇ ರೀತಿಯ ಪವಾಡ ನಡೆದಿದ್ದು ಜಗತ್ತೆ ಬೆಚ್ಚಿ ಬೀಳುವಂತಾಗಿದೆ..!!!! ಆ ಪವಾಡ ಏನೆಂದರೇ ಪ್ರತ್ಯೇಕ ಪ್ರಕರಣದಲ್ಲಿ ಅಕ್ರಮವಾಗಿ ಮರಳು ಸಾಗಿಸುತಿದ್ದ ಲಾರಿ ಚಾಲಕರು ಒಂದೇ ಶೈಲಿಯಲ್ಲಿ ಪೊಲೀಸರಿದ್ದ ಸ್ಥಳದಿಂದ ಅಣತಿ ದೂರದಲ್ಲಿ ಲಾರಿ ನಿಲ್ಲಿಸಿ ಪರಾರಿಯಾಗಿದ್ದು ಕನ್ನಡದ ಎಸ್ಪಿ ಭಾರ್ಗವಿ ಚಿತ್ರದ ಹಾಡೊಂದನ್ನು ನೆನಪಿಸುವಂತಿದೆ.. ಘಟನೆ 1: ಸಾಗರ ಗ್ರಾಮಾಂತರ ಯಲಗಳಲೆಯ ಬಿಕೆ…

Read More
Exit mobile version