ಶಿವಮೊಗ್ಗ ಜಿಲ್ಲೆಯ ಸಾಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆ ವಿಚಾರದಲ್ಲಿ ಮೂರು ಸುಮೋಟೋ ಪ್ರಕರಣ ದಾಖಲಾಗಿವೆ.
ಮೂರು ಅಕ್ರಮ ಮರಳು ಪ್ರಕರಣದಲ್ಲಿ ಒಂದೇ ರೀತಿಯ ಪವಾಡ ನಡೆದಿದ್ದು ಜಗತ್ತೆ ಬೆಚ್ಚಿ ಬೀಳುವಂತಾಗಿದೆ..!!!! ಆ ಪವಾಡ ಏನೆಂದರೇ ಪ್ರತ್ಯೇಕ ಪ್ರಕರಣದಲ್ಲಿ ಅಕ್ರಮವಾಗಿ ಮರಳು ಸಾಗಿಸುತಿದ್ದ ಲಾರಿ ಚಾಲಕರು ಒಂದೇ ಶೈಲಿಯಲ್ಲಿ ಪೊಲೀಸರಿದ್ದ ಸ್ಥಳದಿಂದ ಅಣತಿ ದೂರದಲ್ಲಿ ಲಾರಿ ನಿಲ್ಲಿಸಿ ಪರಾರಿಯಾಗಿದ್ದು ಕನ್ನಡದ ಎಸ್ಪಿ ಭಾರ್ಗವಿ ಚಿತ್ರದ ಹಾಡೊಂದನ್ನು ನೆನಪಿಸುವಂತಿದೆ..
ಘಟನೆ 1:
ಸಾಗರ ಗ್ರಾಮಾಂತರ ಯಲಗಳಲೆಯ ಬಿಕೆ ರಸ್ತೆಯಲ್ಲಿ ಪೊಲೀಸ್ ತಪಾಸಣೆ ನಡೆಯುವಾಗ ಟ್ರಿಪ್ಪರ್ ಲಾರಿಯ ಚಾಲಕ ದೂರದಲ್ಲಿ ನಿಲ್ಲಿಸಿ ಪರಾರಿಯಾಗಿದ್ದು ಲಾರಿ ಸಮೇತ ಸೀಜ್ ಮಾಡಲಾಗಿದೆ. ಯಾವುದೇ ಪರವಾನಗಿ ಇಲ್ಲದೆ ಸಾಗಾಣಿಕೆ ಮಾಡುತ್ತಿರುವ ಲಾರಿಯಾಗಿದ್ದು ವಶಕ್ಕೆ ಪಡೆಯಲಾಗಿದೆ.
ಘಟನೆ 2 :
ಅದರಂತೆ ಮತ್ತೊಂದು ಲಾರಿ ಅಮಟೇಕೊಪ್ಪದಿಂದ ಸಾಗರದ ಕಡೆ ಹೋಗುವ ಯಲಗಳಲೆ ರಸ್ತೆಯ ಬಿಕೆ ರಸ್ತೆಯಲ್ಲೇ ಮತ್ತೊಂದು ಲಾರಿ ಚಾಲಕನು ಪೊಲೀಸರನ್ನ ಕಂಡು ಪರಾರಿಯಾಗಿದ್ದಾನೆ. ತಪಾಸಣೆ ನಡೆಸಿದಾಗ 200 ಅಡಿ ಮರಳನ್ನ ಲಾರಿಯಲ್ಲಿದ್ದುದ್ದರಿಂದ ಲಾರಿ ಮತ್ತು ಮರಳನ್ನು ವಶ ಪಡಿಸಿಕೊಳ್ಳಲಾಗಿದೆ.
ಘಟನೆ 3 :
ಆವಿನಹಳ್ಳಿ ಇಕ್ಕೇರಿಯಲ್ಲಿ ಪೊಲೀಸ್ ದಾಳಿ ನಡೆಸಿದ್ದು ದಾಳಿಯಲ್ಲಿ ಮತ್ತೆ ಚಾಲಕ ಪರಾರಿಯಾಗಿದ್ದಾನೆ 200 ಅಡಿ ಮರಳು ತುಂಬಿದ ಲಾರಿ ಸಮೇತ ವಶಕ್ಕೆ ಪಡಯಲಾಗಿದೆ. ಮೂರು ದಾಳಿಯಲ್ಲಿಯೂ ಚಾಲಕ ಪರಾರಿಯಾಗಿರುವುದು ಮೂರೂ ಘಟನೆಯಲ್ಲಿ ವಿಶೇಷವಾಗಿದೆ.
ನಾನು ಪೋಸ್ಟ್ ಮ್ಯಾನ್ ನ್ಯೂಸ್ ಮಾದ್ಯಮದ ಹಿಂದೆ ಇರುವ ಒಬ್ಬ ಸ್ಥಳೀಯ ಸುದ್ದಿಪ್ರೇಮಿ ಪತ್ರಕರ್ತ. ಕಳೆದ ಐದು ವರ್ಷಗಳಿಂದ ಒಂದು ಕನಸನ್ನು ಜೀವಂತವಾಗಿಟ್ಟಿದ್ದೇನೆ — ನಮ್ಮೂರ ಸುದ್ದಿಗಳು ಲೋಕದವರೆಗೆ ತಲುಪಬೇಕು ಎಂಬದು.
ಸ್ಥಳೀಯ ಪತ್ರಿಕೆಗಳಿಂದ ಆರಂಭಿಸಿ, ರಾಜ್ಯಮಟ್ಟದ ನ್ಯೂಸ್ ಚಾನೆಲ್ಗಳ ಬೆಂಗಳೂರು ಕಚೇರಿಯವರೆಗೆ ಮಾಧ್ಯಮದ ಎಲ್ಲಾ ಹಂತಗಳಲ್ಲಿ ಕೆಲಸ ಮಾಡಿದ ಅನುಭವ ನನ್ನದಾಗಿದೆ. ಆದರೆ ಅಲ್ಲಿ ಒಂದು ಖಾಲಿ ಅನಿಸಿತು — ನಿಜವಾದ ಸ್ಥಳೀಯ ಧ್ವನಿಗೆ ವೇದಿಕೆ ಇಲ್ಲ. ಅದಕ್ಕೆ ಪರ್ಯಾಯವಾಗಿ ಹುಟ್ಟಿತು “ಪೋಸ್ಟ್ ಮ್ಯಾನ್ ನ್ಯೂಸ್.”
ಇಲ್ಲಿ ಸುದ್ದಿ ಅಂದ್ರೆ ಸುದ್ದಿ ಮಾತ್ರ. ಯಾರ ಪರವೂ ಅಲ್ಲ, ಯಾವ ಪಕ್ಷದ ಪರವೂ ಅಲ್ಲ. ನನ್ನ ನಿಲುವು ಸ್ಪಷ್ಟ — ಸುದ್ದಿ ಹೇಳಬೇಕು, ತೀರ್ಪು ಕೊಡಬಾರದು. ಕೆಲವೊಮ್ಮೆ ಓದುಗರ ಪ್ರತಿಕ್ರಿಯೆಗಳು ಬೇರೆ ಬಣ್ಣ ತೊಡುತ್ತವೆ, ಆದರೆ ನನ್ನ ಪ್ರತಿಕ್ರಿಯೆ ಕೆಲಸದ ಮೂಲಕವೇ.
ಪೋಸ್ಟ್ ಮ್ಯಾನ್ ನ್ಯೂಸ್ ಇಂದು ಕೇವಲ ಒಂದು ಪೇಜ್ ಅಲ್ಲ, ಅದು ಒಂದು ಚಳವಳಿಯಾಗಿದೆ — ಪೋಸ್ಟ್ ಮ್ಯಾನ್ ನ್ಯೂಸ್ನ ಉದ್ದೇಶ ಕೇವಲ ವರದಿ ಮಾಡುವುದು ಅಲ್ಲ; ನಮ್ಮೂರ ಘಟನೆಗಳು, ಪ್ರತಿಭೆಗಳು, ಸಮಸ್ಯೆಗಳು, ಸಾಧನೆಗಳು — ಇವುಗಳನ್ನು ಹೊರಲೋಕಕ್ಕೆ ತಲುಪಿಸುವ ಸೇತುವೆಯಾಗಿರಬೇಕು. ಹಣ ಪಡೆದು ಸುದ್ದಿ ಮಾಡುವ ಅಭ್ಯಾಸವೂ ಇಲ್ಲ, ಹವ್ಯಾಸವೂ ಇಲ್ಲ.
ಮುಂದಿನ ಹಂತದಲ್ಲಿ ನಾವು ಔಟ್ಸೋರ್ಸ್ ವ್ಯವಸ್ಥೆ ಮೂಲಕ ಸ್ಥಳೀಯ ವರದಿಗಾರರನ್ನು, ಕಥೆಗಾರರನ್ನು ಸೇರಿಸಿಕೊಂಡು ಈ ವೇದಿಕೆಯನ್ನು ಇನ್ನಷ್ಟು ಜೀವಂತಗೊಳಿಸುವ ಉದ್ದೇಶದಲ್ಲಿದ್ದೇವೆ.
ನಮ್ಮ ಗುರಿ ಒಂದೇ — ಸಣ್ಣ ಊರುಗಳ ಸತ್ಯ ಕತೆಗಳು ದೊಡ್ಡ ಮಟ್ಟದಲ್ಲಿ ಲೋಕದ ಕಿವಿಗೆ ತಲುಪಬೇಕು.
– ರಫ಼ಿ ರಿಪ್ಪನ್ ಪೇಟೆ
ಸಂಪಾದಕರು , ಪೋಸ್ಟ್ ಮ್ಯಾನ್ ನ್ಯೂಸ್