ರಿಪ್ಪನ್‌ಪೇಟೆ: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಮಾ.19ರಂದು ಬೆಳಿಗ್ಗೆ 10.30ಕ್ಕೆ ಸಹಕಾರ ಸಂಘದ ಆಡಳಿತ ಸಂಕೀರ್ಣ ಕಟ್ಟಡ ಮತ್ತು ಬಹುಸೇವಾ ವಾಣಿಜ್ಯ ಗೋದಾಮು ಉದ್ಘಾಟನೆ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಹೊಸನಗರ ತಾಲೂಕು ಶಾಖೆ ವತಿಯಿಂದ ಜಿಲ್ಲಾ ಮಟ್ಟದ ನಾಲ್ಕನೇ ಜಾನಪದ ಸಮ್ಮೇಳನ ಆಯೋಜಿಸಲಾಗಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ತಾಲೂಕ್ ಜಾನಪದ ಪರಿಷತ್ತು ಅಧ್ಯಕ್ಷ ಎಂ.ಎಂ. ಪರಮೇಶ್ ತಿಳಿಸಿದರು.
ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೃಷಿಗೂ ಮತ್ತು ಜಾನಪದಕ್ಕೂ ಪರಸ್ಪರ ಸಂಬಂಧವಿದೆ. ಹೀಗಾಗಿ ಸಹಕಾರ ಸಂಘದ ಕಟ್ಟಡಗಳ ಉದ್ಘಾಟನೆ ಮತ್ತ ಜಾನಪದ ಸಮ್ಮೇಳನ ಈ ಎರಡನ್ನೂ ಜೋಡಿಸಿಕೊಂಡ ಒಂದು ಮಾದರೀ ಕಾರ್ಯಕ್ರಮವನ್ನು ನಾವು ನೀಡುತ್ತಿದ್ದೇವೆ ಎಂದರು.
ಸಹಕಾರ ಸಂಘದ ಆವರಣದಲ್ಲಿ ಸುಮಾರು 2ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಸಂಘದ ಆಡಳಿತ ಸಂಕೀರ್ಣ ಕಟ್ಟಡ, ಸುಮಾರು 85 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಬಹುಸೇವಾ ವಾಣಿಜ್ಯ ಗೋದಾಮು ಕಟ್ಟಡದ ಉದ್ಘಾಟನಾ ಸಮಾರಂಭ ಬೆಳಿಗ್ಗೆ 10-30ಕ್ಕೆ ನಡೆಯಲಿದೆ. ಸಭಾ ಕಾರ್ಯಕ್ರಮ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಸಭಾಭವನದಲ್ಲಿ ನಡೆಯಲಿದೆ ಎಂದರು.
ಆಡಳಿತ ಸಂಕೀರ್ಣದ ವಿವಿಧ ವಿಭಾಗದ ಕಟ್ಟಡಗಳನ್ನು,
ಗೃಹ ಸಚಿವ ಆರಗ ಜ್ಞಾನೇಂದ್ರ, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಎಸ್.ಎಲ್. ಭೋಜೇಗೌಡ, ವಿಧಾನ ಸಭಾ ಮಾಜಿ ಅಧ್ಯಕ್ಷ ಕಾಗೋಡು ತಿಮ್ಮಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥ ಗೌಡ, ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಲಿದ್ದಾರೆ ಎಂದ ಅವರು, ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಡಿ ಮಂಜುನಾಥ್ ಸಹಕಾರಿ ಸಂಘದ ಪದಾಧಿಕಾರಿಗಳು ನಬಾರ್ಡ್ ಅಧಿಕಾರಿಗಳು, ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು, ಜಿಲ್ಲಾ ಸಹಕಾರಿ ಯೂನಿಯನ್ ನ ಪದಾಧಿಕಾರಿಗಳು ಭಾಗವಹಿಸುವರು ಎಂದರು.
ಜಾನಪದ ಸಮ್ಮೇಳನವು ಜಿಲ್ಲೆಯಲ್ಲಿ ನಾಲ್ಕನೆಯ ಸಮ್ಮೇಳನವಾಗಿದ್ದು. ಇದರ ಅಂಗವಾಗಿ ರಿಪ್ಪನ್‌ಪೇಟೆಯ ಜೆಎಸ್‌ಬಿ ಕಲ್ಯಾಣ ಮಂದಿರದಿಂದ ಬೆಳಿಗ್ಗೆ 9-30ಕ್ಕೆ ವಿವಿಧ ಕಲಾತಂಡಗಳ ಜಾನಪದ ನಡಿಗೆಯನ್ನು ಆಯೋಜಿಸಿದ್ದು, ರಿಪ್ಪನ್‌ಪೇಟೆಯ ಸಹಕಾರ ಸಂಘದ ಉಪಾಧ್ಯಕ್ಷ ಎನ್.ಪಿ. ರಾಜು ಇದಕ್ಕೆ ಚಾಲನೆ ನೀಡುವರು. ಸಮ್ಮೇಳನಾಧ್ಯಕ್ಷರಾಗಿ ಹಿರಿಯ ಜಾನಪದ ಕಲಾವಿದ ಆಂಜನೇಯ ಜೋಗಿ ಅವರು ಉಪಸ್ಥಿತರಿರುತ್ತಾರೆ. ಜಾನಪದ ಕಲೆ ಉಳಿಸಿ ಬೆಳೆಸುವ ಬಗ್ಗೆ ವಿವಿಧ ಕಲೆಗಳ ಬಗ್ಗೆ ವಿದ್ವಾಂಸರುಗಳು ಮಾತನಾಡುವರು ಎಂದರು.
ದೇವಿ ಕುಣಿತ, ಸುಗ್ಗಿ ಕುಣಿತ, ತತ್ವಪದ, ಜೋಗಿ, ಗೀಗೀ, ಚೌಡಿಕೆ, ಬೀಸುವ, ಕುಟ್ಟುವ ಪದ, ವೀರಗಾಸೆ, ಡೊಳ್ಳು ಸೇರಿದಂತೆ ಸುಮಾತು 21 ಕಲಾ ಪ್ರಕಾರಗಳ ತಂಡಗಳು ಇದರಲ್ಲಿ ಭಾಗವಹಿಸುತ್ತವೆ. ಇಡೀ ದಿನ ಜಾನಪದ ಸಂಭ್ರಮ ನಡೆಯುತ್ತದೆ. ಜಿಲ್ಲೆಯ ಹಲವು ಕಲಾತಂಡಗಳು ಇದರಲ್ಲಿ ಭಾಗವಹಿಸುತ್ತಾರೆ. ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಜಾನಪದ ತಜ್ಞ ಪ್ರೊ ಹಿ.ಶಿ. ರಾಮಚಂದ್ರ ಗೌಡರು ಹಾಗೂ ಹಿರಿಯ ಸಾಹಿತಿ ಡಾ. ಶಾಂತರಾಮ ಪ್ರಭು ಭಾಗವಹಿಸುತ್ತಾರೆ ಎಂದರು.
ರಿಪ್ಪನ್‌ಪೇಟೆ ಪ್ರಾಥಮಿಕ ಪತ್ತಿನ ಸಹಕಾರ ಸಂಘ ಕಿರು ಪರಿಚಯ :
ರಿಪ್ಪನ್‌ಪೇಟೆ ಪ್ರಾಥಮಿಕ ಪತ್ತಿನ ಸಹಕಾರ ಸಂಘ 1914ರಂದು ಸ್ಥಾಪನೆಗೊಂಡಿದ್ದು ಹಲವಾರು ಏಳುಬೀಳುಗಳ ನಡುವೆ ಯಶಸ್ವಿಯಾಗಿ 109 ವರ್ಷಗಳನ್ನು ಪೂರೈಸಿದ್ದು, ರೈತ ಸದಸ್ಯರುಗಳಿಗೆ ಹಾಗೂ ಗ್ರಾಹಕರಿಗೆ ಅನುಕೂಲಕ್ಕೆ ಕಾಲಕಾಲಕ್ಕೆ ರಾಸಾಯನಿಕ ಗೊಬ್ಬರ, ಗೊಬ್ಬರ, ಕ್ರಿಮಿನಾಶಕ ಸರ್ಕಾರದ ಪಡಿತರ ಧಾನ್ಯಗಳ ವಿತರಣೆ ಹಾಗೂ ರೈತರಿಗೆ ಕೃಷಿ ಸಾಲ, ವ್ಯಾಪಾರಸ್ಥರಿಗೆ ಸಾಲ ವಿತರಿಸುತ್ತಾ ಬಂದಿರುತ್ತೇವೆ. ಕೃಷಿ ಸಾಲ 9,75,00,000/- ರೂಗಳು ಹಾಗೂ ಕೃಷಿಯೇತರ ಸಾಲ 460,00,000/-ರೂಗಳನ್ನು ವಿತರಿಸಿರುತ್ತೇವೆ. ಹಾಗೂ ರೂ. 6 ಕೋಟಿ ಲಕ್ಷಗಳ ಠೇವಣಿಯನ್ನು ಸಂಗ್ರ 2 ಕೋಟಿ 10 ಲಕ್ಷಗಳನ್ನು ಬ್ಯಾಂಕಿನಲ್ಲಿ ಠೇವಣಿ ತೊಡಗಿಸಿರುತ್ತೇವೆ. ಆಪದ್ಧನ ನಿಧಿ- 70,56,000 ಕ 6,58000 ರೂ.ಗಳನ್ನು ಹೊಂದಿದ್ದು, ನಮ್ಮ ಸಂಘವು ಈಗ ವಾರ್ಷಿಕ 50ಕೋಟಿ ವ್ಯವಹಾರ ವಹಿವಾಟು . ಒಟ್ಟು 3600ಸದಸ್ಯರನ್ನು ಹೊಂದಿರುತ್ತದೆ.
ಈ ಸಂಘವು ಬಹಳ ಹಿಂದಿನಿಂದಲೂ ನಷ್ಟದಲ್ಲಿ ಬಂದಿದ್ದು 2009-10 ರಿಂದ ಲಾಭದತ್ತ ನಡೆಯುತ್ತಾ ಬಂದಿದೆ ಸಂಘವು ಕಳೆದ ಸಾಲಿನಲ್ಲಿ 25,50,47 ಲಾಭ ಗಳಿಸಿರುತ್ತದೆ. ಸಂಘದ ಕಛೇರಿ ಕಟ್ಟಡವು ಬಹಳ ಶಿಥಿಲಗೊಂಡಿದ್ದು ಅದನ್ನು ತೆರವುಗೊಳಿಸಿ ಅಂದಾಜು ರೂ. 2 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿದ್ದು ಕಾಮಗಾರಿ ಪ್ರಗತಿಯಲ್ಲಿದೆ. ಇದುವರೆಗೆ ಈ ಕಟ್ಟಡಕ್ಕೆ ಸಾಲ ಪಡೆದಿರುವುದಿಲ್ಲ ಮತ್ತು ರೈತರಿಗೆ ಇನ್ನೂ ಹೆಚ್ಚಿನ ಸೇವೆ ಸಲ್ಲಿಸಲು ನಬಾರ್ಡ್ ಯೋಜನೆಯಲ್ಲಿ ನಿರ್ಮಿಸಿದ ಬಹು ಸೇವಾ ವಾಣಿಜ್ಯ ಗೋದಾಮನ್ನು ರೂ. 85 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ.
1999 ರಲ್ಲಿ ರಿಪ್ಪನ್‌ಪೇಟೆ ಪ್ರಾಥಮಿಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ ಎಂ ಪರಮೇಶ್ ಆಯ್ಕೆಯಾದ ಮೇಲೆ ಈ ಸಂಘದ ಸುವರ್ಣ ಯುಗ ಪ್ರಾರಂಭವಾಯಿತು ಎನ್ನಬಹುದು 109 ವರ್ಷ ಇತಿಹಾಸವಿದ್ದ ಈ ಸಂಘವನ್ನು ಲಾಭದತ್ತ ಕೊಂಡೊಯ್ಯುವಲ್ಲಿ ಸತತ 24 ವರ್ಷ ಸಂಘದ ಅಧ್ಯಕ್ಷರಾಗಿರುವ ಎಂ ಎಂ ಪರಮೇಶ್ ಸಫಲರಾಗಿದ್ದು.ಆ ನಿಟ್ಟಿನಲ್ಲಿ ಹಲವಾರು ಬದಲಾವಣೆಗಳನ್ನು ತಂದು ರೈತರಿಗೆ ಅನೂಕೂಲವಾಗುವಂತಹ ನಿರ್ಣಯ ತೆಗೆದುಕೊಳ್ಳುವ ಮೂಲಕ ಎಂ ಎಂ ಪರಮೇಶ್ ಈ ಪ್ರಾಥಮಿಕ ಪತ್ತಿನ ಸಹಕಾರ ಸಂಘವನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುತಿದ್ದಾರೆ.