Headlines

ನಾನು ಗುಳಿಗ ದೈವದ ಬಗ್ಗೆ ಕೀಳಾಗಿ ಮಾತನಾಡಿಲ್ಲ – ಇದೆಲ್ಲಾ ಕಾಂಗ್ರೆಸ್ ಪಕ್ಷದ ಕಪೋಕಲ್ಪಿತ ಕಥೆ : ಆರಗ ಜ್ಞಾನೇಂದ್ರ|ARAGA

ಕರಾವಳಿಯ ಆರಾಧ್ಯ ದೈವ ಗುಳಿಗದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಅಪಮಾನ ಮಾಡಿದ್ದಾರೆಂಬ ವಿಚಾರದ ಬಗ್ಗೆ ಭಾರೀ ಟೀಕೆ ಎದುರಾಗುತ್ತಿದೆ. ಈ ಬಗ್ಗೆ ಸ್ವತಃ ಸಚಿವರೇ ಪ್ರತಿಕ್ರಿಯೆ ನೀಡಿದ್ದಾರೆ.




ನನಗೆ ಗುಳಿಗ, ಪಂಜುರ್ಲಿ ಕುರಿತು ಗೌರವ ಭಕ್ತಿಯಿದೆ. ನಿನ್ನೆ ಕೂಡ ಒಂದು ಕಾರ್ಯಕ್ರಮಕ್ಕೆ ಹೋಗಿ ಬಂದಿದ್ದೇನೆ. ಯಾರಿಗೆ ಈ ದೈವದ ಬಗ್ಗೆ ನಂಬಿಕೆಯಿಲ್ಲ, ವಿಶ್ವಾಸ ಇಲ್ಲ, ಮೂಢನಂಬಿಕೆ ಎಂದು ಹೇಳಿಕೊಂಡು ತಿರುಗಾಡುತ್ತಿದ್ದವರು ನಿನ್ನೆ ತೀರ್ಥಹಳ್ಳಿಯಲ್ಲಿ ನಾಟಕವಾಡಿಸಿದ್ದಾರೆ. ಚುನಾವಣೆ ಸಮಯದಲ್ಲಿ ಜನರ ಭಾವನೆಗಳನ್ನು ರಾಜಕಾರಣಕ್ಕೆ ಕಾಂಗ್ರೆಸ್ ದುರುಪಯೋಗ ಮಾಡಿದ್ದಾರೆ ಎಂದು ನಾನು ಹೇಳಿದ್ದು” ಎಂದಿದ್ದಾರೆ.




ನಾನು ಎಲ್ಲಿಯೂ ಗುಳಿಗದ ಬಗ್ಗೆ ಟೀಕೆ ಮಾಡಿಲ್ಲ. ಗುಳಿಗ ಬೋರ್ಡ್ ಹಾಕಿಕೊಂಡು ಜನರ ಶ್ರದ್ಧೆ ಕಾಂಗ್ರೆಸ್ ದುರುಪಯೋಗ ಮಾಡಿಕೊಂಡಿದೆ ಎನ್ನುವ ಹಿನ್ನಲೆಯಲ್ಲಿ ನಾನು ಹೇಳಿದ್ದೆ” ಎಂದು ಆರಗ ಜ್ಞಾನೇಂದ್ರ ಸ್ಪಷ್ಟನೆ ನೀಡಿದ್ದಾರೆ.



About The Author

Leave a Reply

Your email address will not be published. Required fields are marked *

Exit mobile version