ರಂಜಾನ್ ಮಾಸದ ಚಂದ್ರ ದರ್ಶನವಾದ ಹಿನ್ನೆಲೆ ನಾಳೆಯಿಂದ ಕೇರಳ ಮತ್ತು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರಂಜಾನ್ ಉಪವಾಸ ಆರಂಭವಾಗಲಿದೆ.
ಇಂದು ರಂಝಾನ್ ತಿಂಗಳ ಚಂದ್ರ ದರ್ಶನ ವಾಗಿರುವುದರಿಂದ ಮಾರ್ಚ್ 23 (ಗುರುವಾರ) ರಂದು ರಂಝಾನ್ ಉಪವಾಸ ವ್ರತ ಪ್ರಾರಂಭವಾಗುತ್ತದೆ, ಮುಸ್ಲಿಮರ ಪವಿತ್ರ ರಮಝಾನ್ ಉಪವಾಸ ತಿಂಗಳ ಪ್ರಥಮ ಚಂದ್ರದರ್ಶನವು ಇಂದು ಕೇರಳದ ಕಲ್ಲಿಕೋಟೆಯ ಕಾಪಾಡ್ ಎಂಬಲ್ಲಿ ಆಗಿದೆ.
ಈ ಹಿನ್ನೆಲೆಯಲ್ಲಿ ಗುರುವಾರದಿಂದ ರಂಝಾನ್ ಉಪವಾಸ ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಪರವಾಗಿ ಕೇಂದ್ರ ಜುಮಾ ಮಸೀದಿಯ ಖತೀಬ್ ಹಾಜಿ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ ಮತ್ತು ಉಡುಪಿ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳ ಸಂಯುಕ್ತ ಖಾಝಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಹಾಗೂ ಉಳ್ಳಾಲ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಹಾಗೂ ಭಟ್ಕಳ ಚಂದ್ರದರ್ಶನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ರಿಪ್ಪನ್ಪೇಟೆ , ಹೊಸನಗರ ,ಕೋಣಂದೂರು ,ತೀರ್ಥಹಳ್ಳಿ ಪಟ್ಟಣಗಳಲ್ಲಿ ಇಂದಿನಿಂದ 30 ದಿನಗಳ ರಮಳಾನ್ ಉಪವಾಸ ವ್ರತ ಪ್ರಾರಂಭವಾಗಿದೆ.